ಬಳ್ಳಾರಿ,ಜೂ.02
ಜಿಲ್ಲೆಯ ಕಂಪ್ಲಿ, ಸಿರುಗುಪ್ಪ ಮತ್ತು ಸಂಡೂರು ತಾಲ್ಲೂಕುಗಳ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಸ್ಥಾನಗಳಿಗೆ ಈಗಾಗಲೇ ಚುನಾವಣೆ ನಡೆಸಲಾಗಿದ್ದು, ಹೊಸದಾಗಿ ಆಯ್ಕೆಯಾದ ಸದಸ್ಯರ ಪಟ್ಟಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
*ಪಟ್ಟಿ:*
*ಕಂಪ್ಲಿ ತಾಲ್ಲೂಕು:*
ದೇವಸಮುದ್ರ ಗ್ರಾಪಂ-ಅವಿರೋಧವಾಗಿ ಶರಣಮ್ಮ(ಸಾಮಾನ್ಯ ಮಹಿಳೆ) ಆಯ್ಕೆ.
ದೇವಲಾಪುರ ಗ್ರಾಪಂ-ಅವಿರೋಧವಾಗಿ ಕುರಿ ಕರಿಬಸಪ್ಪ(ಸಾಮಾನ್ಯ).
*ಸಿರುಗುಪ್ಪ:*
ರಾವಿಹಾಳು ಗ್ರಾಪಂ: ಅವಿರೋಧವಾಗಿ ಸುವರ್ಣ(ಅನುಸೂಚಿತ ಪಂಗಡ ಮಹಿಳೆ) ಆಯ್ಕೆ.
*ಸಂಡೂರು:*
ಮೆಟ್ರಿಕಿ: ಅವಿರೋಧವಾಗಿ ಉಮಾದೇವಿ(ಅನುಸೂಚಿತ ಪಂಗಡ ಮಹಿಳೆ) ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.