ತುಂಗಾಭದ್ರೆಗೆ ಬಾಗಿನ ಅರ್ಪಿಸೋಣ….!!

Vijayanagara Vani
ತುಂಗಾಭದ್ರೆಗೆ ಬಾಗಿನ ಅರ್ಪಿಸೋಣ….!!

ಚಿಕ್ಕಮಗಳೂರಿನ
ಕುದುರೆಮುಖದ
ಗಂಗಾ ಮೂಲದ ವರಾಹ
ಪರ್ವತದಿ ಉದಿಸಿ,
ತುಂಗೆಯು ಶೃಂಗೇರಿಯತ್ತ,
ಭದ್ರೆ ಭದ್ರಾವತಿಯತ್ತ ಹರಿದು,

ಪೌರುಷದಿ ಸುಳಿಯಾಗಿ ಪಶ್ಚಿಮಘಟ್ಟದ
ಪರ್ವತಗಳ ಏರಿಳಿದು
ಕೂಡಲಿಯಲಿ ಸಂಗಮವಾಗಿ ಬೆಳೆದು,
ಫಲವತ್ತಾದ ಮಣ್ಣನು ಹೊತ್ತು ತಂದು
ಹಂಪಿಯ ತಟದ ತುಂಗಭದ್ರೆಯ ಜಲಾಶಯದ
ಗುಡಿಗೆ ಜಲದೇವತೆಯಾಗಿ ಬರುತ್ತಾಳೆ;

ಲಕ್ಷಾಂತರ ಅನ್ನದಾತರ
ಬಾಳಿಗೆ ಬೆಳಕಾಗಿ;
ಕೋಟಿ ಕೋಟಿ ಗಿಡಮರಗಳಿಗೆ
ಹಸಿರಿನ ಉಸಿರಾಗಿ;
ಪ್ರಾಣಿ ಪಕ್ಷಿ ಜಲಚರಗಳಿಗೆ ಅಕ್ಷಯದ
ಪಾತ್ರೆಯಾಗಿ,

ನರರ ಒಣಗಿದ ಗಂಟಲಿನ ದಾಹವ
ತೀರಿಸಿದ ಗಂಗೆಯಾಗಿ
ಹಸಿದ ಒಡಲಿಗೆ ಅನ್ನದ ಗಣಿಯಾಗಿ
ಬರಡಾದ ಭುವಿಗೆಲ್ಲಾ ಹಸಿರ ಸೀರೆ
ಉಡಿಸುವ ದೇವಿಯಾಗಿ
ಸಕಲ ಜೀವರಾಶಿಗಳಿಗೂ ಶಕ್ತಿಯ ನೀಡೋ
ದೈವವಾಗಿ;

ಭುವಿಯ ಕೊಳಕನು ಸ್ವಚ್ಛಗೊಳಿಸುವ
ಗಾಂಧಿಯಾಗಿ
ಕರ್ನಾಟಕ,ಆಂಧ್ರ,ತೆಲಂಗಾಣದ
ಜನರ ಬದುಕಿಗೆ ಬೆನ್ನೆಲುಬಾಗಿ;
ಹಲವು ದೈವಕ್ಷೇತ್ರಗಳ ಸೃಷ್ಟಿಸಿ
ಪ್ರತಿನಿತ್ಯವು ಪೂಜಿಸುವ ದೇವಿ
ತುಂಗಭದ್ರೆಗೆ
ಬಾಗಿನ ಅರ್ಪಿಸೋಣ ಬನ್ನಿ ….
ಬಾಗಿನ ಅರ್ಪಿಸೋಣ ಬನ್ನಿ….!!

✍️ಕಾಡಜ್ಜಿ ಮಂಜುನಾಥ

WhatsApp Group Join Now
Telegram Group Join Now
Share This Article
error: Content is protected !!