Ad image

ಮರಿಯಮ್ಮನಹಳ್ಳಿ: ಮದುವೆ, ಸಾಂಸ್ಕೃತಿಕ ‘ಕಾರ್ಯಕ್ರಮಗಳು, ಶುಭಕಾರ್ಯಕ್ರಮಗಳು ಗ್ರಾಮದಲ್ಲಿ ನಡೆಯಲು ಸುಸಜ್ಜಿತವಾದ ಸಮುದಾಯ ಭವನ ನಿರ್ಮಿಸಲು ಮುಂದಾಗಿದ್ದೇವೆ

Vijayanagara Vani
ಮರಿಯಮ್ಮನಹಳ್ಳಿ: ಮದುವೆ, ಸಾಂಸ್ಕೃತಿಕ ‘ಕಾರ್ಯಕ್ರಮಗಳು, ಶುಭಕಾರ್ಯಕ್ರಮಗಳು ಗ್ರಾಮದಲ್ಲಿ ನಡೆಯಲು ಸುಸಜ್ಜಿತವಾದ ಸಮುದಾಯ ಭವನ ನಿರ್ಮಿಸಲು ಮುಂದಾಗಿದ್ದೇವೆ

ಮರಿಯಮ್ಮನಹಳ್ಳಿ: ಮದುವೆ, ಸಾಂಸ್ಕೃತಿಕ ‘ಕಾರ್ಯಕ್ರಮಗಳು, ಶುಭಕಾರ್ಯಕ್ರಮಗಳು ಗ್ರಾಮದಲ್ಲಿ ನಡೆಯಲು ಸುಸಜ್ಜಿತವಾದ ಸಮುದಾಯ ಭವನ ನಿರ್ಮಿಸಲು ಮುಂದಾಗಿದ್ದೇವೆ.ಹೋಬಳಿ ವ್ಯಾಪ್ತಿಯ ಗ್ರಾಮಾಂತರ ಜನರು ದೊಡ್ಡ ದೊಡ್ಡ ನಗರ ಹಾಗೂ ಪಟ್ಟಣಕ್ಕೆ ತೆರಳಿ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲು ಕಷ್ಟ ವಾಗುತ್ತದೆ. ಆದ್ದರಿಂದ ಜನರಿಗೆ ಹಣದ ಭಾರವನ್ನು ಕಡಿಮೆ ಮಾಡಲಿಕ್ಕೆ, ಮತ್ತು ಬಡವರಿಗೆ ಅನುಕೂಲ ವಾಗಲೆಂದು ಹೋಬಳಿ ವ್ಯಾಪ್ತಿಯಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ  ಬಿಎಂಎಂ ಮುಂದಾಗಿದೆ, ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಗಣೇಶ್ ಹೆಗಡೆ ತಿಳಿಸಿದರು.
ಸಮೀಪದ ಗೊಲ್ಲರಹಳ್ಳಿ ಗ್ರಾಮದಲ್ಲಿ ಬಿಎಂ.ಎಂ. ಫೌಂಡೇಶನ್ ಸಹಯೋಗದಲ್ಲಿ 70ಲಕ್ಷರೂ.ಗಳಲ್ಲಿ ನಿರ್ಮಿ ಸಲಿರುವ ಸಮುದಾಯಭವನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಸಮುದಾಯದ ಭವನ, ಶಾಲೆಗಳ ಅಭಿವೃದ್ಧಿ, ಹಾಗೂ ಜನರಿಗೆ ಬೇಕಾದ ಮೂಲಭೂತ ಸೌಕರ್ಯ ಗಳಗಳನ್ನು ಒದಗಿಸುತ್ತಾ ಬರಲಾಗಿದೆ, ಅಲ್ಲದೇ33ಹಳ್ಳಿಗಳಲ್ಲಿ ಎಲ್ಲಾ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಿಸುತ್ತಾ ಬಂದಿದ್ದೇವೆ, ಇನ್ನೂ ಇನ್ನೂ ಮುಂದಿನ ದಿನಗಳಲ್ಲಿ ಹಣದ ವ್ಯವಸ್ಥೆ ನೋಡಿಕೊಂಡು ಹಂತಹಂತವಾಗಿ ಹಳ್ಳಿಗಳಲ್ಲಿ ವಿವಿಧ ರೀತಿಯ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದ ಎಂದರು.
ಈ ಸಂಧರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಚಿನ್ನಾಪುರಿ, ಮುಖಂಡರಾದ ಎಸ್.ಕೃಷ್ಣನಾಯ್ಕ, ಗರಗ ಪ್ರಕಾಶ್, ದಾಸರ ವೆಂಕಟೇಶ, ಅಡವಿಬಸಪ್ಪ, ಐ. ಮಲ್ಲಪ್ಪ ಚೆನ್ನಪ್ಪ, ಬಿ.ಕೆ.ಅನಂತ, ತಿರುಪತೆಪ್ಪ, ಷಣ್ಮುಪ್ಪ, ಕರಿಯಪ್ಪ, ದುರುಗಪ್ಪ, ಬುಳ್ಳಪ್ಪ, ಪಂಪಾಪತಿ, ಪೂಜಾರ ಹನುಮಂತಪ್ಪ, ಪರಶುರಾಮ, ಬಿ.ಎಂ.ಎಂ, ಜೆ.ಎಸ್.ಡಬ್ಲ್ಯೂ 6 ಅಧಿಕಾರಿಗಳಾದ ಗಿರೀಶ್, ಅರುಣ ಕುಮಾರ್, ಮಂಜುನಾಥ, ಡಿ.ಬಿ.ನಾಯ್ ಸೇರಿದಂತೆ ಇತರರಿದ್ದರು.

Share This Article
error: Content is protected !!
";