ಗಂಗಾವತಿ: ನಗರದ ಹಿರೇಜಂತಕಲ್ ವಿರುಪಾಪುರದ ಆರ್ಯವೈಶ್ಯ ಸಮಾಜದ ಸಂಯುಕ್ತ ಆಶ್ರಯದಲ್ಲಿ 19ನೇ ವರ್ಷದ ದೇವಸ್ಥಾನದ ವಾರ್ಷಿಕೋತ್ಸವ ಅಂಗವಾಗಿ ಮೊದಲನೇ ಸಾಮೂಹಿಕ ಉಪನಯನ ಕಾರ್ಯಕ್ರಮವನ್ನು ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಟಿ.ನೇತೃತ್ವದಲ್ಲಿ ಮತ್ತು ಗುರುಭೀಮ ಭಟ್ಟ ಜೋಷಿ ಸಾನಿಧ್ಯದಲ್ಲಿ ನೆರವೇರಿಸಲಾಯಿತು. ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ 20 ಕುಟುಂಬಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಟಿ ಮಾತನಾಡಿ 19ನೇ ವರ್ಷದ ದೇವಸ್ಥಾನದ ವಾರ್ಷಿಕೋತ್ಸವದ ಅಂಗವಾಗಿ ಮೊದಲನೇ ವರ್ಷದ ಸಾಮೂಹಿಕ ಉಪನಯನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಹೆಚ್ಚಿನ ರೀತಿಯಲ್ಲಿ 20 ಕುಟುಂಬಗಳು ಭಾಗವಹಿಸಿದ್ದು ನಮಗೆ ನಮ್ಮ ಸಮಾಜಕ್ಕೆ ಸಂತಸ ತಂದಿದೆ ಎಂದು ಹೇಳಿದರು. ಇದೇ ರೀತಿಯಲ್ಲಿ ಹೆಚ್ಚಿನ ರೀತಿಯಲ್ಲಿ ಭಾಗವಹಿಸಿ ಸಮಾಜದ ಗೌರವಕ್ಕೆ ಪಾತ್ರರಾಗುವರಾಗಬೇಕು.ತಾಯಿ ಕನ್ನಿಕಾ ಪರಮೇಶ್ವರಿ ಹೆಚ್ಚಿನ ಆಯಸ್ಸು ಆರೋಗ್ಯವನ್ನು ಕೊಟ್ಟು ಕಾಪಾಡಲಿ ವಿಶೇಷವಾಗಿ ಮಹಿಳಾ ಮಂಡಳಿಯ ಸದಸ್ಯರಿಣಿಯರಿಗೆ ಆರ್ಯವೈಶ್ಯ ಸಮಾಜದಿಂದ ಹೃತ್ಪೂರ್ವಕ ವಂದನೆಗಳು ಎಂದು ತಿಳಿಸಿದರು. ಜೊತೆಗೆ ಪ್ರತಿ ವರ್ಷದಂತೆ ಈ ವರ್ಷವು ವೆಂಕಟಗಿರಿಯ ಲಕ್ಷ್ಮಿ ವೆಂಕಟೇಶ ದೇವಸ್ಥಾನಕ್ಕೆ ಪಾದಯಾತ್ರೆ. ನವ ಬೃಂದಾವನ ಪಾದಯಾತ್ರೆ.
ಮಂತ್ರಾಲಯ ಪಾದಯಾತ್ರೆ. ನವಲಿ ಬೋಗಾಪರೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆಗೆ ಎಲ್ಲರೂ ಭಾಗವಹಿಸಿ ಮಳೆಯ ಬಾರದೆ ಸಂಕಷ್ಟದಲ್ಲಿರುವ ನಾವು ನಮ್ಮೆಲ್ಲರಿಗೂ ಮತ್ತು ಈ ನಾಡಿನ ರೈತರಿಗೆ ಒಳ್ಳೆಯದಾಗಲಿ ಆದಷ್ಟು ಬೇಗ ಮಳೆ ಬರಲಿ ಭೂಮಿ ತಂಪಾಗಲಿ. ಸುಖ. ಸಮೃದ್ಧಿ. ಶಾಂತಿ. ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಟಿ.
ನಗರ ಸಭೆ ಸದಸ್ಯರಾದ ಎಸ್. ರಾಘವೇಂದ್ರ ಶ್ರೇಷ್ಟಿ. ಗಂಗಾಧರ. ಜಿ ಆರ್ ಎಸ್ ಸತ್ಯನಾರಾಯಣ. ಹಣವಾಳ ಚಂದ್ರಶೇಖರ. ಆನೆಗೊಂದಿ ಗೋಪಾಲ ಶ್ರೇಷ್ಟಿ. ದಮ್ಮೂರು ಸುರೇಶ. ದರೋಜಿ ವೆಂಕಟೇಶ. ಸಂತೋಷ ಹೇಮಗುಡ್ಡ. ದರೋಜಿ ಮಲ್ಲಿಕಾರ್ಜುನ. ದಮ್ಮೂರು ರವಿಕುಮಾರ ಬೆನ್ನೂರ್ ಪ್ರಹ್ಲಾದ. ಅಶೋಕ್ ಗುಡಕೋಟೆ ಸೇರಿದಂತೆ ನವ ಬೃಂದಾವನ ಭಜನಾ ಮಂಡಳಿಯ ಅಧ್ಯಕ್ಷರಾದ ದರೋಜಿ ನರಸಿಂಹ ಶ್ರೇಷ್ಟಿ.ಮತ್ತು ಭಜನಾ ಮಂಡಳಿಯ ಸದಸ್ಯರು ಹಾಗೂ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ದಮ್ಮೂರು ರುಕ್ಮಿಣಿ ಮಹಿಳಾ ಮಂಡಳಿಯ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.