Ad image

ಸಾಗರ ತಾಲೂಕು ಕಚೇರಿಗೆ ಲೋಕಾಯುಕ್ತ ಅನಿರೀಕ್ಷಿತ ಭೇಟಿ

Vijayanagara Vani
ಸಾಗರ ತಾಲೂಕು ಕಚೇರಿಗೆ ಲೋಕಾಯುಕ್ತ ಅನಿರೀಕ್ಷಿತ ಭೇಟಿ
ಶಿವಮೊಗ್ಗ, ಜುಲೈ 24;  ಜು.24 ರಂದು ಬೆಳಿಗ್ಗೆ 11.00 ರಿಂದ ಮದ್ಯಾಹ್ನ 02:00 ಗಂಟೆ ವರೆಗೆ ಮಂಜುನಾಥ್ ಚೌಧರಿ ಎಂ.ಹೆಚ್ ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರು ಅಧಿಕಾರಿಗಳಾದ ಉಮೇಶ್ ಈಶ್ವರ ನಾಯ್ಕ ಡಿ.ಎಸ್.ಪಿ. ಮತ್ತು ಸಿಬ್ಬಂದಿಗಳೊಂದಿಗೆ ಸಾಗರ ತಾಲ್ಲೂಕ್ ಕಛೇರಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆಯನ್ನು ಕೈಗೊಂಡಿರುತ್ತಾರೆ.
ಈ ಸಮಯದಲ್ಲಿ ಸಾಗರ ತಾಲ್ಲೂಕಿನ ತಹಶೀಲ್ದಾರ್. ಗ್ರೇಡ್-2 ತಹಶೀಲ್ದಾರ್, ಶಿರಸ್ಥೆದಾರರು ಮತ್ತು ತಾಲ್ಲೂಕ್ ಕಛೇರಿಯ ಸಿಬ್ಬಂದಿಯವರು ಹಾಜರಿದ್ದು, ಹಾಜರಾತಿ ಮಸ್ತಕ, ಕ್ಯಾಷ್ ಡಿಕ್ಲರೇಷನ್, ಹಕ್ಕು ಪತ್ರ, ಮ್ಯೂಟೇಷನ್, ಚೌತಿಖಾತೆ, ವೃದ್ಧಾಪ್ಯವೇತನ, ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ಸಾಮಾಜಿಕ ಭದ್ರತೆ ಯೋಜನೆ, ಖಾತೆ ಬದಲಾವಣೆ, ಕರೆ ಒತ್ತುವರಿ ತೆರವು ಪ್ರಕರಣಗಳು, ಬಗರ್‌ಹುಕುಂ ಸಾಗುವಳಿ ಬಾಕಿ ಇರುವ ಅರ್ಜಿಗಳು ಮತ್ತು ಸಕಾಲ ಯೋಜನೆಯಲ್ಲಿ ಬಾಕಿ ಇರುವ ಅರ್ಜಿಗಳನ್ನು ಪರಿಶೀಲನೆ ಮಾಡಿದ್ದು. ಪರಿಶೀಲನೆ ಸಮಯದಲ್ಲಿ ಕಂಡು ಬಂದ ನ್ಯೂನ್ಯತೆಗಳ ಕುರಿತು ಚಂದ್ರಶೇಖರ್ ನಾಯ್ಕ ತಹಶೀಲ್ದಾರ್. ಸಾಗರ ತಾಲ್ಲೂಕ್, ಸಾಗರ ರವರಿಗೆ ಸೂಚನೆಗಳನ್ನು ನೀಡಿದ್ದು, ನ್ಯೂನ್ಯತೆಗಳ ಬಗ್ಗೆ ಕ್ರಮವಹಿಸಿ ಪಾಲನಾ ವರದಿ ಸಲ್ಲಿಸುವಂತೆ ಸೂಚನೆಗಳನ್ನು ನೀಡಿರುತ್ತಾರೆ
Share This Article
error: Content is protected !!
";