Ad image

ಬಣ್ಣಗಳು ಜನರ ಬಾಳನ್ನು ಆಳಬಾರದು ಎಂದು ಅಖಂಡ ಬಳ್ಳಾರಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷರಾದ ನಿಷ್ಟಿ ರುದ್ರಪ್ಪ ತಿಳಿಸಿದರು.

Vijayanagara Vani
ಬಣ್ಣಗಳು ಜನರ ಬಾಳನ್ನು ಆಳಬಾರದು ಎಂದು ಅಖಂಡ ಬಳ್ಳಾರಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷರಾದ ನಿಷ್ಟಿ ರುದ್ರಪ್ಪ ತಿಳಿಸಿದರು.

ಬಳ್ಳಾರಿ ನಗರದ ತಾಳೂರು ರಸ್ತೆಯ ಬಾಲಾಜಿನಗರದ 2 ನೇ ರಸ್ತೆಯ ಸಾಹಿತಿ ಅಜಯ್ ಬಣಕಾರರವರ ಹೂನಗೆ ಗೃಹದಲ್ಲಿ ಕಾವ್ಯ ಮನೆ ಪ್ರಕಾಶನ ಪ್ರಕಟಿಸಿದ ಅಬ್ದುಲ್ ಹೈ ತೋರಣಗಲ್ಲು ಬರೆದ ಕುಲಾಂತರಿ ಕೂಸು ಎಂಬ ಕವನ ಸಂಕಲನ ಮತ್ತು ಮುಳ್ಳಪ್ಪಿದ ಮೌನ ಎಂಬ ಘಜಲ್ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡಿದ ನಿಷ್ಟಿ ರುದ್ರಪ್ಪನವರು ಬಹುತ್ವ ವ್ಯವಸ್ಥೆಯ ಭಾರತದಲ್ಲಿ ಸಾಮರಸ್ಯ ಬಹುಮುಖ್ಯ ವಾದ ಸಂಗತಿ, ಇದಕ್ಕೆ ಪೂರಕವಾಗಿ ಸಾಹಿತಿಗಳ ಬರಹಗಳಿರಬೇಕು ಎಂದರು.ವೈಚಾರಿಕ ಚಿಂತನೆಗಳನ್ನು ಬೆಳೆಸುವ ಸಾಹಿತ್ಯದ ಅಗತ್ಯತೆ ಇಂದಿನ ಜರೂರರತ್ತು ಎಂದರು.
ಅಬ್ದುಲ್ ಹೈರವರ ಕುಲಾಂತರಿ ಕೂಸು ಕವನ ಸಂಕಲನವನ್ನು ಪರಿಚಯಿಸಿ ಮಾತನಾಡಿದ ಸಾಹಿತಿ ಡಾ.ಯು.ಶ್ರೀನಿವಾಸ ಮೂರ್ತಿ ಅವರು ವರ್ತಮಾನದ ಬೇರುಗಳು ಭೂತಕಾಲದಲ್ಲಿರುತ್ತವೆ ಮತ್ತು ವರ್ತಮಾನದ ವಿಶ್ಲೇಷಣೆಯು ಭವಿಷ್ಯವನ್ನು ನಿರ್ದೇಶಿಸುತ್ತದೆ,ಆದಕಾರಣ ಭೂತವನ್ನು ದಾಖಲಿಸುತ್ತಾ ,ಅರಿಯುತ್ತಾ ಮತ್ತು ವಿಶ್ಲೇಷಿಸುತ್ತಾ ,ಯೋಜಿತ ಮತ್ತು ತೌಲನಿಕ ವ್ಯವಸ್ಥೆಯತ್ತ ಸಾಗುವ ಅಗತ್ಯತೆ ನಮ್ಮ ಮುಂದೆ ಇದೆ ಇದಕ್ಕೆ ಅಬ್ದುಲ್ ಹೈ ಕವನ ಸಂಕಲನ ಪೂರಕವಾಗಿದೆ ಎಂದರು.
ಘಜಲ್ ಪುಸ್ತಕ ಮುಳ್ಳಪ್ಪಿದ ಮೌನ ದ ಬಗ್ಗೆ ಯುವ ಕವಿ ಸಿಕಂದರ್ ಅಲಿ ಮಾತನಾಡಿ ಘಜಲ್ ಗಳು ಕನ್ನಡಕ್ಕೆ ಬಂದ ಹಾದಿಯನ್ನು ವಿವರಿಸಿ,ಈ ಘಜಲ್ ಸಂಕಲನದಲ್ಲಿ ರಾಜಕೀಯ ವಿಡಂಬನೆ, ಪ್ರೀತಿ,ಪ್ರೇಮ,ದಾಂಪತ್ಯ,ಪರಿಸರದ ಬಗ್ಗೆ ಅಡಗಿದೆ ಎಂದರು.ಅದ್ಯಕ್ಷತೆ ವಹಿಸಿದ್ದ ಡಿಎಸ್ ಎಸ್ ವಿಭಾಗೀಯ ಕಾರ್ಯದರ್ಶಿ ಹುಲುಗಪ್ಪ ಇವರು ಮಾತನಾಡಿ ಸಾಮರಸ್ಯದ ಬದುಕು ನಮ್ಮದಾಗಬೇಕು.ವೈವಿದ್ಯಮಯ ಸಂಸ್ಕೃತಿಯ ದೇಶದಲ್ಲಿ ಜನರನ್ನು ಒಂದುಗೂಡಿಸುವುದು ಸಾಹಿತ್ಯ ಮಾತ್ರ,ಆ ಕೆಲಸವನ್ನು ಸಾಹಿತಿಗಳು ಮಾಡುತ್ತಿದ್ದಾರೆ ಎಂದರು.
ನಂತರ ನಡೆದಕವಿಗೋಷ್ಟಿಯಲ್ಲಿ
ಅದ್ಯಕ್ಷತೆ ವಹಿಸಿ ಮಾತನಾಡಿದ ಕವಿ ಅಜಯ್ ಬಣಕಾರ ಮಾತನಾಡಿ ಬಿಸಿಲ ನಾಡು ಬಳ್ಳಾರಿ ಯಲ್ಲಿ ಉದಯೊನ್ಮುಖ ಕವಿಗಳ ಉದಯ ಹರ್ಷ ತಂದಿದೆ ಎಂದರು.ವಿಚಾರ ಪೂರ್ಣ ,ಜಾಗೃತಿ ತರಿಸುವ ಕವಿತೆಗಳು ವೇದಿಕೆಯ ಮೇಲೆ ಪ್ರಚರಗೊಂಡವು ಎಂದರು.
ಪ್ರಾಸ್ತಾವಿಕ ಮಾತುಗಳನ್ನು ಡಾ.ಅರವಿಂದ ಪಾಟೀಲ್ ನುಡಿದರು,ಕನ್ನಡ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ.ಸಿ ಬಿ ಚಿಲ್ಕರಾಗಿ ರವರ ಕವನ ವಾಚನ ಕೇಳುಗರಿಗೆ ಸಂತಸ ನೀಡಿತು,ಕವಿಗೋಷ್ಟಿಗೆ ಹಿರಿಯ ಕವಯತ್ರಿ ಎನ್ .ಡಿ .ವೆಂಕಮ್ಮ ಚಾಲನೆ ನೀಡಿದರು. ಅನೇಕ ಕವಿಗಳು ಕವನಗಳನ್ನು ವಾಚಿಸಿದರು.ಕವಿಗಳಾದ ಪಿ ಆರ್ .ವೆಂಕಟೇಶ್, ಅಬ್ದುಲ್ ಹೈ ,ಡಾ.ದಸ್ತಗಿರಿ ಸಾಬ್ ದಿನ್ನಿ,ವೀರೇಂದ್ರ ರಾವಿಹಾಳ್, ಶಿವಲಿಂಗಪ್ಪ ಹಂದಿಹಾಳ್,ಎ.ಎಂ ಪಿ ವೀರೇಶ ಸ್ವಾಮಿ,ಕೆ ಪಿ ಮಂಜುನಾಥ ರೆಡ್ಡಿ, ಅಂಕಲಿ ಬಸಮ್ಮ, ಸುಮಾ. ಹಿರಿಯ ರಂಗಕರ್ಮಿ ಬಂಡ್ರಿ ಲಿಂಗಣ್ಣ ಉಪಸ್ಥಿತರಿದ್ದರು. ,ಹಿರಿಯ ರಂಗ ಕರ್ಮಿ ಬಂಡ್ರಿ ಲಿಂಗಣ್ಣ ಅವರ ನಾಟಕದ ಮಾತುಗಳು ಪ್ರೇಕ್ಷಕರ‌ ಮನಸೂರಗೊಂಡವು. ನಾಗರಾಜ್ ಬಸರಕೋಡು ಸ್ವಾಗತಿಸಿದರು, ಚಾಂದ್ ಪಾಷ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ನಾಗಿರೆಡ್ಡಿ, ಶಿಕ್ಷಕಿ- ಸಾಹಿತಿ ಈರಮ್ಮ ಇವರನ್ನು ಸನ್ಮಾನಿಸಲಾಯಿತು.

Share This Article
error: Content is protected !!
";