ಹರಪನಹಳ್ಳಿ ;- ತಾಲ್ಲೂಕಿನ ನದಿ ತೀರದ ಗರ್ಭಗುಡಿ, ಗರ್ಭಗುಡಿ ಕ್ಯಾಂಪ್, ತವರಗುಂದಿ, ಹಲವಾಗಲು, ನಿಟ್ಟೂರು ಬಸಾಪುರ, ನಿಟ್ಟೂರು, ನಂದ್ಯಾಲ, ಕಡತಿ ಸೇರಿ ವಿವಿಧ ಗ್ರಾಮಗಳಿಗೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಬಾನುವಾರ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪ್ರವಾಹ ಸ್ಥಿತಿ ಪರಿಶೀಲಿಸಿದರು.
ತುಂಗಭದ್ರ ನದಿ ಪಾತ್ರದ ಗ್ರಾಮಗಳ ಜನತೆಗೆ ನೀರಿನ ಒಳ ಹರಿವು ಹೆಚ್ಚಾಗುವ ಸಂಭವವಿದ್ದು, ಸಾರ್ವಜನಿಕರು ಎಚ್ಚರದಿಂದಿರಲು ತಿಳಿಸಿದರು. ಹಲವಾಗಲು ಹರ್ಭಗುಡಿ ಗ್ರಾಮಗಕ್ಕೆ ತೆರಳು ರಸ್ತೆ ಸಂಪರ್ಕ ಕಡಿತಗೊಂಡಿದ್ದು, ರಸ್ತೆ ಸಂಚಾರಕ್ಕೆ ಸಮಸ್ಯಯಾಗಿದೆ. ೬೦ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಎಲ್ ಆಂಡ್ ಟಿ ಕಂಪನಿ ಮತ್ತು ಸಂಬAದ ಪಟ್ಟ ಇಂಜಿನಿಯರ್ ಗಳ ಜೊತೆ ಮಾತುಕತೆ ನಡೆಸಿ ಯಾವ ಕೆರೆಗಳಿಗೆ ನೀರು ಹರಿಯುತ್ತಿಲ್ಲ ಆ ಕೆರೆಗಳಿಗೆ ನೀರು ಹರಿಸುಬೇಕು ಹಾಗೂ ಹಾಲಿ ಹರಿಯುತ್ತಿರುವ ಕೆರೆಗಳಿಗೆ ನೀರಿನ ಪ್ರಮಾಣವನ್ನು ಹೆಚ್ಚಿಸಬೇಕೆಂದು ಸೂಚಿಸಿದರು.
ಬೇಟಿ ನೀಡಿದ ಎಲ್ಲಾ ಗ್ರಾಮಗಳಲ್ಲಿ ಡ್ಯೆಂಗೆ ಹರಡದಂತೆ ಕ್ರಮಕೈಗೋಳ್ಳಲು ಸಂಬAದಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ಕಡತಿ, ನಿಟ್ಟೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದ್ದು, ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ನದಿ ಪಾತ್ರದ ಜನರು ಭಯ ಪಡುವ ಅಗತ್ಯವಿಲ್ಲ. ನಿಮ್ಮೊಂದಿಗೆ ನಾವಿದ್ದೇವೆ. ಅಧಿಕಾರಿಗಳು ಕ್ಷಣ ಕ್ಷಣವೂ ತಮ್ಮ ಸುರಕ್ಷತೆ ಹಾಗೂ ರಕ್ಷಣೆ ಬಗ್ಗೆ ಗಮನ ಹರಿಸುತ್ತಿದ್ದು, ತಾವೂ ಸಹ ಜಾಗರೂಕತೆ ವಹಿಸಬೇಕೆಂದು ಹೇಳಿದರು.
ಈ ವೇಳೆ ಉಪ ವಿಭಾಗಧಿಕಾರಿ ಚಿದಾನಂದ ಗುರುಸ್ವಾಮಿ, ತಹಶೀಲ್ದಾರ್ ಗಿರೀಶ್ ಬಾಬು, ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಸವರಾಜಪ್ಪ, ಸಹಾಯಕ ಕೃಷಿ ನಿರ್ದೇಶಕ ವಿ.ಸಿ.ಉಮೇಶ್, ಮುಖ್ಯಾಧಿಕಾರಿ ಎರಗುಡಿ ಶಿವುಕುಮಾರ್, ಎಪಿ.ಎಂ.ಸಿ ಶಿಲ್ಪಾ, ತೋಟಗಾರಿಕೆ ಇಲಾಖೆಯ ರವೀಂದ್ರ, ಹಲವಾಗಲು ಪಿ.ಎಸ್.ಐ ಕಿರಣಕುಮಾರ್, ಯುವ ಕಾಂಗ್ರೇಸ್ ಅದ್ಯಕ್ಷ ಮತ್ತೂರು ಬಸವರಾಜ, ಹರಿಯಮ್ಮನಹಳ್ಳಿ ಶಿವರಾಜ್ ಸೇರಿದಂತೆ ಕಂದಾಯ ಅಧಿಕಾರಿಗಳು ಹಾಗೂ ಮುಖಂಡರು ಹಾಜರಿದ್ದರು.