ರಾಯಚೂರು,ಜೂ.05ಜಿಲ್ಲೆಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ರಾಯಚೂರು, ಗಿಲ್ಲೇಸೂಗೂರು, ಮಾನವಿ, ಸಿಂಧನೂರು, ಲಿಂಗಸೂಗೂರು ಹಾಗೂ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಯರಮರಸ್ ಕ್ಯಾಂಪ್ ವಸತಿ ಶಾಲೆ ಮತ್ತು ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆ ರಾಯಚೂರುನಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಮೇ,19.ರಂದು ಪ್ರವೇಶ ಪರೀಕ್ಷೆ ನಡೆಸಿದ್ದು ಜೂ,03 ರಂದು ಪ್ರವೇಶ ಪರೀಕ್ಷೆಯ ಫಲಿತಾಂಶ ಮತ್ತು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜೂ.11 ರಂದು ಕೌಲ್ಸಿಂಗ್ ಪ್ರಕ್ರಿಯೆ ನಡೆಯುತ್ತಿದ್ದು ಬೆಳಗ್ಗೆ 9:30ಕ್ಕೆ ಅಲ್ಪಸಂಖ್ಯಾತ ಬಾಲಕ ವಿದ್ಯಾರ್ಥಿಗಳು ಯರಮರಸ್ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ, ಅಲ್ಪಸಂಖ್ಯಾತ ಬಾಲಕಿಯ ವಿದ್ಯಾರ್ಥಿಗಳು ಯರಮರಸ್‌ನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಹಾಗೂ ಇತರೆ ವರ್ಗದ ಬಾಲಕ ಮತ್ತು ಬಾಲಕಿ ವಿದ್ಯಾರ್ಥಿಗಳು ಚಂದ್ರಬAಡಾ ರಸ್ತೆಯಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಾಜರಾಗಲು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.