Ad imageAd image

ಸಾಗರ ಎಆರ್‌ಟಿಓ ಕಚೇರಿಗೆ ಲೋಕಾಯುಕ್ತ ಅನಿರೀಕ್ಷಿತ ಭೇಟಿ

Vijayanagara Vani
ಸಾಗರ ಎಆರ್‌ಟಿಓ ಕಚೇರಿಗೆ ಲೋಕಾಯುಕ್ತ ಅನಿರೀಕ್ಷಿತ ಭೇಟಿ
ಶಿವಮೊಗ್ಗ: ಆಗಸ್ಟ್ 01, ಶಿವಮೊಗ್ಗ ಕರ್ನಾಟಕ ಲೋಕಾಯುಕ್ತ, ಎಂ.ಹೆಚ್ ಪೊಲೀಸ್ ಅಧೀಕ್ಷಕರು, ಮಂಜುನಾಥ್ ಚೌದರಿರವರು ಪೊಲೀಸ್ ನಿರೀಕ್ಷಕರಾದ ವೀರಬಸಪ್ಪ ಎಲ್ ಕುಸಲಾಪುರ ಮತ್ತು ಸಿಬ್ಬಂದಿಗಳೊ0ದಿಗೆ ಜುಲೈ 31 ರಂದು ಸಾಗರ ಎ.ಆರ್.ಟಿ.ಓ ಕಛೇರಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ಕೈಗೊಂಡಿರುತ್ತಾರೆ.
ಈ ಸಂದರ್ಭದಲ್ಲಿ ಸಾಗರ ಎ.ಆರ್.ಟಿ.ಓ ಕಛೇರಿಯ ಎ.ಆರ್.ಟಿ.ಓ ವೀರೇಶ್ ಡಿ.ಹೆಚ್ ಮತ್ತು ಐ.ಎಂ.ವಿ ಇನ್‌ಪೆಕ್ಟರ್ ವಾಸುದೇವ, ಕಛೇರಿ ಅಧೀಕ್ಷಕರು, ಸಿಬ್ಬಂದಿಯವರು ಮತ್ತು ಡಿಜಿಟಲ್ ಕಾರ್ಡ್ ಪ್ರಿಂಟಿoಗ್ ಸಿಬ್ಬಂದಿಯವರು ಹಾಜರಿದ್ದು, ಸಿಬ್ಬಂದಿಗಳ ಹಾಜರಾತಿ ಮಸ್ತಕ, ಕ್ಯಾಷ್ ಡಿಕ್ಲರೇಷನ್, ಚಲನವಲನ ವಹಿ, ದಸ್ತಾವೇಜುಗಳ ರಿಜಿಸ್ಟರ್‌ಗಳ, ಸಾರಥಿ ಮತ್ತು ವಾಹನ ತಂತ್ರಾ0ಶವನ್ನು ಪರಿಶೀಲಿಸಿ ಎಲ್.ಎಲ್.ಆರ್., ಡಿ.ಎಲ್., ಎಫ್.ಸಿ., ಹೊಸ ವಾಹನಗಳ ನೊಂದಣಿ, ವಾಹನಗಳ ವರ್ಗಾವಣೆ, ದಂಡವಸೂಲಿ, ಡಿಜಿಟಲ್ ಕಾರ್ಡ್ ಪ್ರಿಂಟಿ0ಗ್, ಆರ್.ಸಿ. ಕಾರ್ಡ್ ವಿತರಣೆ ಮತ್ತು ಸಕಾಲ ಯೋಜನೆಯಡಿಯಲ್ಲಿ ಬಾಕಿ ಇರುವ ಅರ್ಜಿಗಳಿಗೆ ಸಂಬ0ದ ಪಟ್ಟ ದಾಖಲಾತಿಗಳನ್ನು ಪರಿಶೀಲಿಸಿದ್ದು, ಪರಿಶೀಲನಾ ಸಮಯದಲ್ಲಿ ಕಂಡು ಬಂದ ನ್ಯೂನ್ಯತೆಗಳ ಬಗ್ಗೆ ಎ.ಆರ್.ಟಿ.ಓ ವೀರೇಶ್.ಡಿ.ಹೆಚ್ ರವರಿಗೆ ಸ್ಥಳದಲ್ಲಿಯೇ ಸೂಚನೆಗಳನ್ನು ನೀಡಲಾಗಿದ್ದು, ನ್ಯೂನ್ಯತೆಗಳ ಬಗ್ಗೆ ಕ್ರಮವಹಿಸಿ ಪಾಲನಾ ವರದಿಯನ್ನು ಸಲ್ಲಿಸುವಂತೆ ಸೂಚನೆಗಳನ್ನು ನೀಡಿರುತ್ತಾರೆ.
Share This Article
error: Content is protected !!
";