Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜ್ಯ ಸುದ್ದಿ

ಬಳ್ಳಾರಿ: ಸಚಿವ ಬಿ. ನಾಗೇಂದ್ರ ಅವರಿಂದ ಗಾಂಧೀಜಿ ಪ್ರತಿಮೆಗೆ ನಮನ, 150 ಅಡಿ ಎತ್ತರದ ಧ್ವಜಾರೋಹಣ


ಬಳ್ಳಾರಿ,ಆ.15
ಕರ್ನಾಟಕ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ನಾಗೇಂದ್ರ ಅವರು, 80 ನೇ ಸ್ವಾತಂತ್ರö್ಯ ದಿನಾಚರಣೆ ಅಂಗವಾಗಿ ಶನಿವಾರ ರಾಷ್ಟçಪಿತ ಮಹಾತ್ಮ ಗಾಂಧೀಜಿಯವರಿಗೆ ಗೌರವ ನಮನ ಸಲ್ಲಿಸುವುದರ ಜೊತೆಗೆ ಬೃಹತ್ ಧ್ವಜಾರೋಹಣ ನೆರವೇರಿಸಿದರು.
*ಡಾ. ರಾಜ್‌ಕುಮಾರ್ ಉದ್ಯಾನವನದಲ್ಲಿ ನಮನ:*
ನಗರದ ಪ್ರಮುಖ ಆಕರ್ಷಣೆಯಾದ ಡಾ. ರಾಜ್‌ಕುಮಾರ್ ಉದ್ಯಾನವನಕ್ಕೆ ಭೇಟಿ ನೀಡಿದ ಸಚಿವರು, ಅಲ್ಲಿರುವ ರಾಷ್ಟçಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು.
*150 ಅಡಿ ಎತ್ತರದ ಧ್ವಜಾರೋಹಣ:*
ಬಳಿಕ ನಗರದ ಹೆಚ್.ಆರ್. ಗವಿಯಪ್ಪ ವೃತ್ತದಲ್ಲಿನ 150 ಅಡಿ ಎತ್ತರದ ಬೃಹತ್ ಸ್ತಂಭದಲ್ಲಿ ವಿಧ್ಯುಕ್ತವಾಗಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು. ಬೃಹತ್ ಧ್ವಜವು ಗಗನದೆತ್ತರಕ್ಕೆ ಹಾರಾಡಿದ ಕ್ಷಣಕ್ಕೆ ಉಪಸ್ಥಿತರಿದ್ದ ಗಣ್ಯರು ಹಾಗೂ ನಾಗರಿಕರು ಸಾಕ್ಷಿಯಾದರು.
*ಬಿಎಂಸಿಆರ್‌ಸಿ ಮುಂಭಾಗದಲ್ಲಿ ಪುಷ್ಪಾರ್ಚನೆ:*
ನಂತರ, ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಮುಂಭಾಗದಲ್ಲಿನ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೂ ಪುಷ್ಪಾರ್ಚನೆ ಮಾಡಿ ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಡಾ.ಬಾಬು ಜಗಜೀವನ್‌ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮಹಾನಗರ ಪಾಲಿಕೆಯ ಮೇಯರ್ ಪಿ.ಗಾದೆಪ್ಪ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ., ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿ- ಸಿಬ್ಬಂದಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕರು ಇದ್ದರು.
--------

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಡಿತರ ಪಡೆಯುವ ಪ್ರತಿಯೋಬ್ಬರು ಇ-ಕೆವೈಸಿ ಮಾಡಿಸಲು ಸೆ.30 ರಂದು ಕೊನೆಯ ದಿನಖಾಸಗೀಕರಣದಿಂದ ಶಿಕ್ಷಣ ವ್ಯವಸ್ಥೆಗೆ ತೊಂದರೆ; ಡಾ ನುಗಡೋಣಿಬಲಕುಂದಿಯಲ್ಲಿ ‘ಎಂತ ಮಹಿಮಾನಿತ ಗೊಳ್ಯದ ಗಾದಿಲಿಂಗಪ್ಪ ತಾತನವರ’ ನಾಟಕ ಪ್ರದರ್ಶನ. ಐದು ಗುಡಿ ಲಿಂಗೇಶ್ವರ ಹಬ್ಬದ ಅಂಗವಾಗಿ ಭಕ್ತಿ ಸಂಭ್ರಮ; ಕಲಾವಿದರಿಗೆ ಸನ್ಮಾನಬಳ್ಳಾರಿ ಶಾಸಕದ್ವಯರಿಂದ ಪ್ರಜಾಸೇವಾ ಇಲಾಖೆ ಕುರಿತು ಶ್ಲಾಘನೆ ಪ್ರಜಾಸೇವಾ ಆಂದೋಲನ ಸಭೆ ಇಡೀ ದೇಶಕ್ಕೆ ಮಾದರಿಯಾಗಲಿದೆನೇಪಾಳದಲ್ಲಿ ಕಾಣೆಯಾದ ಕನ್ನಡಿಗರ ಡಿಎನ್‌ಎ ಮಾದರಿ ಸಂಗ್ರಹಕ್ಕೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ನೋಡಲ್ ಕೇಂದ್ರವಾಗಿ ಆಯ್ಕೆಸಂಶೋಧನೆಯಲ್ಲಿ ವಿಭಿನ್ನತೆ ಕುಂಠಿತ: ಪ್ರೊ.ಪಿ.ಎಲ್ ಧರ್ಮ ಅಭಿಪ್ರಾಯಭದ್ರಾ ಮೇಲ್ದಂಡೆ ಯೋಜನೆ - ನದಿ ಪಾತ್ರದ ಜನರಿಗೆ ಎಚ್ಚರಿಕೆಕಲ್ಯಾಣ ಕರ್ನಾಟಕ ಉತ್ಸವ: ಸೆಪ್ಟೆಂಬರ್ 8 ರಂದು ಪೂರ್ವಭಾವಿ ಸಿದ್ಧತಾ ಸಭೆದೃಷ್ಟಿಹೀನತೆಯ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿ: ಜಿಲ್ಲಾ ಆರೋಗ್ಯಾಧಿಕಾರಿ ಶಿವಾನಂದ ವಿ.ಪಿ ಕರೆಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ನಿಷೇಧಿತ ಪ್ರದೇಶ ಘೋಷಣೆ