Ad image

ಹೊಸ ದೇವಲಾಪುರದಲ್ಲಿ ಅರ್ಥಪೂರ್ಣ FLN ಮಕ್ಕಳ ಕಲಿಕಾ ಹಬ್ಬ-ಎಂಟಿ ಶಾಂತ

Vijayanagara Vani
ಹೊಸ ದೇವಲಾಪುರದಲ್ಲಿ ಅರ್ಥಪೂರ್ಣ FLN ಮಕ್ಕಳ ಕಲಿಕಾ ಹಬ್ಬ-ಎಂಟಿ ಶಾಂತ

ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದ ಚಟುವಟಿಕೆಗಳ ಬಲವರ್ಧನೆಗೆ ಕಲಿಕಾ ಹಬ್ಬವು ಸಂತೋಷದಾಯಕ ಹಾಗೂ ಅನುಭವಯುಕ್ತ ಕಲಿಕೆಯ ವಾತಾವರಣವನ್ನು ಪ್ರೇರೇಪಿಸುತ್ತದೆ ಎಂದು ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ತಮ್ಮನ ಗೌಡ ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೆಂಚನಗುಡ್ಡ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎಂ ಟಿ ಶಾಂತ ಮಾತನಾಡುತ್ತಾ ಒಂದರಿಂದ ಐದನೇ ತರಗತಿ ಮಕ್ಕಳನ್ನು ವಿವಿಧ ಕಲಿಕಾ ಆಟಗಳಲ್ಲಿ ಮತ್ತು ಚಟುವಟಿಕೆಗಳಲ್ಲಿ ಅಂದರೆ ಗಟ್ಟಿ ಓದುವುದು ,ಕಥೆ ಹೇಳುವುದು ,ಸುಂದರ ಕೈಬರಹ ಸಂತೋಷದಾಯಕ ಗಣಿತ, ಮೆಮೊರಿ ಪರೀಕ್ಷೆ, ರಸಪ್ರಶ್ನೆ ,ಪೋಷಕರು ಹಾಗೂ ಮಕ್ಕಳ ಸಹ ಸಂಬಂಧದ ವಲಯ ಹೀಗೆ ತೊಡಗಿಸುವುದರ ಮೂಲಕ ಮಕ್ಕಳಲ್ಲಿ ಈ ಕಲಿಕಾ ಹಬ್ಬವು ಸಹಯೋಗದ ಕಲಿಕೆಗೆ ಸ್ಥಳಾವಕಾಶವನ್ನು ನೀಡುವ ಮೂಲಕ ಮಕ್ಕಳು ಸಾಮಾಜೀಕರಣವಾಗುವುದನ್ನು ಪ್ರೋತ್ಸಾಹಿಸುತ್ತದೆ ಎಂದರು .
ಚಟುವಟಿಕೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಥಮ, ದ್ವಿತೀಯ,ತೃತೀಯ ಸ್ಥಾನ,ಪ್ರಮಾಣ ಪತ್ರಗಳು ಹಾಗೂ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಈ ಸಂದರ್ಭದಲ್ಲಿ ಇಲಾಖೆಯ ಇನ್ನಿತರ ಮೇಲಾಧಿಕಾರಿಗಳಾದ ಸುರೇಶ, ವೀರೇಶ, ಇತರರಿದ್ದರು.ಬೇರೆ ಬೇರೆ ವಲಯದ ತೀರ್ಪುಗಾರ ಶಿಕ್ಷಕರು, ವಲಯದ ಸಂಪನ್ಮೂಲ ಶಿಕ್ಷಕರು,
ಎಸ್ ಡಿ ಎಂ ಸಿ ಅಧ್ಯಕ್ಷರಾದ ಸರದಾರಪ್ಪ ,ಶಾಲಾ ಮುಖ್ಯಗುರುಗಳಾದ ಪದ್ಮಾವತಿ ಶಿಕ್ಷಕರಾದ ಶಶಿಕಲಾ ,ಬ್ಯಾಳಿ ಮಂಜುಳಾ, ಮಾಳಮ್ಮ, ಜಯಲಕ್ಷ್ಮಿ ಇನ್ನುಳಿದಂತೆ ವಿವಿಧ ಶಾಲೆಗಳ ಮುಖ್ಯ ಗುರುಗಳು ,ಶಿಕ್ಷಕರು ,ಪೋಷಕರು ,ಮಕ್ಕಳು ಹಾಜರಾಗಿ ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರುಗಲು ಸಾಕ್ಷಿದಾರರಾದರು.

Share This Article
error: Content is protected !!
";