ಕರಾಮುವಿ: ಘಟಿಕೋತ್ಸವ ಶುಲ್ಕ ಪಾವತಿಸಲು ಸೂಚನೆ

Vijayanagara Vani
ಕರಾಮುವಿ: ಘಟಿಕೋತ್ಸವ ಶುಲ್ಕ ಪಾವತಿಸಲು ಸೂಚನೆ
ಬಳ್ಳಾರಿ,ಫೆ.07
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 20ನೇ ವಾರ್ಷಿಕ ಘಟಿಕೋತ್ಸವವನ್ನು 2025ನೇ ಮಾರ್ಚ್ ನಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, 2020-21ನೇ ಶೈಕ್ಷಣಿಕ ಸಾಲಿನಿಂದ 2023-24ನೇ ಶೈಕ್ಷಣಿಕ ಸಾಲಿನವರೆಗೆ ವಿವಿಧ ಕೋರ್ಸ್ಗಳಲ್ಲಿ ತೇರ್ಗಡೆ ಹೊಂದಿರುವ ಸಿಜಿಸಿಎಸ್ ಮತ್ತು ನಾನ್ ಸಿಬಿಸಿಎಸ್ ಗಳ ಯುಜಿ, ಪಿಜಿ, ಡಿಪ್ಲೋಮಾ ಸರ್ಟಿಫಿಕೆಟ್ ಕೋರ್ಸ್ಗಳ ವಿದ್ಯಾರ್ಥಿಗಳು ಘಟಿಕೋತ್ಸವ ಶುಲ್ಕ ಪಾವತಿಸಲು ಅಧಿಸೂಚನೆ ಹೊರಡಿಸಲಾಗಿದೆ.
ಪದಕ ಮತ್ತು ನಗದು ಬಹುಮಾನ ಪುರಸ್ಕೃತರು ಪ್ರಥಮ ದರ್ಜೆಯಲ್ಲಿ ಉತೀರ್ಣರಾಗಿರುವ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಪಿ.ಎಚ್.ಡಿ ವಿದ್ಯಾರ್ಥಿಗಳು 1200 ರೂ., ಎಲ್ಲಾ ಸ್ನಾತಕ-ಸ್ನಾತಕೋತ್ತರ ವಿದ್ಯಾರ್ಥಿಗಳು 1500 ರೂ. ಗಳನ್ನು ದಂಡ ಶುಲ್ಕವಿಲ್ಲದೆ ಫೆ.10ರ ಒಳಗಾಗಿ ಪಾವತಿಸಬೇಕು.
ದಂಡ ಶುಲ್ಕದೊಂದಿಗೆ ರೂ.100 ಗಳನ್ನು ಫೆ.15 ರೊಳಗಾಗಿ ಪಾವತಿಸುವುದು.
ಹೆಚ್ಚಿನ ಮಾಹಿತಿಗಾಗಿ ಕರಾಮುವಿ ಬಳ್ಳಾರಿ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕರ ಕಚೇರಿ ಅಥವಾ ಮೊ.7892597159 ಗೆ ಸಂಪರ್ಕಿಸಬಹುದು ಎಂದು ಕರಾಮುವಿಯ ಬಳ್ಳಾರಿ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕರು ತಿಳಿಸಿದ್ದಾರೆ.
Share This Article
error: Content is protected !!
";