Ad image

ಯುವನಿಧಿ ಯೋಜನೆ: 3 ತಿಂಗಳಿಗೊಮ್ಮೆ ಸ್ವಯಂ ಘೋಷಣೆ ಸಲ್ಲಿಸಲು ಸೂಚನೆ

Vijayanagara Vani
ಕೊಪ್ಪಳ ಜುಲೈ 07 : ಯುವನಿಧಿ ಯೋಜನೆಯ ಫಲಾನುಭವಿಗಳು ಪ್ರಸ್ತುತ ಮಾಸಿಕವಾಗಿ ದಾಖಲಿಸುತ್ತಿರುವ ಸ್ವಯಂ ಘೋಷಣೆಯ ಬದಲಾಗಿ ಇನ್ನು ಮುಂದೆ ಮೂರು ತಿಂಗಳಿಗೊಮ್ಮೆ ಸ್ವಯಂ ಘೋಷಣೆ ಸಲ್ಲಿಸಲು ಸೂಚಿಸಲಾಗಿದೆ.
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಅಂತಿಮ ದಿನಾಂಕ ಇರುವುದಿಲ್ಲ. ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆ ಸೇವಾ ಸಿಂಧು ಪೋರ್ಟಲ್‌ನಲ್ಲಿ ಚಾಲನೆಯಲ್ಲಿರುತ್ತದೆ. ಆದಕಾರಣ 2023 ಅಥವಾ 2024ನೇ ಸಾಲಿನಲ್ಲಿ ಪದವಿ/ಸ್ನಾತಕೋತ್ತರ ಪದವಿ ಮತ್ತು ಡಿಪ್ಲೋಮಾ ತೇರ್ಗಡೆಯಾಗಿ ಅರ್ಜಿ ಸಲ್ಲಿಸದೇ ಇರುವ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ http://sevasindhugs.karnataka.gov.in ನಲ್ಲಿ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಎರಡು ದಿನಗಳ ನಂತರ ಡಿಡಿಪಿಐ ಇಲಾಖೆಯಲಲಿ ಎಸ್‌ಎಸ್‌ಎಲ್‌ಸಿ, ಡಿಡಿಪಿಯು ಇಲಾಖೆಯಲ್ಲಿ ಪಿಯುಸಿ ಮತ್ತು ಡಿಇಇಒ ಇಲಾಖೆಯಲ್ಲಿ ಡಿಪ್ಲೊಮಾ/ಪದವಿ ಮೂಲ ಅಂಕಪಟ್ಟಿಗಳೊAದಿಗೆ ಭೇಟಿ ನೀಡಿ ಪರಿಶೀಲನೆ ಮಾಡಿಕೊಳ್ಳಬೇಕು. ಈ ಮೂರು ಇಲಾಖೆಗಳು ಜಿಲ್ಲಾಡಳಿತ ಭವನದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತವೆ.
ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಕೊಪ್ಪಳ ಯುವನಿಧಿ ಸಹಾಯವಾಣಿ ಸಂಖ್ಯೆ: 18005997154 ನ್ನು ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
error: Content is protected !!
";