Ad image

ಈ ವರ್ಷ ಗೋವಾಗೆ ಟೂರ್ ಹೋಗಿದ್ದು ಬರೋಬ್ಬರಿ 1 ಕೋಟಿಗೂ  ಅಧಿಕ  ಪ್ರವಾಸಿಗರು!

Vijayanagara Vani
ಈ ವರ್ಷ ಗೋವಾಗೆ ಟೂರ್ ಹೋಗಿದ್ದು ಬರೋಬ್ಬರಿ 1 ಕೋಟಿಗೂ  ಅಧಿಕ  ಪ್ರವಾಸಿಗರು!

ಗೋವಾ ಪ್ರವಾಸ ಹೋಗುವುದು ಅದೆಷ್ಟೋ ಹುಡುಗರ ಕನಸು. ಹೆಣ್ಣುಮಕ್ಕಳು ತಮ್ಮ ಗರ್ಲ್ಸ್ ಟ್ರಿಪ್‌ ಪ್ಲ್ಯಾನ್ ಮಾಡುವಾಗ ಕೂಡ ಅವರ ಮೊದಲ ಆಯ್ಕೆ ಗೋವಾ ಆಗಿರುತ್ತದೆ. ಆ ಪುಟ್ಟ ರಾಜ್ಯಕ್ಕೆ ಹೋಗಲು ಪ್ರವಾಸಿಗರು ಮುಗಿ ಬೀಳುತ್ತಾರೆ. ಹಾಗೇಯೇ ಈ ವರ್ಷ ಅಲ್ಲಿಗೆ ಬೇಟಿ ನೀಡಿರುವುದು ಬರೋಬ್ಬರಿ ಒಂದು ಕೋಟಿ ಮಂದಿ.

ಹೌದು… ಪ್ರವಾಸೋದ್ಯಮ ಸಚಿವ ರೋಹನ್ ಖೌಂಟೆ ಅವರು ಜೂನ್ 16 ರಂದು ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯು ಕೋವಿಡ್ ಪೂರ್ವ ಅಂಕಿಅಂಶಗಳಿಗೆ ಹೋಲಿಸಿದರೆ, ಇದೀಗ 1 ಕೋಟಿ ಗಡಿ ದಾಟಿದೆ ಎಂದು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ಪ್ರವಾಸಿ ಸೀಸನ್‌ನಲ್ಲಿ ಗೋವಾಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ ಎಂದು ಬಹಿರಂಗಪಡಿಸಿದ್ದಾರೆ.

ಕರಾವಳಿ ರಾಜ್ಯ ಗೋವಾಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದೆ ಮತ್ತು ಒಂದು ಕೋಟಿಯ ಗಡಿಯನ್ನು ಮುಟ್ಟಿದೆ ಎಂದು ಪ್ರವಾಸೋದ್ಯಮ ಸಚಿವ ರೋಹನ್ ಖೌಂಟೆ ತಿಳಿಸಿದ್ದಾರೆ. ಇದರಲ್ಲಿ ಅಂತರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಇದು ಕೋವಿಡ್-19 ಪೂರ್ವದ ಅಂಕಿಅಂಶಗಳಿಗಿಂತ 150 ಪ್ರತಿಶತ ಹೆಚ್ಚು ಎಂದು ಸಚಿವ ರೋಹನ್ ಖೌಂಟೆ ಪಿಟಿಐಗೆ ತಿಳಿಸಿದ್ದಾರೆ.

ಆದರೂ ಕೂಡ ದೇಶದ ಇತರ ರಾಜ್ಯಗಳು ಮತ್ತು ಅಂತರರಾಷ್ಟ್ರೀಯ ಪ್ರವಾಸಿ ಸ್ಥಳಗಳಿಂದ ಗೋವಾಗೆ ಸ್ಪರ್ಧೆ ಇದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಜೂನ್‌ನಲ್ಲಿ ಮಾನ್ಸೂನ್ ಆರಂಭದೊಂದಿಗೆ ಗೋವಾದಲ್ಲಿ ಅಧಿಕೃತ ಪ್ರವಾಸಿ ಸೀಸನ್ ಕೊನೆಗೊಳ್ಳಲಿದೆ. ಮತ್ತೆ ಸೆಪ್ಟೆಂಬರ್‌ನಲ್ಲಿ ಪ್ರವಾಸಿಗರನ್ನು ಗೋವಾ ಸ್ವಾಗತಿಸಲಿದೆ. ಮಳೆಗಾಲದಲ್ಲೂ ಗೋವಾದಲ್ಲಿ ಪ್ರವಾಸಿಗರು ಮಳೆಗಾಲದಲ್ಲಿಯೂ ರಾಜ್ಯಕ್ಕೆ ಪ್ರವಾಸಿಗರು ಬರುತ್ತಲೇ ಇದ್ದಾರೆ ಎಂದು ಸಚಿವ ರೋಹನ್ ಖೌಂಟೆ ಹೇಳಿದ್ದಾರೆ. ಮಾನ್ಸೂನ್‌ನಲ್ಲಿ ಗೋವಾದಲ್ಲಿ ಶೇ.80 ರಷ್ಟು ಹೋಟೆಲ್‌ಗಳು ಆಕ್ಯುಪೆನ್ಸಿ ಆಗಿದ್ದು, ಗೋವಾ ಎಂದರೆ ಬೀಚ್‌ಗಳಷ್ಟೇ ಅಲ್ಲ ಎಂಬುದನ್ನು ಮನಗಂಡ ಜನರು ಮಳೆಗಾಲದಲ್ಲಿಯೂ ಗೋವಾಕ್ಕೆ ಬರುತ್ತಾರೆ ಎಂದಿದ್ದಾರೆ.

ಗೋವಾಕ್ಕೆ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂಬ ಹೇಳಿಕೆಯನ್ನು ಅಲ್ಲಗೆಳೆದ ಅವರು, “ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ನಾವು 10 ಮಿಲಿಯನ್ ಗಡಿಯನ್ನು ಮುಟ್ಟಿದ್ದೇವೆ. ಇದು ಹಿಂದಿನ ಅಂಕಿಅಂಶಗಳಿಗಿಂತ ಹೆಚ್ಚಾಗಿದೆ. ಆದರೆ, ಹೊಸ ಮಾರುಕಟ್ಟೆಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ ಗೋವಾ ಇನ್ನೂ ಸುಧಾರಿಸಬೇಕಾಗಿದೆ” ಎಂದು ಸಚಿವರು ಮಾಹಿತಿ ನೀಡಿದ್ದಾರೆ. “ನಾವು ಪ್ರವಾಸೋದ್ಯಮಕ್ಕಾಗಿ ವಿಷನ್ ಡಾಕ್ಯುಮೆಂಟ್ ಅನ್ನು ಸಿದ್ಧಪಡಿಸಿದ್ದೇವೆ. ಆದರೆ, ಇದನ್ನು ಪ್ರವಾಸೋದ್ಯಮ ಪಾಲುದಾರರ ಸಕ್ರಿಯ ಭಾಗವಹಿಸುವಿಕೆಯಿಂದ ಮಾತ್ರ ಕಾರ್ಯಗತಗೊಳಿಸಬಹುದು. ನಾವು ಅದರ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ ‘ದೇಖೋ ಅಪ್ನಾ ದೇಶ್’ ಹೇಳಿಕೆ ನಂತರ ಭಾರತದ ಇತರ ರಾಜ್ಯಗಳು ಸೇರಿದಂತೆ ಹಲವಾರು ಸ್ಥಳಗಳಿಂದ ಅಪಾರ ಪೈಪೋಟಿ ಇದೆ” ಎಂದು ರೋಹನ್ ಖೌಂಟೆ ಹೇಳಿದ್ದಾರೆ.
ಡಿಸೆಂಬರ್‌ನಂತಹ ತಿಂಗಳುಗಳಲ್ಲಿ ಗೋವಾ ದುಬಾರಿ ತಾಣವಾಗದಂತೆ ನೋಡಿಕೊಳ್ಳುವುದು ದೊಡ್ಡ ಸವಾಲಾಗಿದೆ ಎಂದು ಸಚಿವರು ಹೇಳಿದ್ದಾರೆ. “ಡಿಸೆಂಬರ್‌ನಲ್ಲಿ ಗೋವಾದಲ್ಲಿ ಹೋಟೆಲ್‌ಗಳ ವೆಚ್ಚವು ತುಂಬಾ ಹೆಚ್ಚಾಗಿರುತ್ತದೆ. ಇದರಿಂದಾಗಿ ಪ್ರವಾಸಿಗರು ಥೈಲ್ಯಾಂಡ್‌ನಂತಹ ಇತರ ಸ್ಥಳಗಳನ್ನು ನೋಡಲು ಪ್ರಾರಂಭಿಸುತ್ತಾರೆ. ಅದೇ ಬಜೆಟ್‌ನಲ್ಲಿ ಅಲ್ಲಿಗೆ ಹೋಗಿ ಇನ್ನೂ ಹಣವನ್ನು ಉಳಿಸಬಹುದು ಎಂದು ಚಿಂತಿಸುತ್ತಾರೆ. ಹೀಗಾಗಿ ಡಿಸೆಂಬರ್ ತಿಂಗಳು ಸೇರಿದಂತೆ ವಿವಿಧ ವಿಮಾನಯಾನ ಸಂಸ್ಥೆಗಳು ಮತ್ತು ಹೋಟೆಲ್ ಮಾಲೀಕರೊಂದಿಗೆ ಚರ್ಚಿಸುತ್ತೇವೆ” ಎಂದು ತಿಳಿಸಿದ್ದಾರೆ.

Share This Article
error: Content is protected !!
";