Ad image

ದೆಹಲಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ್ದ ಕೆ.ಸಿ.ಡಿ ಕಾಲೇಜಿನ ಎನ್.ಸಿ.ಸಿ ಕೆಡಿಟ್ ನಯನಾ ಎಚ್.

Vijayanagara Vani
ದೆಹಲಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ್ದ ಕೆ.ಸಿ.ಡಿ ಕಾಲೇಜಿನ ಎನ್.ಸಿ.ಸಿ ಕೆಡಿಟ್ ನಯನಾ ಎಚ್.

 

ಧಾರವಾಡ () ಫೆ.08: ಕರ್ನಾಟಕ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ನಯನಾ ಎಚ್. ಅವರು ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಸತತ ಮೂರು ವರ್ಷಗಳಿಂದ ಎನ್.ಸಿ.ಸಿ.ಯಲ್ಲಿದ್ದು, ಅವರ ಪರಿಶ್ರಮದ ಫಲವಾಗಿ 2025 ರ ಗಣರಾಜ್ಯೋತ್ಸವದ ಕರ್ತವ್ಯ ಪಥದಲ್ಲಿ ದೇಶದ ಅತ್ಯುನ್ನತ ನಾಗರಿಕರ ಮುಂದೆ ಹಾಗೂ ಜನರ ಮುಂದೆ ಪಥ ಸಂಚಲನ ಮಾಡಲು ಅವಕಾಶ ಸಿಕ್ಕಿತು.

ನಯನಾ ಎಚ್. ಅವರು 24 ನೇ ಬಟಾಲಿಯನ್ ಇಂದ ಆಯ್ಕೆ ಆಗಿರುವ ಏಕೈಕ ಕೆಡೆಟ್ ಆಗಿದ್ದರು. ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ನಮ್ಮ ದೇಶದ ಅತ್ಯುನ್ನತ ನಾಗರಿಕರಾದ ಪ್ರಧಾನಮಂತ್ರಿ, ರಾಷ್ಟ್ರಪತಿ, ಉಪರಾಷ್ಟ್ರಪತಿ ಅವರನ್ನು ಭೇಟಿ ಮಾಡಿದರು. ಇದು ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದಾಗಿ ಎಂದು ತಿಳಿಸಿದ್ದಾರೆ.

ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, 6 ವರ್ಷಗಳ ಬಳಿಕ ಪಿ. ಎಂ. ಬ್ಯಾನರ್ ಕರ್ನಾಟಕ-ಗೋವಾದ ಪಾಲಾಗಿರುವುದು ನನ್ನ ಖುಷಿಯನ್ನು ಇಮ್ಮಡಿಗೊಳಿಸಿದೆ. ಕರ್ನಾಟಕದಲ್ಲಿ ನಮ್ಮ ಸಾಧನೆ ಗುರುತಿಸಿ ಕರ್ನಾಟಕ ಸರಕಾರ ಸಂತೋಷಕೂಟವನ್ನು ಏರ್ಪಡಿಸಿತ್ತು. ಇದರಲ್ಲಿ ನಾವು ರಾಜ್ಯಪಾಲ, ಮುಖ್ಯಮಂತ್ರಿ ಹಾಗೂ ವಿಶೇಷ ಗಣ್ಯ ವ್ಯಕ್ತಿಗಳೊಂದಿಗೆ ಚಹಾವನ್ನು ಸವಿಯುವ ಸೌಭಾಗ್ಯ ಒದಗಿತ್ತು. ಈ ನನ್ನ ಸಾಧನೆಗೆ ಡಿಜಿ ಎನ್.ಸಿ.ಸಿ ಗುರುಭೀರ ಪಾಲಸಿಂಗ್ ಎನ್.ಸಿ.ಸಿಯ ಎಎನ್‍ಒ ಕ್ಯಾಪ್ಟನ್ ಡಾ. ವೈ.ಎಸ್. ರಾಹುತ್, ಕರ್ನಲ್ ಜೆ.ಆರ್. ಚೌಧರಿ, ಲೆಫ್ಟಿನೆಂಟ್ ಕರ್ನಲ್ ವೈಎಸ್. ರನಾವತ್ ಹಾಗೂ ಕಾಲೇಜಿನ ಪ್ರಾಚಾರ್ಯ ಡಿ.ಬಿ.ಕರಡೋಣಿ, ಜಿಮ್‍ಖಾನಾ ಉಪಾಧ್ಯಕ್ಷರಾದ ಡಾ. ಆಯ್.ಸಿ.ಮುಳಗುಂದ, ಡಾ.ಅನ್ನಪೂರ್ಣ, ಹಿರಿಯ ಎನ್.ಸಿ.ಸಿ ಕೆಡೆಟ್ ವಿನಾಯಕ ಹತ್ತುರೆ ಅವರು ಪ್ರೋತ್ಸಾಹಿಸಿ, ಅಭಿನಂದಿಸಿದ್ದಾರೆ ಎಂದು ತಿಳಿಸಿದ್ದಾರೆ.

**

Share This Article
error: Content is protected !!
";