Ad image

ನಗರದ ಸಿ.ಡಿ.ಪಿ.ಒ. ಕಛೇರಿ ಸಭಾಂಗಣದಲ್ಲಿ ಮಂಗಳವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಲೋಕಾಯುಕ್ತ ಡಿ.ವೈ.ಎಸ್.ಪಿ. ವಸಂತ್ಕುಮಾರ್.

Vijayanagara Vani
ನಗರದ ಸಿ.ಡಿ.ಪಿ.ಒ. ಕಛೇರಿ ಸಭಾಂಗಣದಲ್ಲಿ ಮಂಗಳವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಲೋಕಾಯುಕ್ತ ಡಿ.ವೈ.ಎಸ್.ಪಿ. ವಸಂತ್ಕುಮಾರ್.

ಸಿರುಗುಪ್ಪ.ಮೇ.೨೧:- ಸರ್ಕಾರದ ವಿವಿಧ ಯೋಜನೆ ಸೇರಿದಂತೆ ಧೇಯೋದ್ದೇಶಗಳು ಸಫಲವಾಗಬೇಕಾದರೆ ಅಧಿಕಾರಿಗಳ ಜವಾಬ್ದಾರಿ ಎಷ್ಟಿದೆಯೋ ಅಷ್ಟೇ ಜವಾಬ್ದಾರಿ ಸಾರ್ವಜನಿಕರ ಮೇಲಿದೆ ಎಂದು ಲೋಕಾಯುಕ್ತ ಡಿ.ವೈ.ಎಸ್.ಪಿ. ವಸಂತಕುಮಾರ್ ತಿಳಿಸಿದರು.

                ನಗರದ ಸಿ.ಡಿ.ಪಿ.ಒ. ಕಛೇರಿ ಸಭಾಂಗಣದಲ್ಲಿ ಮಂಗಳವಾರ ಬಳ್ಳಾರಿ ಲೋಕಾಯುಕ್ತ ಪೊಲೀಸರಿಂದ ಏರ್ಪಡಿಸಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಕೆಲಸಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಸಾರ್ವಜನಿಕರು ಪ್ರಶ್ನೆ ಮಾಡುವುದನ್ನು ರೂಢಿಸಿಕೊಳ್ಳಬೇಕು, ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಅಧಿಕಾರಿಗಳು ವಿಳಂಬ, ನಿರ್ಲಕ್ಷಯ, ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಅಕ್ರಮ ನಡೆಸಿ ಹಣ ದುರುಪಯೋಗ ಸೇರಿದಂತೆ ಲಂಚದ ಬೇಡಿಕೆ ಇಟ್ಟರೆ ಸಾರ್ವಜನಿಕರು ನಿರ್ದಿಷ್ಟ ಮಾಹಿತಿ ಮತ್ತು ಅದಕ್ಕೆ ದಾಖಲೆಗಳೊಂದಿಗೆ ಲೋಕಾಯುಕ್ತ ಕಛೇರಿಗೆ ನೇರವಾಗಿ ಅಥವಾ ಅಂಚೆ ಮುಖಾಂತರ ದೂರು ಸಲ್ಲಿಸಬಹುದು.

                ಯಾವುದೇ ಕೆಲಸವಾದರೂ ಮಧ್ಯವರ್ತಿಗಳ ಮೂಲಕ ಹೋಗುವ ಬದಲಿಗೆ ನೇರವಾಗಿ ಸಂಬAಧಪಟ್ಟ ಅಧಿಕಾರಿಗಳನ್ನು ಬೇಟಿ ಮಾಡಿ ಕೆಲಸ ಮಾಡಿಸಿಕೊಳ್ಳುವ ಮನಸ್ಥಿತಿ ಬೆಳಸಿಕೊಳ್ಳಬೇಕು. ಸರ್ಕಾರಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುವ ಜೊತೆಗೆ ಸಾರ್ವಜನಿಕರ ಭಾವನೆಗಳನ್ನು ಕೆರಳಿಸುವ ರೀತಿಯಲ್ಲಿ ನಡೆದುಕೊಳ್ಳಬಾರದು.  ಸಾರ್ವಜನಿಕರು ಬಯಸಿದ ಕೆಲಸ ಮಾಡಲು ಯೋಗ್ಯವಾಗಿದ್ದು, ಎಷ್ಟು ದಿನಗಳಲ್ಲಿ ಆಗುತ್ತದೆ ಅಥವಾ ಅವರ ಕೆಲಸ ಮಾಡಲು ಏನು ತೊಂದರೆಯಿದೆ ಎನ್ನುವುದನ್ನು ಅವರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿ ಹೇಳಿದರೆ ಸಾಕಷ್ಟು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರೆಯುತ್ತದೆ ಎಂದು ಹೇಳಿದರು.

                ನಗರಸಭೆಗೆ ಸಂಬಂಧಿಸಿದಂತೆ ಪ್ರತಿ ಸಭೆಯಲ್ಲೂ ಸಾಕಷ್ಟು ದೂರುಗಳು ಬರುತ್ತಿವೆ, ಸಾರ್ವಜನಿಕರ ಕೆಲಸಗಳನ್ನು ನಿಗಧಿತ ಅವಧಿಯೊಳಗೆ ಮುಗಿಸಿಕೊಡಲು ಕ್ರಮ ತೆಗೆದುಕೊಳ್ಳಬೇಕೆಂದು ಲೋಕಾಯುಕ್ತ ಡಿ.ವೈ.ಎಸ್.ಪಿ. ನಗರಸಭೆ ಪೌರಾಯುಕ್ತ ಗುರುಪ್ರಸಾದ್ ಅವರಿಗೆ ತಾಕೀತು ಮಾಡಿದರು.

                ತಹಶೀಲ್ದಾರ್ ಶಂಷಾಲಂ, ತಾ.ಪಂ.ಇ.ಒ. ಪವನ್‌ಕುಮಾರ್, ಲೋಕಾಯುಕ್ತ ಸಿ.ಪಿ.ಐ. ಸಂಗಮೇಶ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Share This Article
error: Content is protected !!
";