ಸಿರುಗುಪ್ಪ ತಾಲೂಕಿನ ಸಿರಗೇರಿ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದದಿಂದ ಮಂಜುರಾತಿಗೊಂಡ 150000₹( ಒಂದು ಲಕ್ಷ ಐವತ್ತು ಸಾವಿರ )ಮೊತ್ತದ ಡಿ ಡಿ ಯನ್ನು ಶ್ರೀ ಬನಶಂಕರಿ ದೇವಸ್ಥಾನದ ಸಮಿತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕರಾದ ರೋಹಿತಾಕ್ಷ ವಿತರಿಸಿದರು.
ನಂತರ ಮಾತನಾಡಿ ಧಾರ್ಮಿಕ ಶ್ರದ್ಧೆ ಮತ್ತು ಭಕ್ತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಕೊಡುಗೆ ಅನನ್ಯವಾಗಿದ್ದು ಕರ್ನಾಟಕ ರಾಜ್ಯಾದ್ಯಂತ ಧಾರ್ಮಿಕ ಶ್ರದ್ಧೆ ಮತ್ತು ಭಕ್ತಿ ಭಾವ ಆಧ್ಯಾತ್ಮಿಕತೆ ಹೆಚ್ಚಿಸಲು ಹಳೆ ದೇವಸ್ಥಾನ ಜೀರ್ಣೋದ್ಧಾರಕ್ಕೆ ಸಹಾಯ ಹಸ್ತ ಚಾಚುತಿದ್ದು ಈ ವರೆಗೆ ಸಿರಗುಪ್ಪ ತಾಲೂಕಿನ 39 ದೇವಸ್ಥಾನ ಗಳಿಗೆ 54 ಲಕ್ಷ ಮೊತ್ತದ ಸಹಕಾರ ನೀಡಲಾಗಿದೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅತ್ಯಂತ ಸ್ವಚ್ಛ ಪರಿಸರ ಕಾಪಾಡಿದ ಹೆಗ್ಗಳಿಕೆಯು ನಮ್ಮ ಕರ್ನಾಟಕದ ಉಳಿದ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಅನುಷ್ಠಾನವಾಗುವ ಯೋಜನೆ ರೂಪಿಸಿಕೊಂಡು ತಾಲೂಕಿನಲ್ಲಿ 152 ದೇವಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯಕ್ರಮದೊಟ್ಟಿಗೆ ಕಸ ವಿಲೆವರಿಗೆ ಪರಿಕರ ವಿತರಿಸಲಗಿದೆ ಧರ್ಮಸ್ಥಳದ ಮೂಲಕ ಭಜನಾ ಮಂಡಳಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಜನಾ ಕಮ್ಮಟ ಹಾಗೂ ಗ್ರಾಮಗಳಲ್ಲಿರುವ ಭಜನಾ ಮಂಡಳಿಗಳಿಗೆ ಕಟ್ಟಡ ರಚನೆ ಹಾಗೂ ತರಬೇತಿಗೆ ಸಹಕಾರ ನಿಡಲಾಗುತ್ತಿದೆ ಪ್ರತಿ ವರ್ಷ ಕ್ಷೇತ್ರ ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹಗಳು ನಡೆದುಕೊಂಡು ಬರುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿರಿಗಿರಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ದ್ಯಾವಣ್ಣ ಒಳಗುಂದಿ,ಉಪಾಧ್ಯಕ್ಷರಾದ ಶ್ರೀಮತಿ ರಾಜಮ್ಮ ಹುಲಗಪ್ಪ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಭೀಮಲಿಂಗಪ್ಪ ಗಣ್ಯರಾದ ಪುನೀತ್ ಮತ್ತು ಶಿವರಾಂ ತಾಲೂಕ ಯೋಜನಾಧಿಕಾರಿ ಸುಧೀರ್ ಹಂಗಳೂರು ಮೇಲ್ವಿಚಾರಕರಾದ ಹನುಮಂತಪ್ಪ ಸೇವಾ ಪ್ರತಿನಿಧಿ ಪಾರ್ವತಿ ಶ್ರೀ ಬನಶಂಕರಿ ದೇವಸ್ಥಾನ ಸಮಿತಿಯ ಸದಸ್ಯರು ಗ್ರಾಮ ಗಣ್ಯರು ಪಾಲ್ಗೊಂಡಿದ್ದರು