Ad image

ನಿರುದ್ಯೋಗ ದರ ಎಂದರೇನು, ಲೆಕ್ಕಾಚಾರ ಹೇಗೆ? ತಿಳಿಯಿರಿ

Vijayanagara Vani
ನಿರುದ್ಯೋಗ ದರ ಎಂದರೇನು, ಲೆಕ್ಕಾಚಾರ ಹೇಗೆ? ತಿಳಿಯಿರಿ

ಉದ್ಯೋಗ ಮಾಡಲು ಸಬಲರಾಗಿದ್ದರೂ ಕೂಡಾ ಯಾವುದೇ ಉದ್ಯೋಗವಿಲ್ಲದೆ ಇರುವ ಜನ ಸಂಖ್ಯೆಯ ಪ್ರಮಾಣವನ್ನು ನಾವು ನಿರುದ್ಯೋಗ ದರ ಎಂದು ಕರೆಯುತ್ತೇವೆ. ಪ್ರಸ್ತುತ ಭಾರತದಲ್ಲಿ ನಿರುದ್ಯೋಗ ದರ ಕೊಂಚ ಏರಿಳಿತವಾಗುತ್ತಿದೆಯಾದರೂ ಮುಂದಿನ ದಿನಗಳಲ್ಲಿನ ಮತ್ತೆ ಅಧಿಕವಾಗುವ ಸಾಧ್ಯತೆ ಇದೆ ಎಂದು ತಜ್ಞರುಗಳು ಅಭಿಪ್ರಾಯಿಸಿದ್ದಾರೆ.
ಯಾವುದೇ ದೇಶದಲ್ಲಿ ನಿರುದ್ಯೋಗ ದರವು ಏರಿಕೆ, ಇಳಿಕೆಯಾಗುತ್ತಲೇ ಇರುತ್ತದೆ. ಪ್ರಸ್ತುತ ಆರ್ಥಿಕ ಸ್ಥಿತಿ ಹೇಗಿರುತ್ತದೆ ಎಂಬ ಆಧಾರದಲ್ಲಿ ನಿರುದ್ಯೋಗ ದರವು ಏರಿಳಿತವಾಗುತ್ತದೆ. ಆರ್ಥಿಕತೆಯು ಕುಗ್ಗಿದ್ದಾಗ ನಿರುದ್ಯೋಗ ದರವು ಹೆಚ್ಚಾಗುತ್ತದೆ, ಆರ್ಥಿಕ ಸ್ಥಿತಿ ಸುಧಾರಿಸಿದಾಗ ನಿರುದ್ಯೋಗ ದರವು ಕಡಿಮೆಯಾಗುತ್ತದೆ. ಆದರೆ ಒಇಸಿಡಿ ಪ್ರಕಾರ ಭಾರತದಲ್ಲಿ ಆರ್ಥಿಕ ಬೆಳವಣಿಗೆಯಾದರೂ ಕೂಡಾ ನಿರುದ್ಯೋಗ ದರ ಮಾತ್ರ ಏರಿಕೆಯಾಗುತ್ತದೆ.
ಆದರೆ ಹಲವಾರು ಮಂದಿಗೆ ಈ ನಿರುದ್ಯೋಗ ದರ ಎಂದರೇನು, ಇದರ ಲೆಕ್ಕಾಚಾರ ಹೇಗೆ ಮಾಡಲಾಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲ, ಇಲ್ಲಿ ನಾವು ಈ ಬಗ್ಗೆ ಮಾಹಿತಿ ನೀಡಿದ್ದೇವೆ ಮುಂದೆ ಓದಿ..

- Advertisement -
Ad imageAd image

ಭಾರತದಲ್ಲಿ ಪ್ರಸ್ತುತ ನಿರುದ್ಯೋಗ ದರವು ಕೊಂಚ ಇಳಿಕೆಯಾಗುತ್ತಿದೆ. ಜುಲೈ-ಸೆಪ್ಟೆಂಬರ್‌ನಲ್ಲಿ ತ್ರೈಮಾಸಿಕದಲ್ಲಿ ಭಾರತದಲ್ಲಿ ಮಹಿಳೆಯರ ನಿರುದ್ಯೋಗ ದರವು ಶೇಕಡ 11.6ರಿಂದ ಶೇಕಡ 9.4ಕ್ಕೆ ಇಳಿದಿದೆ. ಪುರುಷರ ನಿರುದ್ಯೋಗ ದರವು ಶೇಕಡ 9.3ರಿಂದ ಶೇಕಡ 6.6ಕ್ಕೆ ಇಳಿದಿದೆ. ರಾಜಸ್ಥಾನದಲ್ಲಿ ಅಧಿಕ ನಿರುದ್ಯೋಗ ದರ ಹಾಗೂ ಛತ್ತೀಸ್‌ಗಢದಲ್ಲಿ ಕಡಿಮೆ ನಿರುದ್ಯೋಗ ದರವಿದೆ. ಕರ್ನಾಟಕದಲ್ಲಿ ಪ್ರಸ್ತುತ ಶೇಕಡ 3.8ರಷ್ಟು ನಿರುದ್ಯೋಗ ದರವಿದೆ.ನಿರುದ್ಯೋಗ ದರ ಲೆಕ್ಕಾಚಾರ ಹಾಕುವುದು ಹೇಗೆ? ನಿರುದ್ಯೋಗ ದರವನ್ನು ಕೂಡಾ ಲೆಕ್ಕಾಚಾರ ಹಾಕಲಾಗುತ್ತದೆ. ನಿರುದ್ಯೋಗಿಗಳು/ಒಟ್ಟು ಕಾರ್ಮಿಕರು× 100 ಎಂಬ ಲೆಕ್ಕಾಚಾರವನ್ನು ಮಾಡಿ ನಿರುದ್ಯೋಗ ದರವನ್ನು ಪತ್ತೆಹಚ್ಚಲಾಗುತ್ತದೆ.

ಯೋಜನೆರೂಪಿಸುವ ನಿರುದ್ಯೋಗ ದರದ ಪ್ರಭಾವ ಆರ್ಥಿಕ ಹಿಂಜರಿತ, ಆರ್ಥಿಕ ಬಿಕ್ಕಟ್ಟನ್ನು ಲೆಕ್ಕ ಹಾಕಲೆಂದು ಯೋಜನೆ ರೂಪಿಸುವವರು ಅಥವಾ ಸರ್ಕಾರ ಹಾಗೂ ಕೇಂದ್ರ ಬ್ಯಾಂಕ್ ಅಥವಾ ಭಾರತದಲ್ಲಿ ಎಂದಾದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿರುದ್ಯೋಗ ದರವನ್ನು ಬಳಸುತ್ತಾರೆ. ನಿರುದ್ಯೋಗ ದರವನ್ನು ನೋಡಿಕೊಂಡು ಅದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರವು ಯೋಜನೆಗಳನ್ನು ರೂಪಿಸುತ್ತದೆ. ಕೇಂದ್ರ ಬ್ಯಾಂಕ್ ಕೂಡಾ ಆರ್ಥಿಕ ಕುಸಿತವನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುತ್ತದೆ. ಇನ್ನು ಸಾಮಾನ್ಯ ನಾಗರಿಕರಿಗೆ ಈ ನಿರುದ್ಯೋಗ ದರವು ದೇಶದ ಆರ್ಥಿಕ ಸ್ಥಿತಿ ಅರ್ಥೈಸಿಕೊಳ್ಳುವ ಅಸ್ತ್ರವಾಗಿದೆ.

Share This Article
error: Content is protected !!
";