ದಾವಣಗೆರೆ ಡಿಸೆಂಬರ್ 16 , ಪಟ್ಟಣ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯೊಳಗೆ ಮ್ಯಾನ್ಯುಯಲ್ ಸ್ಕ್ಯಾವೇಂಜರ್ ಫಲಾನುಭವಿಗಳ ಸಮೀಕ್ಷೆ ನಡೆಸಿ ನಿಖರವಾದ ಮಾಹಿತಿ ಮತ್ತು ಅಂಕಿಅಂಶ ನೀಡಬೇಕೆಂದು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ತಿಳಿಸಿದರು.
ಅವರು (ಡಿ.16) ಜಿಲ್ಲಾಡಳಿತ ಭವನದಲ್ಲಿ ಸೋಮುವಾರ ಹಮ್ಮಿಕೊಳ್ಳಲಾಗಿದ್ದ. ಮ್ಯಾನ್ಯುಯಲ್ ಸ್ಕ್ಯಾವೇಂಜರ್ ನೇಮಕಾತಿ ನಿಷೇದ ಮತ್ತು ಪುನರ್ ವಸತಿ ಕಾಯ್ದೆ-2013ರಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮೀಕ್ಷೆಯನ್ವಯ ಇಲ್ಲಿಯವರೆಗೂ ಸ್ವೀಕೃತವಾದ ಫಲಾನುಭವಿಗಳ ಅರ್ಜಿಗಳನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಸ್ವೀಕೃತವಾಗದ ಅರ್ಜಿಗಳನ್ನು ಕಾಲ ಮಿತಿಯೊಳಗೆ ಪರಿಶೀಲನೆ ಮಾಡಿ ಕಳುಹಿಸಲಾಗುವುದು ಎಂದು ತಿಳಿಸಿದರು.
ಮ್ಯಾನ್ಯುಯಲ್ ಸ್ಯಾವೇಂಜರ್ಗಳ ಫಲಾನುಭವಿಗಳು; ದಾವಣಗೆರೆ 245, ಹರಿಹರ 78, ಚನ್ನಗಿರಿ 41, ಮಲೆಬೆನ್ನೂರು 3, ಹೊನ್ನಾಳಿ 8, ಜಗಳೂರು 13 ಸೇರಿ ಒಟ್ಟು 388 ಮ್ಯಾನ್ಯುಯಲ್ ಸ್ಕ್ಯಾವೇಂಜರ್ಗಳಿದ್ದು ಇದರಲ್ಲಿ 372 ಮ್ಯಾನ್ಯುಯಲ್ ಸ್ಕ್ಯಾವೇಂಜರ್ಗಳನ್ನು ಗುರುತಿಸಿ ಗುರುತಿನ ಚೀಟಿ ನೀಡಲಾಗಿದೆ. ಇದರಲ್ಲಿ 16 ಬಾಕಿ ಇದ್ದು 4 ಜನ ಮರಣ ಹೊಂದಿದ್ದಾರೆ. ಇನ್ನೂ 12 ಫಲಾನುಭವಿಗಳು ಸ್ಥಳದಲ್ಲಿ ವಾಸ ಇಲ್ಲದ ಕಾರಣ ಗುರುತಿನ ಚೀಟಿ ವಿತರಿಸಲು ಸಾಧ್ಯವಾಗಿರುವುದಿಲ್ಲ.
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ 2017 ರಲ್ಲಿ 34 ಜನ, 2022 ರಲ್ಲಿ 106 ಜನ ಹಾಗೂ 2023 ರಲ್ಲಿ 110 ಜನ ಒಟ್ಟು 250 ಜನರನ್ನು ನೇರ ನೇಮಕಾತಿ ಮೂಲಕ ಪೌರಕಾರ್ಮಿಕರ ಹುದ್ದೆಗೆ ವರ್ಷವಾರು ಭರ್ತಿ ಮಾಡಿಕೊಳ್ಳಲಾಗಿರುತ್ತದೆ. ಇನ್ನುಳಿದ ಖಾಲಿ ಹುದ್ದೆಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದ್ದು. ಸರ್ಕಾರದ ಆದೇಶ ಬಂದ ನಂತರ ಮುಂದಿನ ಪ್ರಕ್ರಿಯೆ ನಡೆಯಲಿದೆ.
ಪೌರಕಾರ್ಮಿಕರಿಗೆ ಉತ್ತಮ ಗುಣಮಟ್ಟದ ಪೆÇೀಷ್ಟಿಕಾಂಶವುಳ್ಳ ಹಾಗೂ ರುಚಿಕರವಾದ ಆಹಾರ ನೀಡಲು ಮೆನು ಬದಲಾಯಿಸಲು ಅಗತ್ಯ ಕ್ರಮವಹಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ದಾವಣಗೆರೆ ಮಹಾನಗರಪಾಲಿಕೆ, ಹರಿಹರ ಮತ್ತು ನಗರಸಭೆ, ಚನ್ನಗಿರಿ, ಹೊನ್ನಾಳಿ, ಮಲೇಬೆನ್ನೂರು ಪುರಸಭೆ, ಜಗಳೂರು, ನ್ಯಾಮತಿ ಪಟ್ಟಣ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ಮತ್ತು ನೇರ ಪಾವತಿ ಪೌರಕಾರ್ಮಿಕರಿಗೆ ಹಾಗೂ ಸ್ವಚ್ಚತಾ ಸಿಬ್ಬಂದಿಗಳಿಗೆ ಗುರುತಿನ ಚೀಟಿಯನ್ನು ನೀಡಿರುವುದಾಗಿ ಸಭೆಯಲ್ಲಿ ತಿಳಿಸಿಲಾಯಿತು.
ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 742 ಜನ ಸ್ವಚ್ಛತಾ ಸಿಬ್ಬಂದಿಗಳಿಗೆ ಪ್ರಧಾನ ಮಂತ್ರಿ ಸುರಕ್ಷ ಭೀಮ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆಯಡಿ ವಿಮಾ ಪಾಲಿಸಿಗಳನ್ನು ಮಾಡಲಾಗಿದೆ. ಹಾಗೂ 458 ಪೌರ ಕಾರ್ಮಿಕರಿಗೆ, 12 ಕ್ಲೀನರ್ಗಳಿಗೆ , 21 ಲೋಡರ್ಸಗಳಿಗೆ, 19 ಯುಜಿಡಿ ಹೆಲ್ಪರ್ಸಗಳಿಗೆ, 13 ಸೀನಿಯರ್ ಹೆಲ್ಪರ್ಸಗಳಿಗೆ , 26 ಸ್ಯಾನಿಟರಿ ಸೂಪರ್ ವೈಸರ್, 193 ವಾಹನ ಚಾಲಕರು ಸೇರಿದಂತೆ ಒಟ್ಟಾರೆಯಾಗಿ 742 ಕಾರ್ಮಿಕರಿಗೆ ವಿಮಾ ಪಾಲಿಸಿಗಳನ್ನು ಮಾಡಿಸಲಾಗಿರುತ್ತದೆ.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೈಗೊಂಡ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಗಳ ಮರು ಸಮೀಕ್ಷೆಯ ವರದಿ ಪ್ರಕಾರ ಸ್ವೀಕೃತವಾದ 224 ಅರ್ಜಿಗಳನ್ನು ಪರಿಶೀಲಿಸಲಾಗಿದೆ ಎಂದು ಜಿಲ್ಲಾ ನಗರರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕರಾದ ಎನ್ ಮಹಾಂತೇಶ್ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ , ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ವಿಜಯ್ಕುಮಾರ್ ಎಂ.ಸಂತೋಷ, ಡಿ.ಎಚ್.ಓ. ಡಾ; ಷಣ್ಮಖಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ನಾಗರಾಜ್ ಮತ್ತು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು
ಮ್ಯಾನ್ಯುಯಲ್ ಸ್ಕ್ಯಾವೇಂಜರ್ಗಳ ಸಭೆ ಪರಿಶೀಲನೆ ನಡೆಸಿ ಫಲಾನುಭವಿಗಳ ನಿಖರ ವಿವರ ಸಲ್ಲಿಕೆಗೆ ಸೂಚನೆ
