Ad image

ಮೈ ಭಾರತ ಯುವ ಜನರನ್ನು ನಾಗರಿಕ ರಕ್ಷಣಾ ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳಲು ಆಹ್ವಾನ

Vijayanagara Vani
ಧಾರವಾಡ ಮೇ.13: ಯುವ ಮತ್ತು ಕ್ರೀಡಾ ಸಚಿವಾಲಯದ ಮೈ ಭಾರತ ಕಾರ್ಯಕ್ರಮವು ದೇಶದಾದ್ಯಾಂತ ಯುವಕರನ್ನು ಮೈ ಭಾರತ ನಾಗರಿಕ ರಕ್ಷಣಾ ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳಲು ಸಕ್ರಿಯವಾಗಿ ಪ್ರೇರೇಪಿಸುತ್ತಿದೆ. ದೇಶವ್ಯಾಪಿ ಆಹ್ವಾನವು ತುರ್ತು ಪರಿಸ್ಥಿತಿಗಳು ಮತ್ತು ಬಿಕ್ಕಟ್ಟಿನ ಸಮಯದಲ್ಲಿ ರಾಷ್ಟ್ರೀಯ ಕಾರಣಕ್ಕಾಗಿ ಮಹತ್ವಪೂರ್ಣ ಪಾತ್ರವಹಿಸಲು ಯುವ ನಾಗರಿಕರನ್ನು ಸಶಕ್ತಗೊಳಿಸುವ ಉದ್ದೇಶವನ್ನು ಹೊಂದಿದೆ.
ಯೋಜನೆಯು ಉತ್ತಮ ತರಬೇತಿ ಪಡೆದ, ಸ್ಪಂದಿಸುವ ಮತ್ತು ಆತ್ಮ ಸ್ಥೈರ್ಯದಿಂದಿರುವ ಸ್ವಯಂಸೇವಕರ ದಳವನ್ನು ನಿರ್ಮಿಸುವ ಉದ್ದೇಶ ಹೊಂದಿದ್ದು, ನೈಸರ್ಗಿಕ ವಿಪತ್ತುಗಳು, ಅಪಘಾತಗಳು, ಸಾರ್ವಜನಿಕ ತುರ್ತು ಪರಿಸ್ಥಿತಿಗಳು ಮತ್ತು ಇತರ ಅನಿರೀಕ್ಷಿತ ಸಂದರ್ಭಗಳಲ್ಲಿ ನಾಗರಿಕ ಆಡಳಿತವನ್ನು ಪೂರಕವಾಗಿರುತ್ತದೆ.
ಪ್ರಸ್ತುತ ಪರಿಸ್ಥಿತಿ ಮತ್ತು ಉದಯೋನ್ಮುಖ ಸುರಕ್ಷತಾ ಚಿಂತನೆಗಳನ್ನು ಮನಗಂಡು, ಸಮುದಾಯ ಆಧಾರಿತ ಪ್ರತಿಕ್ರಿಯಾ ವ್ಯವಸ್ಥೆಯನ್ನು ಸ್ಥಾಪಿಸುವ ಅಗತ್ಯತೆಯು ಹೆಚ್ಚಾಗಿದೆ. ನಾಗರಿಕ ರಕ್ಷಣಾ ಸ್ವಯಂಸೇವಕರು ಈ ಕ್ಷೇತ್ರದಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದು, ಸ್ಥಳೀಯ ಅಧಿಕಾರಿಗಳಿಗೆ ವಿವಿಧ ಸೇವೆಗಳ ಮೂಲಕ ಬೆಂಬಲ ನೀಡುತ್ತಾರೆ.
ರಕ್ಷಣೆ ಮತ್ತು ಸ್ಥಳಾಂತರ ಕಾರ್ಯಾಚರಣೆಗಳು, ಪ್ರಾಥಮಿಕ ಚಿಕಿತ್ಸೆ ಮತ್ತು ತುರ್ತು ಆರೈಕೆ, ಸಂಚಾರ ನಿರ್ವಹಣೆ, ಜನಸಮೂಹ ನಿಯಂತ್ರಣ, ಸಾರ್ವಜನಿಕ ಭದ್ರತೆ ಮತ್ತು ವಿಪತ್ತು ಪ್ರತಿಕ್ರಿಯೆ ಮತ್ತು ಪುನಶ್ಚೇತನ ಕಾರ್ಯಗಳಲ್ಲಿ ಸಹಾಯ ಮಾಡುವುದು ಒಳಗೊಂಡಿದೆ. ಸಿದ್ಧತೆಯುಳ್ಳ ಮತ್ತು ತರಬೇತಿಯಾದ ನಾಗರಿಕ ಪಡೆ ಇದ್ದು, ಮೈ ಭಾರತ ತನ್ನದಾದ ಕೊಡುಗೆ ನೀಡಲು ಬದ್ಧವಾಗಿದೆ.
ಮೈ ಭಾರತ ತನ್ನ ಚುರುಕಾದ ಯುವ ಸ್ವಯಂಸೇವಕರ ಜಾಲದೊಂದಿಗೆ ಜೊತೆಗೆ ಎಲ್ಲಾ ಉತ್ಸಾಹಭರಿತ ಯುವ ನಾಗರಿಕರನ್ನು ಈ ಮಹತ್ವದ ಕಾರ್ಯಕ್ಕಾಗಿ ಮುಂದೆ ಬಂದು ಮೈ ಭಾರತ ನಾಗರಿಕ ರಕ್ಷಣಾ ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳಲು ಪ್ರಾರಂಭಿಸಲಾಗಿದೆ.
ಮೈ ಭಾರತ ಸ್ವಯಂಸೇವಕರು ಮತ್ತು ಜವಾಬ್ದಾರಿ ತೆಗೆದುಕೊಳ್ಳಲು ಆಸಕ್ತರು https://mybharat.gov.in ವೆಬ್ಸೈಟ್ ಮೂಲಕ ನೋಂದಾಯಿಸಿಕೊಳ್ಳಬಹುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
error: Content is protected !!
";