ಮಾನ್ವಿ: ತೀವ್ರ ಕುತೂಹಲ ಕೆರಳಿಸಿದ್ದ ಮಾನ್ವಿ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಇಂದು ನಡೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆದ್ದು ಪುರಸಭೆ ಪ್ರವೇಶಿಸಿದ ವಾರ್ಡ್ ನಂ.16ರ ಸದಸ್ಯೆ ಲಕ್ಷ್ಮೀ ವೀರೇಶ ಅಧ್ಯಕ್ಷರಾಗಿ ಹಾಗೂ ವಾರ್ಡ್ ನಂ.8ರ ಸದಸ್ಯೆ ಮೀನಾಕ್ಷಿ ಡಿ.ರಾಮಕೃಷ್ಣ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ಬೆಳಿಗ್ಗೆ 10ಗಂಟೆಗೆ ಚುನಾವಣಾಧಿಕಾರಿ ತಹಸೀಲ್ದಾರ್ ರಾಜು ಪಿರಂಗಿ ಅವರಿಗೆ ಅಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂ.ಸದಸ್ಯೆ ಲಕ್ಷ್ಮೀ ವೀರೇಶ ಅವರು ಉಪಾಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂ.8ರ ಸದಸ್ಯೆ ಮೀನಾಕ್ಷಿ ರಾಮಕೃಷ್ಣ ಅವರು ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾವುದೆ ನಾಮಪತ್ರಗಳು ಸಲ್ಲಿಕೆಯಾಗಿರಲ್ಲಿ. ಆದ್ದರಿಂದ ಚುನಾವಣೆ ಅಧಿಕಾರಿಗಳು ಅಧ್ಯಕ್ಷೆ ಸ್ಥಾನಕ್ಕೆ ಲಕ್ಷ್ಮೀ ವೀರೇಶ ಹಾಗೂ ಉಪಾಧ್ಯಕ್ಷರನ್ನಾಗಿ ಮೀನಾಕ್ಷಿ ರಾಮಕೃಷ್ಣರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಮೊದಲ ಬಾರಿಗೆ ಗೆದ್ದು ಪುರಸಭೆ ಪ್ರವೇಶಿಸಿದ ವಾರ್ಡ್ ನಂ.16ರ ಸದಸ್ಯೆ ಲಕ್ಷ್ಮೀ ವೀರೇಶ ಅವರು ಮೊದಲ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ. ವಾರ್ಡ್ ನಂ.8ರ ಸದಸ್ಯೆ ಮೀನಾಕ್ಷಿ ಅವರ ಪತಿ ಡಿ.ರಾಮಕೃಷ್ಣ ಅವರು 1996ರಲ್ಲಿ ಉಪಾಧ್ಯಕ್ಷರಾಗಿದ್ದರು.ಮತ್ತೆ 2024ರಲ್ಲಿ ಅವರ ಪತ್ನಿ ಮೀನಾಕ್ಷಿ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಪತಿ ಪತ್ನಿ ಇಬ್ಬರು ಉಪಾಧ್ಯಕ್ಷರಾದಂತಾಗಿದೆ. ಕಾಂಗ್ರೆಸ್ ಹೈಕಮಾಂಡ್ ಈ ಬಾರಿಯ ಕಳದ ಎರಡು ಅವಧಿಯಲ್ಲಿ ಹಿಂದುಳಿದ ವರ್ಗದ ಮುಸ್ಲಿಂ ಸಮುದಾಯಕ್ಕೆ ಅವಕಾಶವನ್ನು ಕಲ್ಪಿಸಿತ್ತು. ಉಳಿದ ಮೂರನೆ ಕೊನೆಯ ಅವಧಿಗೆ ಹಿಂದುಳಿದ ವರ್ಗದ ತೋಗಟಿವೀರ ಕ್ಷೇತ್ರಿಯ ಸಮುದಾಯಕ್ಕೆ ಮಣೆ ಹಾಕುವ ಮೂಲಕ ಸಮಾಜಿಕ ನ್ಯಾಯದ ಅಡಿಯಲ್ಲಿ ಮೊದಲ ಬಾರಿಗೆ ಗೆದ್ದು ಪುರಸಭೆ ಪ್ರವೇಶಿಸಿದ ವಾರ್ಡ್ ನಂ.16ರ ಸದಸ್ಯೆ ಲಕ್ಷ್ಮೀ ವೀರೇಶ ಅವರ ಪತ್ನಿಗೆ ಆದ್ಯತೆಯನ್ನು ನೀಡಿದೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಪಕ್ಷ ಹಿರಿಯ ಮುಖಂಡರಾದ ಖಾಲಿದ್ ಖಾದ್ರಿ ಸಾಹೇಬ್ ಗುರು, ಮಹಾಂತೇಶಸ್ವಾಮಿ ರೌಡೂರು,ವಕೀಲ ಶಿವಾರಾಜ ನಾಯಕ,ರಾಜಾ ಸುಭಾಷ್ ನಾಯಕ, ಬಿ.ಕೆ.ಅಮರೇಶಪ್ಪ ವಕೀಲ,ಮಾಜಿ ಅಧ್ಯಕ್ಷರಾದ ಲಕ್ಷ್ಮ
ದೇವಿ ನಾಯಕ, ನಜೀರುದ್ದಿನ್ ಖಾದ್ರಿ ಗುರು, ಮಾಜಿ ಉಪಾಧ್ಯಕ್ಷೆ ಸಂತೋಷಿ ಮುಖಂಡರಾದ ವೈ.ಶರಣಪ್ಪ ನಾಯಕ ಗುಡದಿನ್ನಿ, ಜಿ.ನಾಗರಾಜ, ಡಿ.ರಾಮಕೃಷ್ಣ, ಜಯಪ್ರಕಾಶ, ಶರಣಪ್ಪಗೌಡ,ರೇವಣ್ಣಸಿದ್ದಯ್ಯಸ್ವಾಮಿ ಸೇರಿದಂತೆ ಅನೇಕರಿದ್ದರು.