ಮಾನ್ವಿ. ಪಟ್ಟಣದ ಸಿವಿಲ್ ಮತ್ತು ಜೆ. ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ 2 ಸಾವಿರಕ್ಕೂ ಹೆಚ್ಚು ರಾಜಿಯಾಗಬಲ್ಲ ವಿವಿಧ ಮೊಕದ್ದಮೆಗಳನ್ನು ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶರಾದ ಶಿವರಾಜ್. ವಿ. ಸಿದ್ದೇಶ್ವರ್ ಮತ್ತು ಸಿವಿಲ್ ನ್ಯಾಯಾಧೀಶರಾದ ಆನಂದ ಹೆಚ್. ಕೊಣ್ಣೂರು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿದರು.
ಮಾನ್ವಿ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಅನೇಕ ಪ್ರಕರಣಗಳನ್ನು ಕಕ್ಷಿದಾರ ಸಮ್ಮುಖದಲ್ಲಿ ರಾಜಿ ಸಂದಾನ ಮಾಡಿದರು.
ಹಿರಿಯ ಶ್ರೇಣಿ ಸಿವಿಲ್ ಮತ್ತು ಜೆ.ಎ..ಎಪ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶಿವರಾಜ ವಿ.ಸಿದ್ದೇಶ್ವರ 593 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿದರು, ಸಿವಿಲ್ ಮತ್ತು ಜೆ.ಎಂ.ಎಪ್.ಸಿ.ನ್ಯಾಯಾಲಯದ ನ್ಯಾಯಾಧೀಶರಾದ ಆನಂದ ಹೆಚ್.ಕೊಣ್ಣೂರು 1525 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು,
ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿ ಅನೇಕ ವರ್ಷಗಳಿಂದ ದೂರವಿದ್ದ ದಂಪತಿಗಳನ್ನು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಆನಂದ ಹೆಚ್.ಕೊಣ್ಣೂರ ಪರಸ್ಪರ ತಿಳಿಸಿ ಹೇಳುವ ಮೂಲಕ ರಾಜಿ ಸಂಧಾನ ಮಾಡಿಸಿದ್ದು ವಿಶೇಷವಾಗಿತ್ತು , ದಂಪತಿಗಳು ಅನೇಕ ವರ್ಷಗಳಿಂದ ದೂರವಿದ್ದು ಜೀವನಾಂಶಕ್ಕಾಗಿ ನ್ಯಾಯಾಲಯದಲ್ಲಿ ವಕೀಲರ ಮೂಲಕ ಅರ್ಜಿ ಸಲ್ಲಿಸಿದರು ಅವರಿಗೆ ಕೂಡಿ ಬಾಳುವಂತೆ ತಿಳಿ ಹೇಳಿದ ನಂತರ ಇಂದು ನಡೆದ ಲೋಕದಲತ್ ನಲ್ಲಿ ಪರಸ್ಪರ ಒಪ್ಪಿ ಪುನಃ ದಾಂಪತ್ಯ ಜೀವನ ನಡೆಸುವುದಾಗಿ ರಾಜಿಯಾಗಿದ್ದರಿಂದ ನ್ಯಾಯಾಲಯದಲ್ಲಿ ಪರಸ್ಪರ ಹೂ ಮಾಲೆ ಬದಲಾಯಿಸಿಕೊಂಡು ಸಿಹಿ ಹಂಚಿ ದಂಪತಿಗಳು ಒಂದಾಗಿ ನಡೆದಿದ್ದು ನ್ಯಾಯಾಲಯದಲ್ಲಿ ಖುಷಿಯ ವಾತಾವರಣ ಮೂಡಿಸಿತು,
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ರವಿಕುಮಾರ್ ಪಾಟೀಲ್, ಪ್ರಧಾನ ಕಾರ್ಯದರ್ಶಿ ಚನ್ನಬಸವ ನಾಯಕ ಬಲ್ಲಟಗಿ,ಉಪಾಧ್ಯಕ್ಷರಾದ ಮನೋಹರ ವಿಶ್ವಕರ್ಮ,ಕೊರವಯ್ಯ ನಾಯಕ, ಖಜಾಂಚಿ ದತ್ತಾತ್ರೇಯ ಕೊಟ್ನೇಕಲ್, ಜಂಟಿ ಕಾರ್ಯದರ್ಶಿಗಳಾದ ಈಶಪ್ಪ ಬೈಲ್ ಮರ್ಚೇಡ್, ಮಲ್ಲೇಶ ಮಾಚನೂರು, ಹಿರಿಯ ನ್ಯಾಯವಾದಿಗಳಾದ ಗುಮ್ಮ ಬಸವರಾಜ,ಬಿ.ಕೆ.ಅಮರೇಶಪ್ಪ, ಹನುಮಂತಪ್ಪ ಮುಷ್ಠೂರು, ರಾಜಾ ಶ್ಯಾಮ ಸುಂದರ ನಾಯಕ, ಲಕ್ಷ್ಮೀ ದೇವಿ ನಾಯಕ, ಸೆಟ್ಯಾಲ್ಲಾ ಸರ್ಲೆಟ್, ಶಿವಶರಣಪ್ಪ, ಮಲ್ಲಿಕಾರ್ಜುನ ಮೇಟಿ, ಯಲ್ಲಪ್ಪ ಹಿರೇಬಾದರದಿನ್ನಿ, ಹನುಮಯ್ಯ ರಂಗದಾಳ,ಹನುಮಂತರಾಯ ಕಪಗಲ್, ಮೌನೇಶ ರಾಠೋಡ್, ನಾಗರಾಜ ಭಂಡಾರಿ,ಯಲ್ಲಪ್ಪ ನಾಯಕ ಮುಷ್ಕೂರು, ರಾಘವೇಂದ್ರ ಜಾನೇಕಲ್, ಶ್ರೀನಿವಾಸ ನಂದಿಹಾಳ, ಚಂದ್ರಶೇಖರ ಬೈಲ್ ಮರ್ಚೇಡ್, ,ವಿರೂಪಾಕ್ಷಿ ಮುಷ್ಕೂರು,ಬಸವರಾಜ ದೇವಿಪುರ, ಚಂದ್ರಶೇಖರ ನಾಯ್ಕ್ , ಗೂಗಲ್ ನಾಗರಾಜ, ಸೇರಿದಂತೆ ಹಿರಿಯ ವಕೀಲರು ಮಹಿಳಾ ವಕೀಲರು ಸೇರಿದಂತೆ ಇತರರು ಇದ್ದರು