ಕುಶಾಲನಗರ ಪುರಸಭೆ; ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನ

Vijayanagara Vani
ಕುಶಾಲನಗರ ಪುರಸಭೆ; ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಮಡಿಕೇರಿ ಜೂ.27ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ವಾಸವಾಗಿರುವ ಸಾರ್ವಜನಿಕರು ಕುಶಾಲನಗರ ಪುರಸಭೆಯ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) (ಹಂತ -4) ಯೋಜನೆ ಅಡಿ ವಿವಿಧ ವೈಯಕ್ತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಸೌಲಭ್ಯ ಪಡೆದುಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸೌಲಭ್ಯ ಪಡೆದುಕೊಳ್ಳಲು ಇಚ್ಚಿಸುವ ಅರ್ಹ ಅಭ್ಯರ್ಥಿಗಳು ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಜುಲೈ, 06 ರ ಸಂಜೆ 5.30 ಗಂಟೆಯೊಳಗೆ ಮುಖ್ಯಾಧಿಕಾರಿಗಳು ಪುರಸಭೆ ಕುಶಾಲನಗರ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಯನ್ನು ಕುಶಾಲನಗರ ಪುರಸಭೆ ಕಚೇರಿಯಲ್ಲಿ ಪಡೆದುಕೊಳ್ಳಬಹುದು ಎಂದು ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ(ಮುನಿಸಿಪಾಲಿಟಿ)(ಹಂತ-4) ಯೋಜನೆ ಅಡಿ ಪರಿಶಿಷ್ಟ ಜಾತಿ ಜನಾಂಗದ ವ್ಯಕ್ತಿ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಮೀಸಲು.
ಸೌಲಭ್ಯಗಳ ವಿವರ: 2022-23 ರಿಂದ 2024-25 ನೇ ಸಾಲಿಗೆ ವಿವಿಧ ವಸತಿ ಯೋಜನೆ ಪಕ್ಕಾಮನೆ ನಿರ್ಮಿಸಲು ಸರಕಾರದ ಇತರೆ ವಸತಿಯೋಜನೆ ಅಡಿ ಹೊಂದಾಣಿಕೆ ಮೊತ್ತ ಪಾವತಿಸಲು ಸಹಾಯಧನ, 10ನೇ ತರಗತಿ ಮೇಲ್ಪಟ್ಟು ವಿವಿಧ ಹಂತಗಳಲ್ಲಿ ವ್ಯಾಸಂಗ ಮಾಡುವ ವಾರ್ಷಿಕ ಆದಾಯ 2.50 ಲಕ್ಷ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ಪಡಿತರ ಚೀಟಿ, ಆಧಾರ ಕಾರ್ಡ್, ಇತ್ತೀಚಿನ ವಾಸಸ್ಥಳ ದೃಢೀಕರಣ ಪತ್ರ, ಅಭ್ಯರ್ಥಿಯ 01 ಭಾವಚಿತ್ರ, ಆದಾಯ ದೃಢೀಕರಣ ಪತ್ರ (ಆದಾಯವು 3 ಲಕ್ಷದೊಳಗಿರಬೇಕು), ಇತರೆ ವಸತಿ ಯೋಜನೆ ಅಡಿ ಆಯ್ಕೆಯಾದ ಕಾರ್ಯಾದೇಶ ಪತ್ರ ಸಲ್ಲಿಸಬೇಕು. ಅರ್ಜಿದಾರರ ಆಯ್ಕೆಯನ್ನು ಪುರಸಭೆ ಕಾಯ್ದಿರಿಸಿಕೊಂಡಿದೆ.
ರಾಷ್ಟ್ರೀಯ ಅಂತರಾಷ್ಟ್ರೀಯ ರಾಜ್ಯ ಮಟ್ಟದ ವಿವಿದ ಕಲೆ/ಕ್ರೀಡೆ/ಸಾಂಸ್ಕøತಿಕ/ ವ್ಯಾಸಾಂಗೇ ತರ ಚಟುವಟಿಕೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಪಾವತಿ. ಪಡಿತರ ಚೀಟಿ, ಆಧಾರ ಕಾರ್ಡ್, ಇತ್ತೀಚಿನ ವಾಸಸ್ಥಳ ದೃಢೀಕರಣ ಪತ್ರ, ಅಭ್ಯರ್ಥಿಯ 01 ಭಾವಚಿತ್ರ, ಆದಾಯ ಮತ್ತು ಜಾತಿ ದೃಢೀಕರಣ ಪತ್ರ (ಆದಾಯವು 3 ಲಕ್ಷದೊಳಗಿರಬೇಕು), ವ್ಯಾಸಂಗ ದೃಢೀಕರಣ ಪತ್ರ . ಆಯ್ಕೆಗೆ ಸಂಬಂಧಪಟ್ಟ ವಿಭಾಗದ ದೃಢೀಕರಣ ಪತ್ರ. ಅರ್ಜಿದಾರರ ಆಯ್ಕೆಯನ್ನು ಪುರಸಭೆ ಕಾಯ್ದಿರಿಸಿಕೊಂಡಿದೆ.
ಪರಿಶಿಷ್ಟ ಪಂಗಡದ ಜನಾಂಗದ ವ್ಯಕ್ತಿ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಮೀಸಲು: ಒಂದು ಬಾರಿಗೆ ಮಾತ್ರ ಪರಿಶಿಷ್ಟ ಪಂಗಡದವರಿಗೆ ಮನೆಯ ಮೇಲ್ಛಾವಣಿ ದುರಸ್ತಿಗೆ ಸಾಮಗ್ರಿ ಅಥವಾ ಅವಶ್ಯ ಸಾಮಾಗ್ರಿಗಳನ್ನು ಖರೀದಿಸಲು ಧನಸಹಾಯ. ಪಡಿತರಚೀಟಿ, ಮತದಾರರ ಗುರುತಿನಚೀಟಿ, ಆದಾರ ಕಾರ್ಡ್, ಇತ್ತೀಚಿನ ವಾಸಸ್ಥಳ ದೃಢೀಕರಣ ಪತ್ರ, ಫಲಾನುಭವಿಯ 03 ಭಾವಚಿತ್ರ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ಅರ್ಜಿದಾರರು ಸೌಲಭ್ಯ ಪಡೆಯಲು ಯಾವುದೇ ಮಾಹಿತಿಯನ್ನು ಮುಚ್ಚಿಟ್ಟಿಲ್ಲವೆಂದು/ಸುಳ್ಳು ಮಾಹಿತಿ ನೀಡಿಲ್ಲವೆಂದು ನೋಟರೀಕೃತ ಪ್ರಮಾಣ ಪತ್ರ ಸಲ್ಲಿಸಬೇಕು.
ಕುಶಾಲನಗರ ಪುರಸಭೆ ವ್ಯಾಪ್ತಿಯ ವಿವಿಧ ವಿದ್ಯಾಥಿಗಳಿಗೆ ನೆರವು ನೀಡುವುದು. ಪಡಿತರ ಚೀಟಿ, ಆಧಾರ ಕಾರ್ಡ್, ಇತ್ತೀಚಿನ ವಾಸಸ್ಥಳ ದೃಢೀಕರಣ ಪತ್ರ, ಅಭ್ಯರ್ಥಿಯ 01 ಭಾವಚಿತ್ರ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ (ಆದಾಯವು 3 ಲಕ್ಷದೊಳಗಿರಬೇಕು), ವ್ಯಾಸಂಗ ದೃಢೀಕರಣ ಪತ್ರ.
ರಾಷ್ಟ್ರೀಯ ಅಂತರಾಷ್ಟ್ರೀಯ ರಾಜ್ಯ ಮಟ್ಟದ ವಿವಿದ ಕಲೆ/ಕ್ರೀಡೆ/ಸಾಂಸ್ಕøತಿಕ/ ವ್ಯಾಸಾಂಗೇ ತರ ಚಟುವಟಿಕೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಪಾವತಿ. ಪಡಿತರ ಚೀಟಿ, ಆಧಾರ ಕಾರ್ಡ್, ಇತ್ತೀಚಿನ ವಾಸಸ್ಥಳ ದೃಢೀಕರಣ ಪತ್ರ, ಅಭ್ಯರ್ಥಿಯ 01 ಭಾವಚಿತ್ರ, ಆದಾಯ ಮತ್ತು ಜಾತಿ ದೃಢೀಕರಣ ಪತ್ರ (ಆದಾಯವು 3 ಲಕ್ಷದೊಳಗಿರಬೇಕು), ವ್ಯಾಸಂಗ ದೃಢೀಕರಣ ಪತ್ರ, ಆಯ್ಕೆಗೆ ಸಂಬಂಧಪಟ್ಟ ವಿಭಾಗದ ದೃಢೀಕರಣ ಪತ್ರ ಸಲ್ಲಿಸಬೇಕು.
ಕೌಶಲ್ಯಾಭೀವೃಧ್ದಿ ತರಬೇತಿಯಡಿ ವಿವಿಧ ತರಬೇತಿಗಳಿಗೆ ಕಾಯ್ದಿರಿಸಿದೆ. ಪಡಿತರ ಚೀಟಿ, ಆಧಾರ ಕಾರ್ಡ್, ಇತ್ತೀಚಿನ ವಾಸಸ್ಥಳ ದೃಢೀಕರಣ ಪತ್ರ, ಅಭ್ಯರ್ಥಿಯ 01 ಭಾವಚಿತ್ರ, ಆದಾಯ ಮತ್ತು ಜಾತಿ ದೃಢೀಕರಣ ಪತ್ರ (ಆದಾಯವು 3 ಲಕ್ಷದೊಳಗಿರಬೇಕು), ಆಯ್ಕೆಗೆ ಸಂಬಂಧಪಟ್ಟ ವಿಭಾಗದ ದೃಢೀಕರಣ ಪತ್ರ.
ಇತರೆ ಬಡಜನರ ವ್ಯಕ್ತಿ ಸಂಬಂದಿತ ಕಾರ್ಯಕ್ರಮಗಳಿಗೆ ಮೀಸಲು: 2022-23 ರಿಂದ 2024-25 ನೇ ಸಾಲಿಗೆ ಬ್ಯಾಂಕ್ಗಳ ನೆರವಿನಿಂದ ಸಣ್ಣ ಉದ್ದಿಮೆಯನ್ನು ಆರಂಭಿಸಲು ಇಚ್ಚಿಸುವ ಸಣ್ಣ ಉದ್ದಿಮೆದಾರರಿಗೆ ಯೋಜನಾ ವೆಚ್ಚದ ಶೇ50 ರಷ್ಟು ಅಥವಾ ಡೇನಲ್ಮ್ ಯೋಜನೆಯಡಿ ಉದ್ದಿಮೆಗಾಗಿ ಸಾಲ ಪಡೆದ ಫಲಾನುಭವಿ ಗಳಿಗೆ ಸಾಲ ಮರು ಪಾವತಿಗಾಗಿ ಸಹಾಯಧನ. ಪಡಿತರ ಚೀಟಿ, ಆಧಾರ ಕಾರ್ಡ್, ಇತ್ತೀಚಿನ ವಾಸಸ್ಥಳ ದೃಢೀಕರಣ ಪತ್ರ, ಅಭ್ಯರ್ಥಿಯ 01 ಭಾವಚಿತ್ರ 5)ಆದಾಯ ದೃಢೀಕರಣ ಪತ್ರ (ಆದಾಯವು 3 ಲಕ್ಷದೊಳಗಿರಬೇಕು)
10ನೇ ತರಗತಿ ಮೇಲ್ಪಟ್ಟು ವಿವಿಧ ಹಂತಗಳಲ್ಲಿ ವ್ಯಾಸಾಂಗ ಮಾಡುವ ವಾರ್ಷಿಕ ಆದಾಯ 2.50 ಲಕ್ಷ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು) ಪಡಿತರ ಚೀಟಿ, ಆಧಾರ ಕಾರ್ಡ್, ಇತ್ತೀಚಿನ ವಾಸಸ್ಥಳ ದೃಢೀಕರಣ ಪತ್ರ, ಅಭ್ಯರ್ಥಿಯ 01 ಭಾವಚಿತ್ರ, ಆದಾಯ ದೃಢೀಕರಣ ಪತ್ರ (ಆದಾಯವು 3 ಲಕ್ಷದೊಳಗಿರಬೇಕು), ವ್ಯಾಸಂಗ ದೃಢೀಕರಣ ಪತ್ರ.
ಕೌಶಲ್ಯಾಭೀವೃಧ್ದಿ ತರಬೇತಿಯಡಿ ವಿವಿಧ ತರಬೇತಿಗಳಿಗೆ ಕಾಯ್ದಿರಿಸಿದೆ. ಪಡಿತರ ಚೀಟಿ, ಆಧಾರ ಕಾರ್ಡ್, ಇತ್ತೀಚಿನ ವಾಸಸ್ಥಳ ದೃಢೀಕರಣ ಪತ್ರ, ಅಭ್ಯರ್ಥಿಯ 01 ಭಾವಚಿತ, ಆದಾಯ ದೃಢೀಕರಣ ಪತ್ರ (ಆದಾಯವು 3 ಲಕ್ಷದೊಳಗಿರಬೇಕು), ಆಯ್ಕೆಗೆ ಸಂಬಂಧಪಟ್ಟ ವಿಭಾಗದ ದೃಢೀಕರಣ ಪತ್ರ
ವಿಕಲಚೇತನರ ವೈಯಕ್ತಿಕ ಸಂಬಂಧಿತ ಕಾರ್ಯಕ್ರಮಗಳಿಗೆ ಮೀಸಲು: 2022-23 ರಿಂದ 2024-25 ವಿವಿಧ ವಸತಿ ಯೋಜನೆ ಪಕ್ಕಾಮನೆ ನಿರ್ಮಿಸಲು ಸರಕಾರದ ಇತರೆ ವಸತಿಯೋಜನೆ ಅಡಿ ಹೊಂದಾಣಿಕೆ ಮೊತ್ತ ಪಾವತಿಸಲು ಸಹಾಯಧನ
ಬ್ಯಾಂಕ್ಗಳ ನೆರವಿನಿಂದ ಸಣ್ಣ ಉದ್ದಿಮೆಯನ್ನು ಆರಂಭಿಸಲು ಇಚ್ಚಿಸುವ ಸಣ್ಣ ಉದ್ದಿಮೆದಾರರಿಗೆ ಯೋಜನಾ ವೆಚ್ಚದ ಶೇ50 ರಷ್ಟು ಅಥವಾ ಡೇನಲ್ಮ್ ಯೋಜನೆಯಡಿ ಉದ್ದಿಮೆಗಾಗಿ ಸಾಲ ಪಡೆದ ಫಲಾನುಭವಿ ಗಳಿಗೆ ಸಾಲ ಮರು ಪಾವತಿಗಾಗಿ ಸಹಾಯಧನ. ಪಡಿತರ ಚೀಟಿ, ಆಧಾರ ಕಾರ್ಡ್, ಇತ್ತೀಚಿನ ವಾಸಸ್ಥಳ ದೃಢೀಕರಣ ಪತ್ರ, ಅಭ್ಯರ್ಥಿಯ 01 ಭಾವಚಿತ್ರ ಆದಾಯ ದೃಢೀಕರಣ ಪತ್ರ (ಆದಾಯವು 3 ಲಕ್ಷದೊಳಗಿರಬೇಕು), ಇತರೆ ವಸತಿ ಯೋಜನೆ ಅಡಿ ಆಯ್ಕೆಯಾದ ಕಾರ್ಯಾದೇಶ ಪತ್ರ, ಅಂಗವಿಕಲತೆಯ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಪಡೆದಿರುವ ಪ್ರಮಾಣ ಪತ್ರದ ಪ್ರತಿ
ಜೀವ ವಿಮೆ ಆರೋಗ್ಯ ವಿಮೆ, ವಾರ್ಷಿಕ ಪ್ರಿಮಿಯಮ್ ಕಂತುಗಳನ್ನು ಮಾಡಿಸುವುದು/ ನವೀಕರಿಸುವುದು ಹಾಗೂ ತ್ರಿಚಕ್ರ ವಾಹನ ನೀಡುವುದು. ಪಡಿತರಚೀಟಿ, ಮತದಾರರ ಗುರುತಿನಚೀಟಿ, ಆದಾರ ಕಾರ್ಡ್, ಇತ್ತೀಚಿನ ವಾಸಸ್ಥಳ ದೃಢೀಕರಣ ಪತ್ರ, ಫಲಾನುಭವಿಯ 02 ಭಾವಚಿತ್ರ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ (ಆದಾಯವು 3 ಲಕ್ಷದೊಳಗಿರಬೇಕು) ಅಂಗವಿಕಲತೆಯ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಪಡೆದಿರುವ ಪ್ರಮಾಣ ಪತ್ರ ನಕಲು, ಅರ್ಜಿದಾರರು ಸೌಲಭ್ಯ ಪಡೆಯಲು ಯಾವುದೇ ಮಾಹಿತಿಯನ್ನು ಮುಚ್ಚಿಟ್ಟಿಲ್ಲವೆಂದು/ಸುಳ್ಳು ಮಾಹಿತಿ ನೀಡಿಲ್ಲವೆಂದು ನೋಟರಿ ಪ್ರಮಾಣ ಪತ್ರ (ಮಾದರಿ ನಮೂನೆಯನ್ನು ಕಛೇರಿಯ ನಾಮ ಫಲಕದಲ್ಲಿ ಅಳವಡಿಸಲಾಗಿದೆ).
10 ನೇ ತರಗತಿ ಮೇಲ್ಪಟ್ಟು ವಿವಿಧ ಹಂತಗಳಲ್ಲಿ ವ್ಯಾಸಂಗ ಮಾಡುವ ವಾರ್ಷಿಕ ಆದಾಯ 2.50 ಲಕ್ಷ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು. ಪಡಿತರ ಚೀಟಿ, ಆಧಾರ ಕಾರ್ಡ್, ಇತ್ತೀಚಿನ ವಾಸಸ್ಥಳ ದೃಢೀಕರಣ ಪತ್ರ, ಅಭ್ಯರ್ಥಿಯ 01 ಭಾವಚಿತ್ರ, ಆದಾಯ ದೃಢೀಕರಣ ಪತ್ರ (ಆದಾಯವು 3 ಲಕ್ಷದೊಳಗಿರಬೇಕು), ವ್ಯಾಸಂಗ ದೃಢೀಕರಣ ಪತ್ರ, ಅಂಗವಿಕಲತೆಯ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಪಡೆದಿರುವ ಪ್ರಮಾಣ ಪತ್ರ ನಕಲು. ಎಲ್ಲಾ ಅರ್ಜಿದಾರರ ಆಯ್ಕೆಯನ್ನು ಪುರಸಭೆ ಕಾಯ್ದಿರಿಸಿಕೊಂಡಿದೆ.
WhatsApp Group Join Now
Telegram Group Join Now
Share This Article
error: Content is protected !!