ಕೊಪ್ಪಳ ಮೇ 13: ಹಿಂದು ಧಾರ್ಮಿಕ ಧರ್ಮಾದಾಯ ದತ್ತಿಗಳ ಇಲಾಖೆ ಹಾಗೂ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹುಲಿಯ ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವು ಮೇ 20 ರಿಂದ 24 ರವರೆಗೆ ನಡೆಯಲಿದ್ದು, ಮಹಾ ರಥೋತ್ಸವವು ಮೇ 21ರ ಸಂಜೆ 5.30ಕ್ಕೆ ಜರುಗಲಿದೆ.
ಮೇ 22ರಂದು ಬಾಳಿದಂಡಿಗೆ ಆರೋಹಣ ಕಾರ್ಯಕ್ರಮ, ಏಕಾದಶಿ ಶುಕ್ರವಾರಂದು ದೇವಿಗೆ ಪಾಯಸ ಪ್ರಸಾದ ನಿವೇದನೆ ಕಾರ್ಯ ಹಾಗೂ ಶನಿವಾರ ದ್ವಾದಶಿ ನಸುಕಿನಲ್ಲಿ ಅಗ್ನಿಕುಂಡ ನಡೆಯಲಿದ್ದು, ಜೂನ್ 17 ರಂದು ರಾತ್ರಿ 8 ಗಂಟೆಗೆ ಶ್ರೀ ಹುಲಿಗೆಮ್ಮ ದೇವಿಯವರ ಕಂಕಣ ವಿಸರ್ಜನೆ ಮಾಡಲಾಗುವುದು ಎಂದು ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.