ಸಿರುಗುಪ್ಪ.ಜು.11:- ಮಾಜಿ ಉಪಸಭಾಪತಿ, ಹಿರಿಯ ನ್ಯಾಯವಾದಿ, ಡಾ.ಎನ್.ತಿಪ್ಪಣ್ಣರವರ ಸಾಮಾಜಿಕ ಸೇವೆ ಅನನ್ಯವಾಗಿದೆ, ಅವರ ಅಗಲಿಕೆಯಿಂದ ನಮ್ಮ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಗುರುಬಸವ ಮಠದ ಶ್ರೀ ಬಸವಭೂಷಣ ಸ್ವಾಮೀಜಿ ತಿಳಿಸಿದರು.
ನಗರದ ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನದ ಆವರಣದಲ್ಲಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಎನ್.ತಿಪ್ಪಣ್ಣರವರ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಅವರು ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷರಾಗಿ ನಿರ್ವಹಿಸಿದ ಕೆಲಸ ಮತ್ತು ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಎರಡು ಬಾರಿ ವಿಧಾನ ಪರಿಷತ್ ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದು, ಅನುಭವಿ ಹಿರಿಯ ನ್ಯಾಯವಾದಿಯಾಗಿ, ಸಮಾಜ ಸೇವಕರಾಗಿ ಸಾಕಷ್ಟು ಕೆಲಸ ಮಾಡಿದ್ದರು ಎಂದು ಹೇಳಿದರು.
ರೌಡಕುಂದಿ ಸಂಸ್ಥಾನ ಹಿರೇಮಠದ ಶಿವಯೋಗಿ ಶಿವಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಟಿ.ಎಂ.ಚ0ದ್ರಯ್ಯಸ್ವಾಮಿ, ಪಿ.ಕಾರ್ಡ್ ಬ್ಯಾಂಕ್ ಅಧ್ಯಕ್ಷ ಚೊಕ್ಕಬಸವನಗೌಡ ಮಾತನಾಡಿದರು.
ಹಿರಿಯ ವಕೀಲ ಮಲ್ಲಿಕಾರ್ಜುನ ಸ್ವಾಮಿ, ಮುಖಂಡ ಎಸ್.ಎಂ.ನಾಗರಾಜಸ್ವಾಮಿ ಇನ್ನಿತರರು ಇದ್ದರು.
ನಗರದಲ್ಲಿ ಎನ್.ತಿಪ್ಪಣ್ಣನವರಿಗೆ ಶ್ರದ್ದಾಂಜಲಿ:
