ವಿದ್ಯುತ್ ಗೋಪುರ ಮುಟ್ಟದಂತೆ ಸೂಚನೆ

Vijayanagara Vani
ವಿದ್ಯುತ್ ಗೋಪುರ ಮುಟ್ಟದಂತೆ ಸೂಚನೆ
ಚಿತ್ರದುರ್ಗ 
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಜಿಲ್ಲೆಯ 220/66/11 ಕೆ.ವಿ ಹಿರಿಯೂರು ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹರಿಯಬ್ಬೆ ಟ್ಯಾಪಿಂಗ್ ಪಾಯಿಂಟ್ ವರೆಗೆ ಹಾಲಿ ಇರುವ 18.928 ಕಿ.ಮೀ ಉದ್ದದ 66 ಕೆ.ವಿ ವಿದ್ಯುತ್ ಪ್ರಸರಣ ಮಾರ್ಗದ ತಂತಿಯನ್ನು ಬದಲಾಯಿಸುವುದು ಹಾಗೂ ಹೆಚ್ಚುವರಿ ಗೋಪುರಗಳನ್ನು ಅಳವಡಿಸುವ ಕಾಮಗಾರಿ ಮತ್ತು 66/11 ಕೆ.ವಿ ಹರಿಯಬ್ಬೆ ಉಪ ಕೇಂದ್ರದಿಂದ ಹರಿಯಬ್ಬೆ ಟ್ಯಾಪಿಂಗ್ ಪಾಯಿಂಟ್ವರೆಗೆ ಹಾಲಿ ಇರುವ 9.628 ಕಿ.ಮೀ ಉದ್ದದ 66 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದ ತಂತಿಯನ್ನು ಬದಲಾಯಿಸುವುದು, ಹೆಚ್ಚುವರಿ ಗೋಪುರಗಳನ್ನು ಅಳವಡಿಸುವ ಕಾಮಗಾರಿಯು ಮುಕ್ತಾಯಗೊಂಡಿರುತ್ತದೆ.
ಈ 66 ವಿದ್ಯುತ್ ಮಾರ್ಗವನ್ನು ಜುಲೈ 20ರಂದು ಅಥವಾ ತದನಂತರ ಚೇತನಗೊಳಿಸುವುದರಿಂದ ಈ 66 ಕೆವಿ ಪ್ರಸರಣ ಮಾರ್ಗದ ವಿದ್ಯುತ್ ಗೋಪುರಗಳನ್ನು ಸಾರ್ವಜನಿಕರು ಮುಟ್ಟುವುದಾಗಲಿ, ಹತ್ತುವುದಾಗಲಿ, ಮರದ ರೆಂಬೆ, ಲೋಹದ ತಂತಿಗಳನ್ನು ಹಾಗೂ ಇತರೆ ಯಾವುದೇ ವಸ್ತುಗಳನ್ನು ಮಾರ್ಗದ ಮೇಲೆ ಎಸೆಯುವುದಾಗಲಿ ಮತ್ತು ವಿದ್ಯುತ್ ಗೋಪುರಗಳಿಗೆ ಜಾನುವಾರುಗಳನ್ನು ಕಟ್ಟುವುದಾಗಲಿ ಮಾಡಬಾರದು ಎಂದು ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.
ಈ ಮಾರ್ಗದ ಮೊಗಸಾಲೆಯಲ್ಲಿ ಅಪಾಯದ ಮಟ್ಟದಲ್ಲಿ ಇರುವ ಮರಗಳನ್ನು ಸುರಕ್ಷತೆಯ ದೃಷ್ಠಿಯಿಂದ ತೆಗೆದು ಹಾಕಲು ನಿಗಮದ ನಿಯಮಾನುಸಾರ ಸೂಕ್ತ ಪರಿಹಾರ ಪಡೆದುಕೊಂಡು ಮರಗಳನ್ನು ತೆಗೆಯದೇ ಇರುವ ಭೂ ಮಾಲೀಕರು ಕೂಡಲೇ ಮಾರ್ಗದ ಮೊಗಸಾಲೆಯಲ್ಲಿರುವ ಮರಗಳನ್ನು ಕಡಿದು ಹಾಕಲು ಅನುಮತಿ ನೀಡಬೇಕು. ಒಂದು ವೇಳೆ ಈ ಸೂಚನೆಯನ್ನು ಉಲ್ಲಂಘಿಸಿದಲ್ಲಿ ಮಾರ್ಗದಿಂದ ಸಾರ್ವಜನಿಕರಿಗೆ ಆಗುವ ಹಾನಿ, ತೊಂದರೆ, ಅಪಘಾತಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಜವಾಬ್ದಾರಿಯಾಗಿರುವುದಿಲ್ಲ.
ವಿದ್ಯುತ್ ಹಾದುಹೋಗುವ ಪ್ರದೇಶಗಳು: ಮ್ಯಾಕ್ಯೂರಹಳ್ಳಿ, ಬಬ್ಬೂರು, ಹೇಮದಳ, ಅಂಬಲಗೆರೆ, ಬಿದರಕೆರೆ, ಹರಿಯಬ್ಬೆ, ಶಿಡ್ಲಯ್ಯನಕೋಟೆ, ಕ್ಯಾತನಮಳೆ, ಗೊಲ್ಲರಹಟ್ಟಿ ಗೂಳ್ಯ, ರಂಗೇನಹಳ್ಳಿ ಮತ್ತು ಚಂದ್ರಗಿರಿ ಗೊಲ್ಲಹಳ್ಳಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಮಾರ್ಗ ಹಾದು ಹೋಗಲಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article
error: Content is protected !!