ಬಳ್ಳಾರಿ: ಗ್ರಾಪಂಗಳಲ್ಲಿ ತೆರವಾದ ಸ್ಥಾನಗಳಿಗೆ ನೂತನವಾಗಿ ಆಯ್ಕೆಯಾದ ಸದಸ್ಯರ ಪಟ್ಟಿ ಪ್ರಕಟ

Vijayanagara Vani
ಬಳ್ಳಾರಿ: ಗ್ರಾಪಂಗಳಲ್ಲಿ ತೆರವಾದ ಸ್ಥಾನಗಳಿಗೆ ನೂತನವಾಗಿ ಆಯ್ಕೆಯಾದ ಸದಸ್ಯರ ಪಟ್ಟಿ ಪ್ರಕಟ

 

- Advertisement -
Ad imageAd image

ಬಳ್ಳಾರಿ,ನ.30

ಜಿಲ್ಲೆಯ ಬಳ್ಳಾರಿ, ಸಿರುಗುಪ್ಪ, ಕುರುಗೋಡು ಮತ್ತು ಕಂಪ್ಲಿ ತಾಲ್ಲೂಕುಗಳ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಸ್ಥಾನಗಳಿಗೆ ಈಗಾಗಲೇ ಚುನಾವಣೆ ನಡೆಸಲಾಗಿದ್ದು, ಹೊಸದಾಗಿ ಆಯ್ಕೆಯಾದ ಸದಸ್ಯರ ಪಟ್ಟಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
*ಪಟ್ಟಿ:*
*ಬಳ್ಳಾರಿ ತಾಲ್ಲೂಕು:*
ಕಪ್ಪಗಲ್ಲು ಗ್ರಾಪಂ-ಅವಿರೋಧವಾಗಿ ಈಶ್ವರಮ್ಮ(ಸಾಮಾನ್ಯ) ಆಯ್ಕೆ.
ರ‍್ರಗುಡಿ ಗ್ರಾಪಂ-ಅವಿರೋಧವಾಗಿ ಪಾರ್ವತಮ್ಮ(ಅನುಸೂಚಿತ ಜಾತಿ) ಮತ್ತು ಅಪ್ಪನಗೌಡರ ಬಸವನಗೌಡ(ಸಾಮಾನ್ಯ) ಆಯ್ಕೆ.
ಬಿ.ಬೆಳಗಲ್ಲು ಗ್ರಾಪಂ-ಅವಿರೋಧವಾಗಿ ರ‍್ರಿಸ್ವಾಮಿ(ಅನುಸೂಚಿತ ಜಾತಿ) ಆಯ್ಕೆ.
*ಕುರುಗೋಡು:*
ಕಲ್ಲುಕಂಭ ಗ್ರಾಪಂ: ಅವಿರೋಧವಾಗಿ ಗೌರಮ್ಮ(ಅನುಸೂಚಿತ ಪಂಗಡ ಮಹಿಳೆ) ಮತ್ತು ನಾಗಮ್ಮ(ಸಾಮಾನ್ಯ ಮಹಿಳೆ) ಆಯ್ಕೆ.
ದಮ್ಮೂರು ಗ್ರಾಪಂ: ಚುನಾವಣೆ ಮೂಲಕ ಭೂದೇವಿ.ವೈ(ಸಾಮಾನ್ಯ) ಆಯ್ಕೆ.
*ಸಿರುಗುಪ್ಪ:*
ತಾಳೂರು ಗ್ರಾಪಂ: ಅವಿರೋಧವಾಗಿ ಆಲರವಿ ರುದ್ರಪ್ಪ(ಅನುಸೂಚಿತ ಜಾತಿ) ಆಯ್ಕೆ.
ಕೆಂಚನಗುಡ್ಡ ಗ್ರಾಪಂ: ಅವಿರೋಧವಾಗಿ ದೊಡ್ಡ ಹುಲಿಗೆಮ್ಮ(ಅನುಸೂಚಿತ ಜಾತಿ ಮಹಿಳೆ) ಆಯ್ಕೆ.
ಕೆ.ಸುಗೂರು ಗ್ರಾಪಂ: ಅವಿರೋಧವಾಗಿ ಲಕ್ಷö್ಮಮ್ಮ(ಅನುಸೂಚಿತ ಜಾತಿ) ಆಯ್ಕೆ.
*ಕಂಪ್ಲಿ:*
ಸಣಾಪುರ ಗ್ರಾಪಂ: ಅವಿರೋಧವಾಗಿ ಎಸ್.ನೆಟ್ಟಿಕಲ್ಲಪ್ಪ(ಅನುಸೂಚಿತ ಜಾತಿ) ಆಯ್ಕೆ.
ಎಮ್ಮಿಗನೂರು ಗ್ರಾಪಂ: ಅವಿರೋಧವಾಗಿ ತ್ರಿವೇಣಿ(ಸಾಮಾನ್ಯ) ಮತ್ತು ಪಿ.ನೀಲಾವತಿಪ(ಸಾಮಾನ್ಯ ಮಹಿಳೆ) ಆಯ್ಕೆ.
ದೇವಲಾಪುರ ಗ್ರಾಪಂ: ಅವಿರೋಧವಾಗಿ ಶಿವಗಂಗಮ್ಮ ಉಪ್ಪಾರಹಳ್ಳಿ(ಸಾಮಾನ್ಯ ಮಹಿಳೆ) ಆಯ್ಕೆ.
ಮೆಟ್ರಿ ಗ್ರಾಪಂ: ಅವಿರೋಧವಾಗಿ ಗುಂಡಪ್ಪ(ಅನುಸೂಚಿತ ಪಂಗಡ) ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.

Share This Article
error: Content is protected !!
";