ಸಿರುಗುಪ್ಪ ಅ.02. ತಾಲೂಕಿನ ಕರ್ಚಿಗನೂರು ಗ್ರಾಮದಲ್ಲಿ ನಿರ್ಮಿಸಲಾದ ಮಹಿಷಾಸುರ ಮರ್ದಿನಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮವನ್ನುಶ್ರೀ ಅಭಿನವ ಮಹಾಂತ ಮಹಾಸ್ವಾಮಿಗಳು , ಬಟಗೂರ್ಕಿ ಬಸವಲಿಂಗ ಸ್ವಾಮಿಗಳು, ಲೋಕಾಪುರ ಮಹಾಂತ ಸ್ವಾಮಿಗಳು, ಶ್ರೀ ಸಿದ್ದಬಸವ ಮಹಾಸ್ವಾಮಿಗಳು ಹಳೇಕೋಟೆ, ಚಡಚಣ ಸ್ವಾಮಿಗಳು ನೆರವೇರಿಸಿದರು.
ಕರ್ಚಿಗನೂರಿನ ಸಕಲ ಸದ್ಭ ಭಕ್ತರ ಸಮ್ಮುಖದಲ್ಲಿ ಕಳಶಾರೋಹಣ ಮಹೋತ್ಸವವು ಅತ್ಯಂತ ವೈಭವದಿಂದ ನೆರವೇರಿತು.
ದೇವಾಲಯದ ಆಡಳಿತ ಸಮಿತಿ ಸದಸ್ಯರು ಮತ್ತು ಪ್ರಮುಖ ಗಣ್ಯರ ಉಪಸ್ಥಿತಿಯಲ್ಲಿ ಭಕ್ತರ ಜಯಘೋಷದ ಮಧ್ಯೆ ಕಳಶಾರೋಹಣ ಮಾಡಲಾಯಿತು..
ಮಹಿಷಾಸುರಮರ್ದಿನಿ ದೇವಸ್ಥಾನದ ಕಳಸಾರೋಹಣ.
