ಶ್ರೀ ರಾಮ ಮಂದಿರದ ಕನಸ್ಸನ್ನು ನನ್ನಸು ಮಾಡಿದ್ದೇವೆ: ಉಡುಪಿ ಪೇಜಾವರ ಶ್ರೀಗಳು

Vijayanagara Vani
ಶ್ರೀ ರಾಮ ಮಂದಿರದ ಕನಸ್ಸನ್ನು ನನ್ನಸು ಮಾಡಿದ್ದೇವೆ: ಉಡುಪಿ ಪೇಜಾವರ ಶ್ರೀಗಳು
ಮಾನ್ವಿ: ಪಟ್ಟಣದ ಶ್ರೀ ಜಗನ್ನಾಥ ದಾಸರ ಸನ್ನಿದಾನಕ್ಕೆ ಆಗಮಿಸಿದ ಶ್ರೀ ಉಡುಪಿ ಪೇಜಾವರ ಅದೋಕ್ಷಜ ಮಠಧೀಶರಾದ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದಂಗಳವರನ್ನು ಪೂರ್ಣ ಕುಂಭ ಸ್ವಾಗತ ನೀಡಿ ಭಕ್ತರು ಬರಮಾಡಿಕೊಂಡರು ಶ್ರೀಗಳು ಶ್ರೀ ಜಗನ್ನಾಥದಾಸರ ಸ್ಥಂಬ ಕಂಬ ದರ್ಶನ ಪಡೆದು ನಂತರ ವೇದಿಕೆಯಲ್ಲಿ ಭಕ್ತರಿಗೆ ಅನುಗ್ರಹ ಸಂದೇಶವನ್ನು ನೀಡಿ ಭಗವಂತನ  ಅನುಗ್ರಹವನ್ನು ಪಡೆಯುವುದಕ್ಕೆ ದಾಸರು ನಮಗೆ ಸುಲಭವಾದ ಮಾರ್ಗವನ್ನು ತೋರಿದ್ದು. ನಮ್ಮ ಪ್ರಯತ್ನ ಹಾಗೂ ಭಗವಂತನ ಅನುಗ್ರಹ ಹೊಂದಿದಲ್ಲಿ ಮಾತ್ರ ಜೀವನದಲ್ಲಿ ಸುಖ ನೆಮ್ಮದಿಯನ್ನು ಪಡೆಯುವುದಕ್ಕೆ ಸಾಧ್ಯವಿದ್ದು. ಭಕ್ತರಾದವನ್ನು ಭಗವಂತನ ಅನುಗ್ರಹಕ್ಕೆ ಒಂದು ಹೆಜ್ಜೆಯನ್ನು ಇಟ್ಟಲ್ಲಿ ಭಗವಂತ ಎರಡು ಹೆಜ್ಜೆಯನ್ನು ಇಡುತ್ತಾನೆ.ದೇವರು ಎಲ್ಲಿಯು ಇಲ್ಲ ನಿನ್ನ ಅತ್ಯಂತ ಸಮೀಪದಲ್ಲಿದ್ದನೇ ಭಗವಂತ ನಮ್ಮ ಪಕ್ಕದಲ್ಲಿದ್ದು ಕೊಂಡು ಸಾದ ನಮ್ಮನ್ನು ರಕ್ಷಿಸುತ್ತಾ ಇದ್ದಾನೆ. ಕಣ ್ಣಗೆ ಅತಿ ಸಮೀಪದಲ್ಲಿದ್ದರು ಕಣ ್ಣಗೆ ಕಾಣದಂತೆ ರಕ್ಷಣೆ ನೀಡುವ ರೆಪ್ಪೆಯಂತೆ ಸಾದ ನಮ್ಮಲ್ಲಿಯೇ ಇದ್ದನೇ. ಶ್ರೀ ರಾಮನನ್ನು ಅಯೋಧ್ಯಯಲ್ಲಿ ಮಾತ್ರ ಪ್ರತಿಷ್ಠಾಪನೆ ಮಾಡಿದರೆ ಸಾಲದು ನಮ್ಮ ಪ್ರತಿಯೊಬ್ಬ ಮಕ್ಕಳಲ್ಲಿಯು ಶ್ರೀರಾಮನನ್ನು ಪ್ರತಿಷ್ಠಾಪನೆ ಮಾಡಬೇಕು. ನಮ್ಮ ಸಮಾಜ ಹಿಂದೂ ಸಮಾಜವಾಗಿ ಉಳಿದಾಗ ಮಾತ್ರ ರಾಮಮಂದಿರ ಉಳಿಯುವುದಕ್ಕೆ ಸಾಧ್ಯ ನಮ್ಮಗೆ ರಾಮ ಮಂದಿರ ನಿರ್ಮಾಣ ಮಾತ್ರ ಮುಖ್ಯ ಉದ್ದೇಶವಾಗಿರಲಿಲ್ಲ ಇನ್ನೊಂದು ಜವಾಬ್ದಾರಿ ಇದ್ದು ಅದೇ ರಾಮರಾಜ್ಯ ನಿರ್ಮಾಣವಾಗಬೇಕು ಎನ್ನುವುದು ರಾಮಮಂದಿರ ಯಾವುದಕ್ಕೆ ಅಂದರೆ ರಾಮರಾಜ ನಿರ್ಮಾಣಕ್ಕೆ ಎನ್ನುವುದೆ ಆಗಿದೆ ಶ್ರೀರಾಮನ  ವ್ಯಕ್ತಿತ್ವ ಎಂತಹುದು ಎಂದರೆ ತನಗಾಗಿ ಏನ್ನನ್ನು ಬಯಸದೆ ಲೋಕಕಲ್ಯಾಣಕ್ಕಾಗಿ ಶ್ರಮಿಸುವುದೆ ಆಗಿದೆ. ರಾಮ ಮಂದಿರದ ಕನಸ್ಸನ್ನು ನನ್ನಸು ಮಾಡಿದ್ದೇವೆ ಈಗ ರಾಮರಾಜ್ಯದ ಕನಸು ನನಸು ಮಾಡುವುದಕ್ಕೆ ದೇಶದಲ್ಲಿನ ಪ್ರತಿಯೊಬ್ಬ ಮನೆ ಇಲ್ಲದವರಿಗೂ ಕೂಡ ಮನೆ ನಿರ್ಮಾಣ ಮಾಡಿಕೊಡಬೇಕಾಗಿದೆ ಎಲ್ಲರ ಸಹಕಾರದಿಂದ ಉಡುಪಿಯಲ್ಲಿ ಮನೆಗಳನ್ನು ನಿರ್ಮಿಸಿ ಮನೆಯಿಲ್ಲದವರಿಗೆ ಹಸ್ತಾಂತರ ಮಾಡುವ ಮೂಲಕ ನಿಜವಾದ ರಾಜರಾಜ್ಯದ ಕನಸನ್ನು ನನ್ನಸು ಮಾಡುತ್ತಿದೇವೆ ಎಂದು ತಿಳಿಸಿದರು.
ಅಯೋಧ್ಯ ಶ್ರೀ ಬಾಲರಾಮನ ಪ್ರತಿಷ್ಠೆ ಮಾಡಿ ೪೮ ದಿನಗಳ ಪರ್ಯಂತ ಮಂಡಲಪೂಜೆ ಸಲ್ಲಿಸಿ  ಪ್ರಧಾನಿ ನರೇಂದ್ರ ಮೋದಿಯವರ ೩ನೇ ಅವಧಿಯ ಪ್ರಮಾಣ ಸ್ವೀಕರ ಕಾರ್ಯಕ್ರಮದಲ್ಲಿ ಭಾಗವಹಿಸಿ ಪಟ್ಟಣಕ್ಕೆ ಆಗಮಿಸಿದ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದಂಗಳವರನ್ನು ಪಟ್ಟಣದ ದ್ಯಾನ ಮಂದಿರದಿAದ ನೂರಾರು ಯುವಕರು ಬೈಕ್ ರ‍್ಯಾಲಿ ಮುಖಾಂತರ ಪಟ್ಟಣದ ಪ್ರಮುಖ ಬೀದಿಗಳ ಮೂಲಕ  ಸಾಗಿ ಶ್ರೀ ಜಗನ್ನಾಥ ದಾಸರ ಸನ್ನಿದಾನಕ್ಕೆ ಸ್ವಾಗತಿಸಿದರು.
ಪಟ್ಟಣದ ಹೋರವಲಯದ ಶ್ರೀ ವ್ಯಾಸರಾಯ ಪ್ರತಿಷ್ಠಾಪಿತ ಸಂಜೀವರಾಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಸಂಜೀವರಾಯನ ದರ್ಶನ ಪಡೆದು ತಾಲೂಕಿನ ಚೀಕಲಪರ್ವಿ ಗ್ರಾಮದಲ್ಲಿನ ಶ್ರೀ ವಿಜಯದಾಸರ ಕಟ್ಟೆಯನ್ನು ದರ್ಶಿಸಿಕೊಂಡರು.
ಕಾರ್ಯಕ್ರಮದಲ್ಲಿ ತಾಲೂಕಿನ ವಿಪ್ರಸಮಾಜದವರು. ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ಮಾನವಿ-ಸಿರವಾರ , ತಾಲೂಕು ವಿಶ್ವಹಿಂದೂ ಪರೀಷತ್ ,ಬಜರಂಗದಳ ಕಾರ್ಯಕರ್ತರು.ಭಕ್ತರು ಇದ್ದರು.
WhatsApp Group Join Now
Telegram Group Join Now
Share This Article
error: Content is protected !!