ರಾಯಚೂರು,28 ಸರ್ಕಾರ ಮತ್ತು ಜನರ ನಡುವೆ ಪತ್ರಕರ್ತರು ಸೇತುವೆಯಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲು ಸಾಧ್ಯ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಭಿವೃದ್ದಿ ಹಾಗೂ ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣ್ ಪ್ರಕಾಶ್ ಪಾಟೀಲ್ ಅವರು ಹೇಳಿದರು.
ಅವರು ಜು.೨೮ರ ರವಿವಾರ ದಂದು ನಗರದ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್ ಸಮುದಾಯ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದರು.
ಪತ್ರಿಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರನ್ನು ಜಾಗೃತಿ ಮತ್ತು ಜನರಹಿತ ಕಾಯುತ್ತಿದ್ದಾರೆ. ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲು ಸಾಧ್ಯ. ಜನ ವಿರೋಧಿ ಸರಕಾರಗಳನ್ನು ಅಧಿಕಾರದಿಂದ ಕೆಳಗೆ ಇಳಿಸಿದ ಅನೇಕ ಘಟನೆ ನಡೆದಿವೆ ಎಂದರು.
ಇಂದು ಸಾಮಾಜಿಕ ಜಾಲತಾಣ ಮಾಧ್ಯಮಗಳಿಂದ ಮುಖ್ಯ ವಾಹಿನಿಯ ಮಾಧ್ಯಮಗಳು ನಲುಗುತ್ತಿವೆ. ಸಾಮಾಜಿಕ ಮಾಧ್ಯಮಗಳು ಇಂದು ಜಗತ್ತಿನಾದ್ಯಂತ ದೊಡ್ಡ ಕ್ರಾಂತಿಯನ್ನುAಟು ಮಾಡುತ್ತಿವೆ. ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಪತ್ರಿಕೆಗಳ ಮಹತ್ವ ಕುಸಿಯುತಿದೆ. ಪತ್ರಿಕೋದ್ಯಮಕಿಂತ ಸಾಮಾಜಿಕ ಜಾಲತಾಣ ಅತ್ಯಂತ ವೇಗವಾಗಿ ಸುದ್ದಿಗಳು ಹರಡುತ್ತಿವೆ. ಅಲ್ಲದೆ ಜನಮನ ತಲುಪುತ್ತಿದೆ. ಸ್ವಾತಂತ್ರ ಪೂರ್ವದಲ್ಲಿ ಪತ್ರಿಕೆಗಳು ಮಹತ್ವದ ಪಾತ್ರವಹಿಸುವೆ ಎಂದು ಹೇಳಿದರು.
ಪತ್ರಕರ್ತರು ಸರಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ಸಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ಪ್ರಜಾಪ್ರಭುತ್ವ ಉಳಿಬೇಕಾದರೆ ಅದು ಪತ್ರಿಕೋದ್ಯಮದಿಂದ ಮಾತ್ರ ಸಾಧ್ಯವಿದ್ದು, ಆದ್ದರಿಂದ ಪತ್ರಕರ್ತರು ಜನರ ಹಿತವನ್ನು ಕಾಯುವಂತರಾಗಬೇಕು ಎಂದರು.
ಈ ವೇಳೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಕರ್ತರು ಜನರ ಸಮಸ್ಯೆಗಳನ್ನು ಸರಕಾರ ಗಮನಕ್ಕೆ ತರಬೇಕು. ದೇಶ ಮತ್ತು ರಾಜ್ಯದಲ್ಲಿ ಪತ್ರಕರ್ತರ ಸೇವೆ ಅತ್ಯಂತ ಪ್ರಮುಖ. ಪತ್ರಿಕಾ ವೃತ್ತಿಯಲ್ಲಿ ಪತ್ರಕರ್ತರು ಪ್ರಾಮಾಣಿಕ ಸೇವೆ ಮಾಡುವುದರ ಮೂಲಕ ಜನರ ಸೇವೆಯಲ್ಲಿ ಕಾರ್ಯನಿರ್ತರಾಗಬೇಕು ಎಂದರು.
ಅತಿಥಿ ಉಪನ್ಯಾಸಕರಾಗಿ ಹಿರಿಯ ಪತ್ರಕರ್ತರಾದ ಹರಿಪ್ರಸಾದ ಅವರು ಮಾತನಾಡಿ, ಅಭಿವ್ಯಕ್ತಿ ಸ್ವಾತಂತ್ರ‍್ಯ ಹೃದಯಕ್ಕೆ ಶಕ್ತಿ ತುಂಬುವುದೆ ಸಂವಿಧಾನ. ನಮ್ಮ ಸಂವಿಧಾನದಲ್ಲಿ ಪತ್ರಕರ್ತರಿಗೆ ಯಾವುದೇ ಪ್ರತ್ಯೇಕವಾದ ಹಕ್ಕುಗಳನ್ನು ನೀಡಿಲ್ಲ.ಪತ್ರಕರ್ತರಿಗೆ ರಕ್ಷಣೆ ಇಲ್ಲ ಜನಸಾಮಾನ್ಯರಂತೆ ಹಕ್ಕುಗಳನ್ನು ನೀಡಿದೆ. ಸಾಮಾಜಿಕ ಮಾಧ್ಯಮದಿಂದ ಸಮಾಜದ ಮೇಲೆ ದುಷ್ಪರಿಣಾಮಗಳು ಬೀರುತ್ತೀವೆ. ಸವಾಲುಗಳನ್ನು ಮೆಟ್ಟಿ ನಿಲ್ಲಲ್ಲು ಪತ್ರಕರ್ತರು ಸನ್ನದ್ಧರಾಗಬೇಕು. ಇಂದು ಸಮಾಜದಲ್ಲಿ ನಕಲಿ ಪತ್ರಕರ್ತರು ಹೆಚ್ಚಾಗುತ್ತಿದ್ದಾರೆ. ಅವರ ಕಡಿವಾಣಕ್ಕೆ ಕಠಿಣ ಕಾನೂನುಗಳು ಜಾರಿಯಾಗಬೇಕಿವೆ. ಮಾನವೀಯ ಮೌಲ್ಯಗಳ ಮೇಲೆ ಬೆಳಕು ಚೆಲ್ಲುವ ವರದಿಗಳನ್ನು ಹೆಚ್ಚಾಗಿ ಬರೆಯಲು ಪತ್ರಕರ್ತರು ಮುಂದಾಗಬೇಕಿದೆ ಎಂದರು.
ಪ್ರಸ್ತಾವಿಕವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಮಾತನಾಡಿ, ಸರ್ಕಾರವು ಪತ್ರಕರ್ತರಿಗೆ ರಕ್ಷಣೆ ನೀಡುವುದರ ಜೊತೆಗೆ ಉಚಿತ ಬಸ್ ಪಾಸ್ ನೀಡುವುದಾಗಿ ಹೇಳಿದೆ ಆದರೆ ಇನ್ನು ಕಾರ್ಯರೂಪಕ್ಕೆ ಬಂದಿಲ್ಲ ಬೇಗನೆ ಉಚಿತ ಬಸ್ ಪಾಸ್ ನೀಡುವಂತೆ ಸಚಿವರಿಗೆ ಮನವಿ ಮಾಡಿದರು.
ವಾರ್ಷಿಕ ಪ್ರಶಸ್ತಿ ಪುರಸ್ಕೃತರು: ಪ್ರಜಾಪ್ರಸಿದ್ಧ ಪತ್ರಿಕೆಯ ಉಪ ಸಂಪಾದಕರಾದ ರಘುನಾಥರೆಡ್ಡಿ ಮನ್ಸಲಾಪುರ, ರಾಯಚೂರು ಧ್ವನಿ ಪತ್ರಿಕೆಯ ಸಂಪಾದಕ ಲಕ್ಷö್ಮಣರಾವ್ ಕಪಗಲ್, ಮಸ್ಕಿ ಉದಯವಾಣಿ ಪ್ರತಿಕೆಯ ವರದಿಗಾರ ವಿಠ್ಠಲ್ ಕೇಳೂತ, ಕವಿತಾಳ ಸಂಜೆವಾಣಿ ಪತ್ರಿಕೆ ವರದಿಗಾರ ರಾಮಣ್ಣ, ಅರಕೇರ ವಿಜಯವಾಣಿ ವರದಿಗಾರ ಮಹಾಂತೇಶ್ ಹಿರೇಮಠ, ಛಾಯಾಗ್ರಾಹಕ ಅಬ್ದುಲ್ ಖಾದರ್, ಸಿರವಾರ ಸಂಜೆವಾಣಿ ಪತ್ರಿಕೆ ವರದಿಗಾರ ಹನುಮೇಶ್, ಲಿಂಗಸೂಗೂರು ಹೈದ್ರಾಬಾದ್ ಕರ್ನಾಟಕ ಪತ್ರಿಕೆಯ ವರದಿಗಾರ ರಾಘವೇಂದ್ರ ಭಜಂತ್ರಿ, ಸಾಕ್ಷಿ ತೆಲುಗು ಪತ್ರಿಕೆ ನಾಗರತ್ನ ಶರಣೇಗೌಡ ಗೋರೆಬಾಳ, ವಿಜಯವಾಣಿ ಜಾಹೀರಾತು ವ್ಯವಸ್ಥಾಪಕರಾದ ಮುತ್ತಣ್ಣ ಕಬ್ಬಿಣದ ಅವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಯನ್ನು ನೀಡಿ, ಗೌರವಿಸಲಾಯಿತು.
ಜೀವಮಾನ ಸಾಧನೆ ಪ್ರಶಸ್ತಿ: ಪತ್ರಿಕೋದ್ಯಮದಲ್ಲಿ ಜೀವಮಾನ ಸಾಧನೆ ಮಾಡಿದ ಹಿರಿಯ ಸಂಪಾದಕ ನಾಗರಾಜ ನಾಗತೀಹಳ್ಳಿ ಹಾಗೂ ಜಿಲ್ಲೆಯ ದೇವದುರ್ಗದ ಪತ್ರಕರ್ತ ನರಸಿಂಗ ರಾವ್ ಸರ್ಕಿಲ್‌ಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿ, ಸನ್ಮಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ.ಶಿವರಾಜ ಪಾಟೀಲï, ಸಿಂಧನೂರು ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ, ಮಾನವಿ ಕ್ಷೇತ್ರದ ಶಾಸಕ ಹಂಪಯ್ಯ ನಾಯಕ, ಮಸ್ಕಿ ಕ್ಷೇತ್ರದ ಬಸನಗೌಡ ತುರ್ವಿಹಾಳ, ವಿಧಾನ ಪರಿಷತ್ ಸದಸ್ಯರಾದ ಎ.ವಸಂತ ಕುಮಾರ, ರಾಯಚೂರು ನಗರಾಭೀವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜಶೇಖರ ರಾಮಸ್ವಾಮಿ, ಜಿಲ್ಲಾಕಾರಿ ನಿತೀಶ್ ಕೆ., ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಪುಟ್ಟಮಾದಯ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಸುಲೇಮಾನ್ ಡಿ.ನದಾಫ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಎಂ.ಪಾಷ್ ಹಟ್ಟಿ, ರಾಜ್ಯ ಸಮಿತಿಯ ಸದಸ್ಯರಾದ ಶಿವಮೂರ್ತಿ ಹಿರೇಮಠ ಪಾಷ ಸೇರಿದಂತೆ ಅನೇಕರು ಇದ್ದರು.