Ad image

ಶ್ರೀ ವಾಸವಿ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ

Vijayanagara Vani
ಶ್ರೀ ವಾಸವಿ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ

ಬಳ್ಳಾರಿ 01-11-2025- : ಕರ್ನಾಟ ರಾಜ್ಯೋತ್ಸವದ ಅಂಗವಾಗಿ ನಗರದ ಶ್ರೀ ವಾಸವಿ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು.
ಕುಮಾರಿ ಹರಣಿ ರವರ ಹಚ್ಚೇವು ಕನ್ನಡದ ದೀಪ ಎಂಬ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು,

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಳ್ಳಾರಿಯ ಪುಸಿದ ಇಂಜಿನಿಯರ್, ಪ್ರೇರಣಾದಾಯಕ ಕೆ.ಬಿ. ಸಂಜೀವ ಪ್ರಸಾದ್ ಅವರು ರಾಷ್ಟ್ರಧ್ವಜರೋಹಣ ನೆರವೇರಿಸಿ ಮಾತನಾಡಿದ ಅವರು
ಕರ್ನಾಟಕದ ನವಯುವಕರು ಕನ್ನಡ ನಾಡು ನುಡಿಯ ಶಕ್ತಿ ,ನಾವು ಕನ್ನಡವನ್ನು ಕೇವಲ ಮಾನಾಡುವುದಿಲ್ಲ ಆದರೊಂದಿಗೆ ಬದುಕಬೇಕು. ನಮ್ಮ ಪ್ರತಿಯೊಂದು ಹೆಜ್ಜೆಯಲ್ಲೂ ಕನ್ನಡದ ಅಸ್ತಿತ್ವ ಪ್ರತಿಫಲಿಸಲಿ. ಈ ನಾಡು ಶ್ರೀಮಂತ ಇತಿಹಾಸದ ಧಾರ-ವಿಜಯನಗರ ಸಾಮ್ರಾಜ್ಯದ ವೈಭವ, ಹೊಯ್ಸಳರ ಶಿಲ್ಪಕಲೆ,ಚಾಳುಕ್ಯರ ವಾಸ್ತುಶಿಲ್ಪ, ಹಂಪಿಯ ಕಲ್ಲುಗಗಳಲ್ಲಿ ಮಾತಾನಾಡುವ ಕಲೆ ಇವೆಲ್ಲ ಕನ್ನಡ ನಾಡಿನ ಅಮರವಾಗಿವೆ. ನಮ್ಮ ಕರ್ನಾಟಕ ನಾಡು ಕಾವ್ಯ ಕಲೆ ಮತ್ತು ಸಂಸ್ಕೃತಿಯ ಬೀಡು. ಇದು ನಮ್ಮ ಹೆಮ್ಮೆ ನಮ್ಮ ಅಸ್ತಿತ್ವದ ಸಂಕೇತ, ಕರ್ನಾಟಕದ ಯಕ್ಷಗಾನ,ದಸಾರ ಉತ್ಸವ,ಜನಪದ ಕಲೆ, ಸಂಗೀತ ವಾಸ್ತುಶಿಲ್ಪ -ಇವೆಲ್ಲಾವೂ ಕನ್ನಡದ ಸೊಬಗು ಮತ್ತು ಸಾಂಸ್ಕೃತಿಕ ವೈಭವದ ಜೀವಂತ ಸಾಕ್ಷಿಗಳು.ಈ ಪರಂಪರೆಯ ಪಾವಿತ್ರ್ಯವನ್ನು ಕಾಪಾಡುವುದು ನಮ್ಮ ಕರ್ತವ್ಯ.ನಾವೆಲ್ಲರೂ ಕನ್ನಡದ ಕೀರ್ತಿಯನ್ನು ಕಾಪಾಡಿ,ಅದರ ಗೌರವವನ್ನು ಹೆಚ್ಚಿಸುವ ಶಪಥ ಮಾಡೋಣ. ಕನ್ನಡ ನಾಡಿನ ಶಕ್ತಿ ನಿಮ್ಮಿಂದಲೇ ನಿಮ್ಮ ಶಕ್ತಿ ಕನ್ನಡ ನಾಡಿನಿಂದಲೇ ಬರುತ್ತದೆ.” ಎಂದು ಅವರು ವಿದ್ಯಾರ್ಥಿಗಳಿಗೆ ಪ್ರೇರಣದಾಯಕ ಸಂದೇಶ ನೀಡಿದರು.
10ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಲಾವಣ್ಯ, ತಮ್ಮ ಸ್ಫೂರ್ತಿದಾಯಕ ಭಾಷಣದಲ್ಲಿ “ಕರ್ನಾಟಕ ನಾಡು ಕೇವಲ ನಕ್ಷೆಯಲ್ಲಿರುವ ಒಂದು ಪ್ರದೇಶವಲ್ಲ ಅದು ನಮ್ಮ ಹೃದಯದ ನಾಡಿ ಕನ್ನಡ ನಮ್ಮ ಉಸಿರು,ಅದರ ಸೊಗಸು ನಮ್ಮ ನಗು ಅದರ ಶಕ್ತಿ ನಮ್ಮ ಪ್ರೇರಣೆ. ನಾವು ಎಲ್ಲೆಡೆ ಕನ್ನಡದ ಕೀರ್ತಿಯನ್ನು ಹರಡುವ ನೂತನ ಪೀಳಿಗೆಯಾಗೋಣ,”ಎಂದು ಹೆಳಿದರು,
ಆವರಣವು ಹಬ್ಬದ ಛಾಯೆ ಪಡೆದು ಕಂಗೊಳಿಸುತ್ತಿತ್ತು. ವಿದ್ಯಾರ್ಥಿಗಳು “ಜಯ ಕರ್ನಾಟಕ ಮಾತೆ!” ಎಂಬ ಘೋಷಣೆಯನ್ನು ಕೂಗುತ್ತಾ ಕರ್ನಾಟಕ ರಾಜೋತ್ಸವವನ್ನು ಸಂಭ್ರಮಿಸಿದರು.ಕಾರ್ಯಕ್ರಮದ ಯಶಸ್ಸಿಗೆ ಶಾಲೆಯ ಸಿಬ್ಬಂದಿ, ಪೋಷಕರು ಮತ್ತು ವಿದ್ಯಾರ್ಥಿಗಳ ಸಹಕಾರ ಅಮೂಲ್ಯವಾಗಿ ರಾಷ್ಟ್ರಗೀತೆ ಮತ್ತು ಕನ್ನಡ ನಾಡಿನ ಜಯ ಘೋಷಣೆಯೊಂದಿಗೆ ವಿದ್ಯಾರ್ಥಿಗಳು ಸಂಭ್ರಿಮಿಸಿದರು.

ಈ ಸಂಧರ್ಭದಲ್ಲಿ ಶ್ರೀ ವಾಸವಿ ಎಜುಕೇಷನ್ ಟ್ರಸ್ಟ್ ನ ಮಾಜಿ ಅಧ್ಯಕ್ಷ ರಾದ ಶ್ರೀ ಅಗಡಿ ಗವಿಸಿದ್ಧೇಶ್ವರ ಪ್ರಸಾದ್, ಕಾರ್ಯದರ್ಶಿಗಳಾದ ಶ್ರೀ ಪಿ.ಎನ್. ಸುರೇಶ್,ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ವೀರೇಶ್ ಯು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share This Article
error: Content is protected !!
";