ಪದ್ಮಶ್ರೀ ಪ್ರಶಸ್ತಿ ಕೋಪ್ಪಳ ಜಿಲ್ಲೆಯ ತೊಗಲುಗೊಂಬೆಯಾಟ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರಿಗೆ ಪದ್ಮಶ್ರಿ ಪ್ರಶಸ್ತಿ

Vijayanagara Vani
ಪದ್ಮಶ್ರೀ ಪ್ರಶಸ್ತಿ  ಕೋಪ್ಪಳ ಜಿಲ್ಲೆಯ ತೊಗಲುಗೊಂಬೆಯಾಟ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರಿಗೆ ಪದ್ಮಶ್ರಿ ಪ್ರಶಸ್ತಿ

ಕೊಪ್ಪಳ ಜಿಲ್ಲೆಯ ತೊಗಲುಗೊಂಬೆಯಾಟ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರು 2025ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವುದು ಇಡೀ ನಾಡು ಹೆಮ್ಮೆಪಡುವಂತದ್ದು. ಸರಿಸುಮಾರು 7 ದಶಕಗಳ ಕಾಲ ತೊಗಲುಗೊಂಬೆಯಾಟವನ್ನೇ ಬದುಕಿನ ಹಾದಿಯಾಗಿಸಿಕೊಂಡು, ನೆಲದ ಕಲೆಯನ್ನು ದೇಶ – ವಿದೇಶಗಳಿಗೂ ಪರಿಚಯಿಸಿದ ಹಿರಿಯ ಜೀವ ಭೀಮವ್ವನವರು ಈ ಗೌರವಕ್ಕೆ ಅತ್ಯಂತ ಅರ್ಹರು ಎನ್ನುವುದು ನನ್ನ ಭಾವನೆ.

- Advertisement -
Ad imageAd image

ಪ್ರಶಸ್ತಿ ವಿಜೇತ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಗ್ರಾಮೀಣ ಕಲೆ, ಜಾನಪದ ಸಂಸ್ಕೃತಿಗಳು ಇತಿಹಾಸದ ಪುಟ ಸೇರುತ್ತಿರುವ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಕಲಾಸೇವೆಗೆ ಬದುಕು ಸಮರ್ಪಿಸಿ, ಅದನ್ನು ಜನಮಾನಸದಲ್ಲಿ ಉಳಿಯುವಂತೆ ಮಾಡುತ್ತಿರುವ ಭೀಮವ್ವನವರ ಸೇವೆ – ಸಾಧನೆ ತಲೆಮಾರುಗಳಿಗೆ ಪ್ರೇರಣೆ.

 

Share This Article
error: Content is protected !!
";