Ad image

ಬಳ್ಳಾರಿಯ ಜೆಎಸ್‍ಡಬ್ಲ್ಯೂ ವಿದ್ಯಾನಗರ ಕ್ಯಾಂಪಸ್‍ನಲ್ಲಿ ಎಡುಕಾನ್-2024 ಶಿಕ್ಷಣ ಸಮಾವೇಶ: ಹೆಸರು ನೋಂದಣಿಗೆ ಜು.22 ಕೊನೆಯ ದಿನ

Vijayanagara Vani
ಬಳ್ಳಾರಿ,ಜು.18
ಕಲಬುರಗಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಜೆಎಸ್ಡಬ್ಲ್ಯೂ ಫೌಂಡೇಶನ್ ಆಯೋಜಿಸುತ್ತಿರುವ ಎಡುಕಾನ್-2024, ಕೈಜೋಡಿಸಿ ಕಲಿಸೋಣ’ ಎಂಬ ವಿಷಯದೊಂದಿಗೆ ಎಡುಕಾನ್-2024′ ಶಿಕ್ಷಣ ಸಮಾವೇಶವನ್ನು 2024ರ ಆಗಸ್ಟ್ 1 ಹಾಗೂ 2 ರಂದು ಎರಡು ದಿನಗಳ ಕಾಲ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ತೋರಣಗಲ್ಲು ಜೆಎಸ್ಡಬ್ಲ್ಯೂನ ಜೆ-ಮ್ಯಾಕ್ಸ್ ವಿದ್ಯಾನಗರ ಕ್ಯಾಂಪಸ್ನಲ್ಲಿ ಆಯೋಜಿಸಲಾಗಿದೆ ಎಂದು ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ ಎಸ್ ಅವರು ತಿಳಿಸಿದ್ದಾರೆ.
ಗುಣಾತ್ಮಕ ಶಿಕ್ಷಣಕ್ಕಾಗಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನವೀನ ವಿಧಾನಗಳ ಮೂಲಕ ಪರಿವರ್ತನೆಯನ್ನು ತರಲು ಶಿಕ್ಷಣ ತಜ್ಞರು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಶಿಕ್ಷಣ ಭಾಗಿದಾರರನ್ನು ಒಗ್ಗೂಡಿಸುವುದು ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ.
ಇದು ಸನಿವಾಸ ಕಾರ್ಯಕ್ರಮವಾಗಿದ್ದು, ಸೀಮಿತ ಸಾಮಥ್ರ್ಯದ ವಸತಿ ಸೌಲಭ್ಯದ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತದೆ. ಆದ್ದರಿಂದ, ಎಲ್ಲಾ ಶಿಕ್ಷಣ ಭಾಗೀದಾರರಲ್ಲಿ ಮತ್ತು ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವ ಎಲ್ಲಾ ಭಾಗೀದಾರರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ತಮ್ಮ ಸ್ಲಾಟ್ಗಳನ್ನು ಬೇಗ ಕಾಯ್ದಿರಿಸಿಕೊಂಡು ಸಕ್ರಿಯವಾಗಿ ಭಾಗವಹಿಸಬೇಕು.
ಸಮಾವೇಶದಲ್ಲಿ ಭಾಗವಹಿಸಲಿಚ್ಛಿಸುವರು ಶಿಕ್ಷಣ ಭಾಗಿದಾರರು (knowledge partners/NGOs) ಕಲಬುರಗಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯ https://cpikalaburgi.karnataka.gov.in ವೆಬ್ಸೈಟ್ನಲ್ಲಿ ಜುಲೈ 22 ರೊಳಗಾಗಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಕಾರ್ಯಕ್ರಮದ ವಿವರವಾದ ವೇಳಾಪಟ್ಟಿಯನ್ನು ಮೇಲ್ಕಂಡ ವೆಬ್ಸೈಟ್ನಲ್ಲಿಯೇ ನಂತರ ತಿಳಿಯಬಹುದಾಗಿದೆ.
ಗುಣಾತ್ಮಕ ಶಿಕ್ಷಣಕ್ಕಾಗಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನವೀನ ವಿಧಾನಗಳ ಮೂಲಕ ಪರಿವರ್ತನೆಯನ್ನು ತರಲು ಶಿಕ್ಷಣ ತಜ್ಞರು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಶಿಕ್ಷಣ ಭಾಗಿದಾರರನ್ನು ಒಗ್ಗೂಡಿಸುವ ತನ್ಮೂಲಕ ಕಲ್ಯಾಣ ಕನಾಟದ ವಿಭಾಗದ ಶಿಕ್ಷಣ ಕ್ಷೇತ್ರದಲ್ಲಿ ಗುಣಾತ್ಮಕತೆಯನ್ನು ತರುವ ಉದ್ದೇಶದಿಂದ ಆಗಸ್ಟ್ 1 ಹಾಗೂ 2 ರಂದು ಎರಡು ದಿನಗಳ ಕಾಲ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ನೋಡಲ್ ವ್ಯಕ್ತಿಗಳಾದ ಬಳ್ಳಾರಿ ತೋರಣಗಲ್ಲು ಜೆಎಸ್ಡಬ್ಲ್ಯೂ ಫೌಂಡೇಶನ್ನ ಸಿಎಸ್ಆರ್ ಹಿರಿಯ ವ್ಯವಸ್ಥಾಪಕರಾದ ರಾಜಶೇಖರ ರಾಜು ಇವರ ಮೊ.9989833133 ಹಾಗೂ ಕಲಬುರಗಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ಚನ್ನಬಸಪ್ಪ ಮುಧೋಳ ಇವರ ಮೊ.8310259380 ಗೆ ಸಂಪರ್ಕಿಸಲು ಕೋರಲಾಗಿದೆ.
Share This Article
error: Content is protected !!
";