ಕಾರಟಗಿ: ವಾಲ್ಮೀಕಿ ಸಮಾಜದಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲು ನಿರ್ಧರಿಸಿರುವುದ-ರಿಂದ ಸರಕಾರದ ಆದೇಶದಂತೆ ಅ.7 ರಂದು ಸಾಂಕೇತಿ-ಕವಾಗಿ ಆಚರಣೆ ಮಾಡಲಾಗುವುದು ಎಂದು ತಹಸೀಲ್ದಾರ್ ಎಂ. ಕುಮಾರಸ್ವಾಮಿ ಹೇಳಿದರು.
ಪಟ್ಟಣದ ತಹಸೀಲ್ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಿವರೆಡ್ಡಿ ನಾಯಕ್ ಮಾತನಾಡಿ ಸಚಿವ ಶಿವರಾಜ ತಂಗಡಗಿಯವರ ನೇತೃತ್ವದಲ್ಲಿ ಅದ್ದೂರಿಯಾಗಿ ತಾಲೂಕು ಮಟ್ಟದ ವಾಲ್ಮೀಕಿ ಜಯಂತಿ ಆಚರಣೆ ಮಾಡಲು ಸಮಾಜದ ಬಂಧುಗಳು ನಿರ್ಧರಿಸಿರುತ್ತಾರೆ. ಹೀಗಾಗಿ ಸಚಿವರ ಜತೆಗೆ ಚರ್ಚೆ ನಡೆಸಿ ದಿನಾಂಕ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿದೇವಿ, ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್,
ವಾಲ್ಮೀಕಿ ಮಹಾಸಭಾದ ಜಿಲ್ಲಾಧ್ಯಕ್ಷ ಡಾ.ಕೆ. ಎನ್. ಪಾಟೀಲ್, ತಾಲೂಕು ಅಧ್ಯಕ್ಷ ಗಿರಿಯಪ್ಪ ಬೂದಿ, ಪ್ರಧಾನ ಕಾರ್ಯದರ್ಶಿ ಸೋಮನಾಥ ವಕೀಲರು,ಸಮಾಜದ ಮುಖಂಡರಾದ ನಾಗರಾಜ್ ಬಿಲ್ಗಾರ್, ನಾಗರಾಜ್ ಬೂದಿ ವಕೀಲರು, ದೇವರಾಜ ನಾಯಕ ಹೊಸಜೂಟಗಿ,
ಲಿಂಗೇಶ್ ಕಲ್ಲಗುಡಿ, ಪುರಸಭೆ ಸದಸ್ಯರಾದ ದೊಡ್ಡಬಸವ ಬೂದಿ,
ಆಧಿಕಾರಿಗಳು ಹನುಮಂತಪ್ಪ ತೊಂಡಿಹಾಳ, ತಿಮ್ಮಣ್ಣ ನಾಯಕ್, ಹನುಮಂತಪ್ಪ ಗುರಿಕಾರ್, ಶಿವಶಂಕರ್ ನಾಯಕ್, ಪರಶುರಾಮ್ ಬಣ್ಣ ಸೇರಿ ನಾನಾ ಇಲಾಖೆ ಅಧಿಕಾರಿಗಳು ಇದ್ದರು.