Ad image

ಜು.29 ರಂದು ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ

Vijayanagara Vani
ಜು.29 ರಂದು ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ
ಬಳ್ಳಾರಿ,
ಕಾರ್ಮಿಕರ ಭವಿಷ್ಯ ಸಂಸ್ಥೆ ಬಳ್ಳಾರಿ ಪ್ರಾದೇಶಿಕ ಕಚೇರಿ ವತಿಯಿಂದ ಭವಿಷ್ಯ ನಿಧಿ ನಿಮ್ಮ ಹತ್ತಿರಕ್ಕೆ ಎಂಬ ಅಂಶದಡಿ ಜು.29 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಂಡೂರು ತಾಲ್ಲೂಕಿನ ತೋರಣಗಲ್ಲಿನ ಎಂಡಿ ಮೂವರ್ಸ್ನಲ್ಲಿ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಾದೇಶಿಕ ಭವಿಷ್ಯ ನಿಧಿ ಬಳ್ಳಾರಿ ಪ್ರಾದೇಶಿಕ ಕಚೇರಿಯ ಆಯುಕ್ತ ಕೆ.ವೆಂಕಟ ಸುಬ್ಬಯ್ಯ ಅವರು ತಿಳಿಸಿದ್ದಾರೆ.
ಕಾರ್ಮಿಕರ, ಪಿಂಚಣಿದಾರರ ಮತ್ತು ಉದ್ಯೋಗದಾತರರ ಕುಂದು ಕೊರತೆ ಪರಿಹಾರ, ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. ಉದ್ಯೋಗದಾತರ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಅರಿವು, ಕಾರ್ಮಿಕರಿಗೆ, ಉದ್ಯೋಗದಾತರಿಗೆ, ಪ್ರಧಾನ ಉದ್ಯೋಗದಾತರಿಗೆ ಮತ್ತು ಗುತ್ತಿಗೆದಾರರಿಗೆ ಲಭ್ಯವಿರುವ ಆನ್ಲೈನ್ ಸೇವೆಗಳ ಮಾಹಿತಿ, ಹೊಸ ಉಪಕ್ರಮಗಳು ಹಾಗೂ ಸುಧಾರಣೆ ಕ್ರಮಗಳ ಕುರಿತು ಮಾಹಿತಿ ಒದಗಿಸುವ ಕಾರ್ಯಕ್ರಮವಾಗಿದೆ.
ಕಾರ್ಮಿಕರು, ಪಿಂಚಣಿದಾರರು, ಉದ್ಯೋಗದಾತರು ಜು.29 ರಂದು ನಡೆಯುವ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Share This Article
error: Content is protected !!
";