Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಷ್ಟ್ರೀಯ ಸುದ್ದಿ

ವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನ

(ವಿಶೇಷ ವರದಿ)
ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯು ಬಹುತೇಕ ಮಳೆಯಾಧಾರಿತ ಕೃಷಿಯನ್ನು ಅವಲಂಬಿಸಿದೆ. ಸದ್ಯದ ಬರಗಾಲದ ಪರಿಸ್ಥಿತಿಯಲ್ಲಿ ಆಶಾಕಿರಣದಂತೆ ಬಂದ ಯೋಜನೆ ಎಂದರೆ ವಿಬಿ-ಜಿ ರಾಮ್-ಜಿ ಯೋಜನೆ. ಈ ಯೋಜನೆಯಡಿ ರೈತರು ಕೃಷಿಹೊಂಡ ನಿರ್ಮಿಸಿಕೊಂಡು ಮಳೆನೀರನ್ನು ಸಂಗ್ರಹಿಸುವುದರ ಮೂಲಕ ತಮ್ಮ ಕೃಷಿ ಭೂಮಿಗೆ ಕೃಷಿಹೊಂಡವನ್ನೇ ವರದಾನವನ್ನಾಗಿಸಿಕೊಳ್ಳುತ್ತಿದ್ದಾರೆ.
ಇದಕ್ಕೆ ಉತ್ತಮ ಉದಾಹರಣೆ ಎಂದರೆ ಇತ್ತೀಚೆಗೆ ಕುಕನೂರು ತಾಲ್ಲೂಕಿನಲ್ಲಿ ವಿಬಿ-ಜಿ ರಾಮ್-ಜಿ ಯೋಜನೆಯಡಿ ನಿರ್ಮಾಣವಾದ 8 ಕೃಷಿ ಹೊಂಡಗಳು. ಜಿಲ್ಲಾ ಪಂಚಾಯತಿಯ ಕ್ರಿಯಾ ಯೋಜನೆಯಲ್ಲಿ ಜಿಲ್ಲೆಯಾದ್ಯಂತ ಒಟ್ಟು 876 ಕೃಷಿ ಹೊಂಡಗಳಿಗೆ ಯೋಜನೆ ರೂಪಿಸಲಾಗಿದೆ. ಅವುಗಳಲ್ಲಿ ಜಿಲ್ಲೆಯ ಕುಕನೂರು ತಾಲ್ಲೂಕಿನ ಇಟಗಿಯಲ್ಲಿ 6, ಮಂಗಳೂರು ಹಾಗೂ ಬಳಗೇರಿಯಲ್ಲಿ ತಲಾ ಒಂದು ಕೃಷಿಹೊಂಡವನ್ನು ವಿಬಿ-ಜಿ ರಾಮ್-ಜಿ ಯೋಜನೆಯಡಿ ನಿರ್ಮಿಸಲಾಗಿದೆ. ಬಾಕಿ ಕೃಷಿ ಹೊಂಡಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿವೆ. ಜಿಲ್ಲೆಯ ಎಲ್ಲ ರೈತರೂ ವಿಬಿ-ಜಿ ರಾಮ್ ಜಿ ಯೋಜನೆಯಡಿ ತಮ್ಮ ಕೃಷಿಭೂಮಿಯಲ್ಲಿ ಕೃಷಿಹೊಂಡಗಳನ್ನು ನಿರ್ಮಿಸಿಕೊಳ್ಳಬಹುದಾಗಿದೆ.
ಹನಿ ಹನಿ ಸೇರಿದರೆ ಹಳ್ಳ ಎಂಬ ಮಾತಿನಂತೆ ಬರಗಾಲದ ಈ ಪರಿಸ್ಥಿತಿಯಲ್ಲಿ ಅಪರೂಪಕ್ಕೆ ಸುರಿಯುವ ಮಳೆ ನೀರನ್ನು ಸಂಗ್ರಹಿಸಿ, ಕೃಷಿಗೆ ಸದ್ಬಳಕೆ ಮಾಡಿಕೊಳ್ಳಬಹುದು. ಮಳೆಯ ಕೊರತೆ ನಡುವೆ ಕೃಷಿ ಹೊಂಡಗಳು ರೈತರಿಗೆ ನೆರವಾಗಬಲ್ಲವು. ಪ್ರತಿ ಕೃಷಿ ಹೊಂಡಕ್ಕೆ ಸರ್ಕಾರದಿಂದ ರೂ.1,23,000/- ಗಳ ಘಟಕ ವೆಚ್ಚವನ್ನು ಸಹ ನೀಡಲಾಗುತ್ತದೆ. ಇದರಲ್ಲಿ ರೂ.1,14,000/- ಗಳನ್ನು ಕೃಷಿ ಹೊಂಡ ನಿರ್ಮಿಸಲು ಹಾಗೂ ರೂ.8957/- ಗಳನ್ನು ಪೈಪ್‌ಲೈನ್ ಸಂಪರ್ಕಕ್ಕೆ ಬಳಸಿಕೊಳ್ಳಬಹುದು.
ಕೋಟ್:1
ಮಳೆ ನೀರಿನ ಸದ್ಬಳಕೆಗೆ ರೈತರಿಗೆ ಸಲಹೆ:
ನೀರಿನ ಪ್ರತಿ ಹನಿಯೂ ಅತ್ಯಮೂಲ್ಯವಾಗಿದ್ದು, ವೈಜ್ಞಾನಿಕ ಉಪಕ್ರಮದ ಮೂಲಕ ದಿಬ್ಬದಿಂದ ಕಣಿವೆ ಮೂಲಕ ಕೃಷಿಹೊಂಡ ಅನುಷ್ಠಾನಗೊಳಿಸಿ ಮಳೆಗಾಲದಲ್ಲಿ ಓಡುವ ನೀರನ್ನು ನಿಲ್ಲಿಸಿ, ನಿಂತ ನೀರನ್ನು ಇಂಗಿಸಿ, ಅಂತರ್ಜಲ ಪ್ರಮಾಣ ವೃದ್ಧಿಸಿ, ನೀರಿನ ಸದ್ಭಳಕೆಯ ಮಹತ್ವವನ್ನು ಕೃಷಿಹೊಂಡ ನಿರ್ಮಾಣ ಕಾರ್ಯಕ್ರಮದ ಮೂಲಕ ಕಂಡುಕೊಳ್ಳಬ
ಹುದಾಗಿದೆ.
- ಡಾ.ಸುರೇಶ ಬಿ.ಇಟ್ನಾಳ, ಜಿಲ್ಲಾಧಿಕಾರಿಗಳು, ಕೊಪ್ಪಳ
ಕೋಟ್:2
ರೈತರ ಸಬಲೀಕರಣಕ್ಕೆ ಅನುಕೂಲ:
ವಿಬಿ-ಜಿ ರಾಮ್-ಜಿ ಯೋಜನೆಯಡಿ ಅನುಷ್ಠಾನಗೊಂಡ ಕೃಷಿ ಹೊಂಡ ನಿರ್ಮಾಣ ಕಾರ್ಯಕ್ರಮವು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣಾ ಕಾಮಗಾರಿಯಾಗಿದ್ದು, ಇದು ರೈತರಿಗೆ ಅತ್ಯುಪಯುಕ್ತವಾಗಿದೆ. ಹೊಲದಲ್ಲಿ ಮಣ್ಣಿನ ಫಲವತ್ತತೆ, ತೇವಾಂಶ, ಮಣ್ಣಿನ ಸವಕಳಿ, ಅಂತರ್ಜಲ ಪ್ರಮಾಣ ವೃದ್ಧಿಗೊಂಡು ರೈತರು ಬರಗಾಲದಲ್ಲಿ, ಬೇಸಿಗೆಯಲ್ಲಿ ಹೆಚ್ಚಿನ ಫಸಲನ್ನು ಬೆಳೆದು, ಆರ್ಥಿಕವಾಗಿ ಸಬಲರಾಗುವಲ್ಲಿ ಸಹಕಾರಿಯಾಗಿದೆ.
- ವರ್ಣಿತ್ ನೇಗಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತಿ, ಕೊಪ್ಪ

Author
Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯುವಶಕ್ತಿಯ ಸಂಘಟನೆಯಿಂದ ಪಕ್ಷ ಬಲವರ್ಧನೆಗೆ ಆದ್ಯತೆಬಳ್ಳಾರಿ: ಮಗುವಿನ ಪೋಷಕರ ಪತ್ತೆಗಾಗಿ ಮನವಿಬಳ್ಳಾರಿ: ಮಗುವಿನ ಪೋಷಕರ ಪತ್ತೆಗಾಗಿ ಮನವಿಬೆಂಗಳೂರಿನಲ್ಲಿ ರಾಜ್ಯದ ಮೊದಲ ‘ಗಾಂಧಿ ಸ್ಮಾರಕ ಸ್ತಂಭ’ವನ್ನು ಅನಾವರಣಗೊಳಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ