ಬಳ್ಳಾರಿ: ನಗರ ವಿಧಾನಸಭಾ ಕ್ಷೇತ್ರದ ಮಹಾನಗರ ಪಾಲಿಕೆಯ ವ್ಯಾಪ್ತಿಯ ಸಂಗನಕಲ್ಲು ರಸ್ತೆಯ 21ನೇ ವಾರ್ಡಿನ ಕೆ.ಇ.ಬಿ ಸರ್ಕಲ್ ಎಂದು ಇಲ್ಲಿಯವರೆಗೂ ಕರೆಯುತ್ತಿದ್ದ ವೃತ್ತವನ್ನು ನವೀಕರಣ ಮಾಡಿ ಅದನ್ನು ಹೊಸದಾಗಿ ಬಸವೇಶ್ವರ ವೃತ್ತ ಎಂದು ನಾಮಕರಣ ಮಾಡಲಾಗುವುದು ಎಂದು ನಗರ ಶಾಸಕ ಭರತ್ ರೆಡ್ಡಿ ತಿಳಿಸಿದ್ದಾರೆ,
ಅವರು ಕೆ.ಇ.ಬಿ ಸರ್ಕಲ್ ನಲ್ಲಿ ಅಭಿವೃದ್ದಿಪಡಿಸಲು ಮಂಗಳವಾರ (ಕೆಇಬಿ ಸರ್ಕಲ್) ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆನಡೆಸಿದರು. ಬಳ್ಳಾರಿ ನಗರಕ್ಕೆ ಪ್ರವೇಶಿಸುವ ಸಂಗನಕಲ್ ರಸ್ತೆಯ (ಕೆಆರೆಸ್ ಹಾಲ್ ನಿಂದ ಕೆಇಬಿ ಸರ್ಕಲ್ ವರೆಗೆ) ಅಭಿವೃದ್ಧಿ ಹಾಗೂ ಸೌಂದರೀಕರಣಕ್ಕಾಗಿ ಈಗಾಗಲೇ ಅನುದಾನ ಮಂಜೂರಾಗಿದ್ದು, ಮಂಗಳವಾರ ಕಾಮಗಾರಿ ಆರಂಭಿಸಲಾಗಿದೆ.ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಹಾಗೂ ಬಸವಾನುಯಾಯಿಗಳ ಬೇಡಿಕೆಯ ಮೇರೆಗೆ ಕೆಇಬಿ ಸರ್ಕಲ್ ಗೆ ಬಸವೇಶ್ವರ ಸರ್ಕಲ್ ಎಂದು ನಾಮಕರಣ ಮಾಡಲು ತೀರ್ಮಾನ ಮಾಡಲಾಗಿತ್ತು.
ಈ ವೇಳೆ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್, ಪಾಲಿಕೆ ಸದಸ್ಯ ಪ್ರಭಂಜನಕುಮಾರ್ , ಮಹಾನಗರ ಪಾಲಿಕೆಯ ಎಂಜಿನಿಯರ್ ವೀರೇಶ್ ಹಾಗೂ ಗುತ್ತಿಗೆದಾರರು ಇದ್ದರು.