Ad image

ಅ.5 ರಂದು ರಾಗಂ ಅವರ ಯೋಗಸ್ಥಃ ಸಂತೆಯಿOದ ಸಂತನೆಡೆಗೆ ಅವೃತ್ತಿಗಳ ಲೋಕಾರ್ಪಣೆ

Vijayanagara Vani
ಅ.5 ರಂದು ರಾಗಂ ಅವರ ಯೋಗಸ್ಥಃ ಸಂತೆಯಿOದ ಸಂತನೆಡೆಗೆ ಅವೃತ್ತಿಗಳ ಲೋಕಾರ್ಪಣೆ

ಹೊಸಪೇಟೆ: ಪಟ್ಟಣದ ವಿ.ವಿ.ಸಂಘ,ವಿಜಯನಗರ ಮಹಾವಿದ್ಯಾಲಯ ಸುವರ್ಣ ಮಹೋತ್ಸವ ಭವನದಲ್ಲಿ ಅ.5 ರಂದು ಬೆ.10ಕ್ಕೆ ಶ್ರೀ ಸಿದ್ದೇಶ್ವರ ಸೇವಾ ಸಮಿತಿ , ಹೊಸಪೇಟೆ ಹಾಗೂ ಪಿ.ಆರ್. ಪಬ್ಲಿಕೇಷನ್ ಬೆಂಗಳೂರು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ರಾಷ್ರ್ಟ ಸಂತ ಸಿದ್ದೇಶ್ವರ ಶ್ರೀಗಳ ಕುರಿತ ಇಂಗ್ಲೀಷ,ಹಿOದಿ,ತೆಲಗು, ಭಾಷಗಳಲ್ಲಿ ರಚಿಸಿದ ರಾಗಂ ಅವರ ಯೋಗಸ್ಥಃ ಸಂತೆಯಿOದ ಸಂತನೆಡೆಗೆ ಅವೃತ್ತಿಗಳ ಲೋಕಾರ್ಪಣೆ ಸಮಾರಂಭದ ದಿವ್ಯ ಸಾನಿಧ್ಯವನ್ನು ಬೆಂಗಳೂರಿನ ಅಧ್ಯಾತ್ಮಿಕ ಚಿಂತಕರಾದ ಜಂಬುನಾಥ ಮಳಿಮಠ ವಯಿಸಲಿದ್ದಾರೆ.
ಗ್ರಂಥಗಳ ಲೋಕಾರ್ಪಣೆಯನ್ನು ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ಎಸ್. ಪಾಟೀಲ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಾನಾಮಡಗು ದಾಸೋಹಮಠದ ಐಮಡಿ ಶರಣಾರ್ಯರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಡೂರು ಶಾಸಕರಾದ ಅನ್ನಪೂರ್ಣ ತುಕಾರಾಂ, ಜೆ.ಎಂ. ಅನಿಲ್ ಕುಮಾರ ವಕೀಲರು, ಸಮಾಜ ಸೇವಕರಾದ ರಾಮಲಿಂಗಪ್ಪ, ಕೆ.ಮಲ್ಲಿಕಾರ್ಜುನ, ರಮೇಶಬಾಬು ಪೋತರೆಡ್ಡಿ,ಯೋಗೇಶ್ವರ ನಾಯರ್, ವೀರಭದ್ರಗೌಡ, ರಾಜು.ಡಿ.ಎನ್, ಭಾಗವಹಿಸಲಿದ್ದಾರೆ.


ನೇತೃತ್ವವನ್ನು ಸಾಹಿತಿ ಡಾ.ದಿವಾಕರ ನಾರಾಯಣ, ಪ್ರವೀಣಕುಮಾರ್ .ಕೆ.ಎಂ. ಮಧುಕುಮಾರ್, ಸುನೀಲ ಯಾಪಲದಿನ್ನಿ ವಹಿಸಲಿದ್ದಾರೆ.
ಖ್ಯಾತ ಕಾದಂಬರಿಕಾರ ದಿ.ಎಸ್.ಎಲ್ ಬೈರಪ್ಪ, ದಿ. ಖ್ಯಾತ ರಂಗಕರ್ಮಿ ಯಶವಂತಸರದೇಶಪಾOಡೆ, ರವರಿಗೆ ಸ್ಮರಣೆ ಹಾಗೂ ಶ್ರಾದ್ದಂಜಲಿ,
2025 ರಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ -ಸಾಧನೆ ಮಾಡಿದವರಿಗೆ ರಾಜ್ಯ –ರಾಷ್ಟç ಮಟ್ಟದ ಪ್ರಶಸ್ತಿಗಳನ್ನು ಪಡೆದವರಿಗೆ ಸನ್ಮಾನ ಕಾರ್ಯಕ್ರಮ ವಿರುತ್ತದೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಶ್ರೀ ಸಿದ್ದೇಶ್ವರ ಸೇವಾ ಸಮಿತಿ , ಹೊಸಪೇಟೆ ಹಾಗೂ ಪಿ.ಆರ್. ಪಬ್ಲಿಕೇಷನ್ ಬೆಂಗಳೂರು ಸಂಸ್ಥೆಗಳವತಿಯಿOದ ಪ್ರಕಟಣೆಯಲ್ಲಿ ಕೋರಲಾಗಿದೆ.

Share This Article
error: Content is protected !!
";