Ad image

ಲಿಂಗಾಯತರು ದಾಸೋಹ ಮಾಡುತ್ತಾರೆ ಎಂದರೆ ಅದಕ್ಕೆ ಬಸವಣ್ಣನವರೇ ಮೂಲ: ಟಿ.ವಿಜಯಕುಮಾರ

Vijayanagara Vani
ಲಿಂಗಾಯತರು ದಾಸೋಹ ಮಾಡುತ್ತಾರೆ ಎಂದರೆ ಅದಕ್ಕೆ ಬಸವಣ್ಣನವರೇ ಮೂಲ: ಟಿ.ವಿಜಯಕುಮಾರ
oppo_0
ಓದುವ ವಿದ್ಯಾರ್ಥಿಗಳನ್ನು ಸ್ವಾತಂತ್ರ್ಯವಾಗಿ ಬಿಡಬೇಕು, ಅತನಿಗೆ ತನ್ನ ಗುರಿಯನ್ನು ತಿಳಿಯಲು ಸಾಧ್ಯವಾಗುತ್ತದೆ, ಯುಪಿಎಸ್ಸಿಯನ್ನು ಓದುವವರು ಸಾಮಾನ್ಯ ಜ್ಞಾನವನ್ನು ಸಹ ಸಂಪಾದಿಸಬೇಕಾದುದು ಅತಿ ಅಗತ್ಯವಾಗುತ್ತದೆ , ಇಂದು ದಾಸೋಹ ಸಂಸ್ಕøತಿ ಲಿಂಗಾಯತರು ಮಾಡುತ್ತಾರೆ ಎಂದರೆ ಅದಕ್ಕೆ ಬಸವಣ್ಣನವರೇ ಮೂಲ ಎಂದು ತಾಲೂಕಿನ ಯುಪಿಎಸ್ಸಿ ಟಾಪರ್  ಟಿ.ವಿಜಯಕುಮಾರ ತಿಳಿಸಿದರು. 
ಅವರು  ಪಟ್ಟಣದ ಆದರ್ಶ ಕಲ್ಯಾಣಮಂಟಪದಲ್ಲಿ ವೀರಶೈವಲಿಂಗಾಯತ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ವಿಶೇಷ ಮಾಹಿತಿ ನೀಡಿ ಮಾತನಾಡಿ ಬಸವಣ್ಣನವರ ಅನುಯಾಯಿಗಳಾದ ಲಿಂಗಾಯತ ಸಮಾಜದವರು ಇಂದಿಗೂ ಸಹ ದಾಸೋಹ ಸಂಸ್ಕøತಿ ಇದೆ ಎಂದರೆ ಅದಕ್ಕೆ 12ನೇ ಶತಮಾನದ ಬಸವಣ್ಣನವರ ಕ್ರಾಂತಿಯಾಗಿದೆ, ಅವರು ಇಂದು ಸಹ ನಮ್ಮ ಮದ್ಯ ಜೀವಂತವಾಗಿದ್ದಾರೆ ಅವರ ತತ್ವಗಳಿಂದ ಅದನ್ನು ತಿಳಿಯುವಂತಾಗಬೇಕು, ಓದುವ ವಿದ್ಯಾರ್ಥಿ ನಿರಂತರವಾಗಿ ಅಧ್ಯಾಯನ ಮಾಡಬೇಕು ಅದರೆ ಅದು ನಿಮ್ಮ ಮನಸ್ಸಿಗೆ ಮುಟ್ಟಬೇಕು, ಪರೀಕ್ಷೆ ಒಂದು ಸಮಸ್ಯೆ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಅಧ್ಯಯನ ಮಾಡಬೇಕು, ಅದಕ್ಕೆ ಸಂಡೂರಿನ ವಿದ್ಯಾರ್ಥಿಗಳಿಗೂ ಮಾರ್ಗದರ್ಶನ ಮಾಡುವ ಯೋಜನೆಯನ್ನು ರೂಪಿಸಲಾಗುವುದು, ಅದಕ್ಕೆ ಪ್ರತಿಯೊಬ್ಬರ ಸಹಕಾರವು ಸಹ ಮುಖ್ಯವಾದುದು ಎಂದರು. 
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸಂಡೂರಿನ ವಿರಕ್ತಮಠದ ಪ್ರಭುಮಹಾಸ್ವಾಮಿಗಳು ಮಾತನಾಡಿ ವಚನ ಸಾಹಿತ್ಯದ ಬಗ್ಗೆ ಬಹಳ ಅರ್ಧಯನ ಮಾಡಿದವರು ಗದುಗಿನ ಶ್ರೀಗಳು, ಜಯಂತಿಗಳು ಬಹಳ ಮುಖ್ಯ, ಇಡೀ ದಾರ್ಶನಿಕರ ತತ್ವ ಸಿದ್ದಾಂತಗಳನ್ನು ಅರಿಯಬೇಕಾಗಿದೆ. ಹರ್ಡೇಕರ ಮಂಜಪ್ಪನವರು, ಮೃತ್ಯುಂಜಯಪ್ಪನವರ ನಿರಂತರ ಶ್ರಮ ಬಹು ಮುಖ್ಯವಾದುದು, ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕøತಿಕ ನಾಯಕ ಎಂದು ಸರ್ಕಾರ ಘೋಷಣೆ ಮಾಡಿದ್ದು ಅತಿ ಉತ್ತಮವಾದ ಕಾರ್ಯವಾಗಿದೆ, ಇಂದು ಮಠಮಾನ್ಯಗಳು ವೈಯಕ್ತಿಕ ಒಡೆತನಕ್ಕೆ ಸಿಲುಕುವಂತಹ ಸ್ಥಿತಿ ಬಂದಿದೆ, ಮಠಗಳಲ್ಲಿ ಸ್ವಾಮಿಗಳು ಬರೀ ವ್ಯವಸ್ಥಾಪಕರಾಗಬೇಕೇ ಹೊರತು ಮಾಲೀಕರಾಗಬಾರದು, ಲಿಂಗಾಯತ ಮಠಗಳಲ್ಲಿ ತನ್ನದೇ ಅದ ವಿಶೇಷತೆ ಇದೆ ಕಾರಣ ಸಹಪಂಕ್ತಿ ಭೋಜನ, ದಾಸೋಹ ಸಂಸ್ಕøತಿ ಬಹು ಮುಖ್ಯವಾದುದು, ಮೂಢನಂಬಿಕೆಗಳನ್ನು ಕೈ ಬಿಡಬೇಕು, ವಿದ್ಯಾರ್ಥಿಗಳು ಪರೀಕ್ಷೆಗೆ ಪೆನ್ನುಗಳನ್ನು ಮಂತ್ರಿಸಿಕೊಂಡು ಹೋಗದಂತಾಗಬೇಕು, ಜ್ಞಾನ ಸಂಪಾದಿಸಿ ಹೋಗಬೇಕು ಎಂದರು. 
ಕಾರ್ಯಕ್ರಮದಲ್ಲಿ ಚಿತ್ರಕಿ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘ ಸ್ಥಾಪನೆಯಾಗಿ 3 ವರ್ಷಗಳಾಯಿತು ಮೊದಲ ವರ್ಷ ಎಸ್.ಎಸ್.ಎಲ್.ಸಿ 112, ಪಿಯುಸಿ 97 ವಿದ್ಯಾರ್ಥಿಗಳಿಗೆ, 2022-23 ರಲ್ಲಿ ಎಸ್.ಎಸ್.ಎಲ್.ಸಿ. 92, ಪಿಯುಸಿ 78 ವಿದ್ಯಾರ್ಥಿಗಳಿಗೆ ಸನ್ಮಾನಿಸಿದರೆ ಈ ವರ್ಷ 23-24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. 32 ಮತ್ತು ಪಿ.ಯು.ಸಿ.ಯ. 60 ವಿದ್ಯಾರ್ಥಿಗಳಿಗೆ ಸನ್ಮಾನಿಸುವ ಮೂಲಕ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ದಿಕ್ಸೂಚಿ ಭಾಷಣಗಳನ್ನು ಏರ್ಪಡಿಸಲಾಗಿದೆ ಇದರ ಸದುಪಯೋಗವನ್ನು ಸಮಾಜದ ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು, ಮುಂದಿನ ದಿನದಲ್ಲಿ ಬಸವಭವನ ನಿರ್ಮಾಣ ಮಾಡಲಾಗುವುದು ಎಂದರು. 
ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಅಗಮಿಸಿದ ಎಲ್ಲಾ ಗಣ್ಯಮಾನ್ಯರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ಸಾಧನೆ ಮಾಡಿದ ಚೋರನೂರು ಗ್ರಾಮದ ವಿಜಯಕುಮಾರ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು. 
ಸಮಾರಂಭದಲ್ಲಿ ಗಣ್ಯರಾದ ಬಿ.ನಾಗನಗೌಡ, ಬಿ.ಕೆ.ಬಸವರಾಜ, ಚತ್ರಿಕಿ ಸತೀಶ್, ಗಡಾದ್ ರಮೇಶ್, ಪಿ.ರವಿಕುಮಾರ್, ಕೆ.ವಿಜಯಕುಮಾರ್, ಕಿನ್ನೂರೇಶ್ವರ, ಸುರೇಶ್‍ಗೌಡ, ರುದ್ರಗೌಡ, ಗುಡೇಕೋಟೆ ನಾಗರಾಜ, ವಿರೇಶ್.ಹೆಚ್. ಬಿ.ಎಂ.ಉಜ್ಜಿನಯ್ಯ, ಅಪ್ಪೇನಳ್ಳಿ ಕುಮಾರಸ್ವಾಮಿ, ಇತರ ಹಲವಾರು ಗಣ್ಯರು ಉಪಸ್ಥಿತರಿದ್ದರು

Share This Article
error: Content is protected !!
";