Ad image

ರಾಘವ ಕಲಾಮಂದಿರಕ್ಕೆ ಕನುಗೋಲು ತಿಮ್ಮಪ್ಪರವರ ಸೇವೆ ಅಪಾರ  

Vijayanagara Vani
ರಾಘವ ಕಲಾಮಂದಿರಕ್ಕೆ ಕನುಗೋಲು ತಿಮ್ಮಪ್ಪರವರ ಸೇವೆ ಅಪಾರ   

ಬಳ್ಳಾರಿ ಮೇ 23 ರಾಘವ ಕಲಾಮಂದಿರದಲ್ಲಿ, ರಾಘವ ಮೆಮೋರಿಯಲ್ ಅಸೋಸಿಯೇಷನ್, ವತಿಯಿಂದ   ಕಾಕರ್ಲತೋಟ ಕನುಗೋಲು ತಿಮ್ಮಪ್ಪ ರವರ 24ನೇ ವಾರ್ಷಿಕ ಪುಣ್ಯ ತಿಥಿ ಕಾರ್ಯಕ್ರಮವನ್ನು ಸಂಸ್ಥೆಯ ಪದಾಧಿಕಾರಿಗಳು ಮತ್ತು ಕನುಗೋಲು ತಿಮ್ಮಪ್ಪ ರವರ ಕುಟುಂಬದವರು ಸೇರಿ ಜ್ಯೋತಿ ಬೆಳಗಿಸಿ, ಪುಷ್ಪಾಂಜಲಿ ಅರ್ಪಿಸುವ ಮೂಲಕ ಉದ್ಘಾಟಿಸಿದರು. ಕಾಕರ್ಲತೋಟ ಕನುಗೋಲು ತಿಮ್ಮಪ್ಪರವರ 24ನೇ ವಾರ್ಷಿಕ ಪುಣ್ಯ ತಿಥಿ ಕಾರ್ಯಕ್ರಮದ ನಿಮಿತ್ತ ನಿವೃತ್ತ ಉಪನ್ಯಾಸಕರು ಹಾಗೂ ಸಂಸ್ಥೆಯ ಕಾರ್ಯಕಾರಿಣಿ ಸದಸ್ಯರಾದ ಎನ್.ಬಸವರಾಜ್ ರವರು ಮಾತನಾಡಿ ಬಳ್ಳಾರಿಯ ಕಾಕರ್ಲತೋಟ ಗ್ರಾಮದಲ್ಲಿ 07 ,05,1903 ರರಲ್ಲಿ ದೊಡ್ಡ ವೀರಪ್ಪ ರವರ ಮಗನಾಗಿ ಜನಿಸಿದರು.ಮುಂದೆ ಬೆಳೆದು ವ್ಯಾಪಾರವನ್ನು ಪ್ರಾರಂಭಿಸಿ ಉತ್ತಮ ವ್ಯಾಪಾರಿಗಳಾಗಿದ್ದರು ಬಳ್ಳಾರಿ ಮುನ್ಸಿಪಾಲಿಟಿ ಚುನಾವಣೆಯಲ್ಲಿ ಗೆದ್ದು ಕೌನ್ಸಿಲರ್ ಆಗಿ ನಗರಕ್ಕೆ ಸೇವೆ ಸಲ್ಲಿಸಿದರು. ಕಂಪ್ಲಿ ಸಕ್ಕರೆ ಕಾರ್ಖಾನೆಗೆ ಹಾಗೂ ಬಳ್ಳಾರಿ ಜನತಾ ಬಜಾರ್ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿದರು.ರಾಜಕೀಯದಲ್ಲಿ ಬೆಳೆದು ಜನತಾ ಪಕ್ಷದ ಅಧ್ಯಕ್ಷರಾಗಿ ಸೇವೆ ಬಳ್ಳಾರಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾಗಿ ಎಲ್ಲರ ಸಹಕಾರದಿಂದ ಸಂಸ್ಥೆಗೆ ನೂತನ ಕಟ್ಟಡ ನಿರ್ಮಿಸಿದರು. ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷ ರಾಗಿ ಸ್ವಂತ ಕಲಾವಿದಾರಾಗಿ ಕನ್ನಡ ಹಾಗೂ ತೆಲುಗು ನಾಟಕ ಗಳನ್ನು ಪ್ರೋತ್ಸಾಹಿಸಿ ಉತ್ತಮ ಕಲಾವಿದರನ್ನು ಸನ್ಮಾನಿಸಿ ಗೌರವಿಸಿದರು. ಬಳ್ಳಾರಿ ರಾಘವರ ಶತ ಜಯಂತಿ ಉತ್ಸವನ್ನು ವಿಜೃಂಭಣೆಯಿಂದ ಆಚರಿಸಿದರು.ಉಕ್ಕಿನ ಮನುಷ್ಯ ನೆಂದು ಖ್ಯಾತರಾಗಿ ಸದಾ ಸನ್ಮಾರ್ಗದಲ್ಲಿ ನಡೆದು ಇತರರಿಗೂ ಮಾರ್ಗದರ್ಶಕರಾಗಿದ್ದರು . ಅವರ ಕೊಡುಗೆ ಅಪಾರವಾಗಿದೆ ಎಂದರು. ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ಚೆಲ್ಲಾ ಅಮರೇಂದ್ರ ನಾಥ ಚೌದರಿ ಅವರು ಕನುಗೋಲು ತಿಮ್ಮಪ್ಪ ನವರ ಸಾಧನೆಯನ್ನು ಸ್ಮರಿಸಿದರು. ನಿರೂಪಣೆಯನ್ನು ಸಂಸ್ಥೆಯ ಗೌರವ ಕಾರ್ಯದರ್ಶಿ ಎನ್ ಪ್ರಕಾಶ್ ನಿರ್ವಹಿಸಿದರು.

- Advertisement -
Ad imageAd image

 ಸಂಸ್ಥೆಯ ಗೌರವಾಧ್ಯಕ್ಷ ಕೆ ಚನ್ನಪ್ಪ, ಉಪಾಧ್ಯಕ್ಷರಳಾದ ಹೆಚ್ ವಿಷ್ಣುವರ್ಧನ್ ರೆಡ್ಡಿ, ರಮೇಶ್ ಗೌಡ ಪಾಟೀಲ್, ಜಂಟಿ ಕಾರ್ಯದರ್ಶಿ ರಾಮಾಂಜನೇಯಲು, ಕೆ.ರಾಮಾಂಜನೇಯಲು, ಕೆ ಕೃಷ್ಣ,ಟಿ.ಜಿ.ವಿಠಲ್,ಜಿ ಪ್ರಭಾಕರ,ಗಾದೆಂ ಗೋಪಾಲಕೃಷ್ಣ,ಕೆ ಶ್ಯಾಮ ಸುಂದರ್,ಕೆ ಪೊಂಪನ ಗೌಡ, ಡಾಕ್ಟರ್ ರಮೇಶ್ ಗೋಪಾಲ, ಕನುಗೋಲು ಅನಿಲ್ ಬಾಬು, ಯಶವಂತ ರಾಜ್,. ಮಂಜುನಾಥ, ಕೆ ಕೃಷ್ಣ,ಶೇಷ ರೆಡ್ಡಿ, ವಿ ರಾಮಚಂದ್ರ,ಎಂ ರಮೇಶ್ ಬಾಬು, ಭೀಮನೇನಿ ಭಾಸ್ಕರ್,ಭೀಮನೇನಿ ಪ್ರಸಾದ್ ,ರಮಣಪ್ಪ ಭಜಂತ್ರಿ ಮತ್ತು ಕನುಗೋಲು ತಿಮ್ಮಪ್ಪ ರವರ ಕುಟುಂಬದವರು,ಕಲಾವಿದರು ಸೇರಿದಂತೆ ಹಲವಾರು ಜನ ಉಪಸ್ಥಿತರಿದ್ದರು

 

Share This Article
error: Content is protected !!
";