Ad image

ಅವಧಿಗೂ ಮೊದಲೇ ದೇಶದಲ್ಲಿ ಮುಂಗಾರು ಸಕ್ರಿಯ ಮೇ ತಿಂಗಳಲ್ಲೇ ಮುಂಗಾರು ಪ್ರವೇಶ: ಕರ್ನಾಟಕದಲ್ಲಿ ಯಾವಾಗ ಮಳೆ

Vijayanagara Vani
ಅವಧಿಗೂ ಮೊದಲೇ ದೇಶದಲ್ಲಿ ಮುಂಗಾರು ಸಕ್ರಿಯ ಮೇ ತಿಂಗಳಲ್ಲೇ ಮುಂಗಾರು ಪ್ರವೇಶ: ಕರ್ನಾಟಕದಲ್ಲಿ ಯಾವಾಗ ಮಳೆ

ನವದೆಹಲಿ, ಮೇ 14: ಭಾರತದಲ್ಲಿ ಸಮೀಪಿಸುತ್ತಿರುವ ಮುಂಗಾರು ಮಳೆಯ ಋತುವಿನಲ್ಲಿ ಈ ವರ್ಷ ಅತ್ಯಧಿಕ ಮಳೆ ಆಗಲಿದೆ. ಮುಂದಿನ ನಾಲ್ಕು ತಿಂಗಳು ಕಾಲ ಸಮೃದ್ಧ ಮಳೆಯ ಆಗಮನ ಕುರಿತು ಮುನ್ಸೂಚನೆ ನೀಡಿದ್ದ ಹವಾಮಾನ ಇಲಾಖೆ (IMD) ಇದೀಗ ‘ಮುಂಗಾರು ಮಳೆ’ ಬಗ್ಗೆ ಮತ್ತೊಂದು ಅಪ್ಡೇಟ್ ಕೊಟ್ಟಿದೆ.ಸಾಮಾನ್ಯವಾಗಿ ಜೂನ್ ನಿಂದ ಭಾರತದಲ್ಲಿ ಮುಂಗಾರು ಸುರಿಸುವ ಮೋಡಗಳು (Monsoon Rain) ಆಗಮಿಸುತ್ತವೆ. ಆದರೆ ಈ ಭಾರಿ ಅವಧಿಗೂ ಮೊದಲೇ ದೇಶದಲ್ಲಿ ಮುಂಗಾರು ಆಗಮಿಸಲಿದೆ. ಈ ಮೂಲಕ ಹವಾಮಾನ ಇಲಾಖೆ ತಜ್ಞರು ದೇಶದ ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ.

ತಜ್ಞರ ಪ್ರಕಾರ, ಮೇ ಮೂರನೇ ವಾರಾಂತ್ಯಕ್ಕೆ ಮುಂಗಾರು ಮಳೆ (South West Monsoon) ಸುರಿಸುವ ಮಾರುತಗಳು ಬಂಗಾಳಕೊಲ್ಲಿ, ಅಂಡಮಾನ್ ನಿಕೋಬಾರ್ ಪ್ರದೇಶಗಳಿಗೆ ಆಗಮಿಸಲಿದೆ. ಈ ಮೂಲಕ ಭಾರತದಲ್ಲಿ ಮೇ ಅಂತ್ಯಕ್ಕೆ ಮುಂಗಾರು ಮಳೆಯ ನಿರೀಕ್ಷೆ ಇದೆ.

ಅವಧಿಗೂ ಮೊದಲೇ ದೇಶದಲ್ಲಿ ಮುಂಗಾರು ಸಕ್ರಿಯ ಈ ಮೋದಲು ಮುಂಗಾರು ಮಳೆ ಭಾರತಕ್ಕೆ ಜೂನ್ ಮೊದಲ ವಾರದ ನಿಗದಿಯಂತೆ ಬರಬಹದು ಎಂದು ಹೇಳಲಾಗಿತ್ತು. ಆದರೆ ಸದ್ಯದ ಮುನ್ಸೂಚನೆ ಪ್ರಕಾರ ಅವಧಿಗೂ ಕೆಲವು ದಿನಗಳ ಮೊದಲೇ ಮುಂಗಾರು ಮಾರುತಗಳು ಭಾರತದಲ್ಲಿ ಸಕ್ರಿಯಗೊಳ್ಳಿವೆ.

ಈಗಾಗಲೇ ಐಎಂಡಿಯು ಈ ವರ್ಷ ದೇಶದಲ್ಲಿ ವಾಡಿಕೆಯಷ್ಟು (106%) ಮಳೆ ಆಗಲಿದೆ ಎಂದು ತಿಂಗಳ ಹಿಂದೆಯೇ ತಿಳಿಸಿತ್ತು. ಉತ್ತಮ ಮಳೆಗೆ ಬೇಕಾದ ಎಲ್ಲ ರೀತಿಯ ಪೂರಕ ವಾತಾವರಣ ನಿರ್ಮಾಣವಾಗಿದ್ದನ್ನು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮಹಾಪಾತ್ರ ಅವರು ಹೇಳಿದ್ದರು

ಜೂನ್‌ ಅಂತ್ಯಕ್ಕೆ ಭಾರತದಲ್ಲಿ ಮುಂಗಾರು ಸಕ್ರಿಯ ಮುಂಗಾರು ಅವಧಿಯಲ್ಲಿ ಈಶಾನ್ಯ ರಾಜ್ಯಗಳು, ದಕ್ಷಿಣದ ರಾಜ್ಯಗಳಲ್ಲಿ ಭಾರೀ ಮಳೆ ನಿರೀಕ್ಷೆ ಇದೆ. ಇನ್ನೂ ಈ ಮುಂಗಾರು ಮೇ ತಿಂಗಳಲ್ಲಿ ಕೇರಳ ಪ್ರವೇಶಿಸಿದರೆ, ಕರ್ನಾಟಕವನ್ನು ತದನಂತರದ ಒಂದು ವಾರದಲ್ಲಿ ಪ್ರವೇಶಿಸುವ ಸಾಧ್ಯತೆ ಇದೆ. ಜೂನ್ ತಿಂಗಳಾಂತ್ಯಕ್ಕೆ ಇಡಿ ಭಾರತದಲ್ಲಿ ಮುಂಗಾರು ಸಕ್ರಿಯಗೊಂಡಿರಲಿದೆ ಎಂಬ ಮುನ್ಸೂಚನೆ ಇದೆ. ಭೂಮೇಲ್ಮೈ ಮೇಲೆ ಸ್ಟ್ರಫ್: ರಾಜ್ಯಕ್ಕೆ ಇನ್ನೂ 5 ದಿನ ಮಳೆ ಸದ್ಯ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಕೆಲವು ದಿನಗಳಿಂದ ಮಳೆ ಆಗುತ್ತಿದೆ. ಕರ್ನಾಟಕದ ಒಳನಾಡಿನಲ್ಲಿ ಭೂಮಿಯ ಮೇಲ್ಮೈನಲ್ಲಿ 1.5 ಕಿಲೋ ಮೀಟರ್ ಎತ್ತರದಲ್ಲಿ ಸ್ಟ್ರೈಫ್ ಹಾದು ಹೋಗಿದೆ. ಈ ವೈಪರಿತ್ಯದಿಂದಾಗಿ ಜೋರು ಮಳೆ ಆಗುತ್ತಿದೆ. ಇನ್ನೂ ಮುಂದಿನ ನಾಲ್ಕರಿಂದ ಐದು ದಿನಗಳ ಕಾಲ ಬೆಂಗಳೂರು ಸೇರಿದಂತೆ ಒಳನಾಡಿನ ಜಿಲ್ಲೆಗಳಲ್ಲಿ ಇದೇ ರೀತಿ ಗುಡುಗು, ಮಿಂಚು ಮತ್ತು ಜೋರುಗಾಳಿ ಸಹಿತ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ಬೆಂಗಳೂರು ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

Share This Article
error: Content is protected !!
";