Ad image

ಏ.5 ರಂದು ಬಾಬೂ ಜಗಜೀವನ್ ರಾಂ ಜಯಂತಿ ಹಾಗೂ ಏ.14 ರಂದು ಡಾ: ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ: ಡಾ: ಕುಮಾರ

Vijayanagara Vani
ಏ.5 ರಂದು ಬಾಬೂ ಜಗಜೀವನ್ ರಾಂ ಜಯಂತಿ ಹಾಗೂ ಏ.14 ರಂದು ಡಾ: ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ: ಡಾ: ಕುಮಾರ
ಜಿಲ್ಲಾಢಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಏಪ್ರಿಲ್ 5 ರಂದು ಬಾಬು ಜಗಜೀವನ್ ರಾಂ ಜಯಂತಿ ಹಾಗೂ ಏಪ್ರಿಲ್ 14 ರಂದು ಡಾ: ಬಿ.ಆರ್ ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ‌ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎರಡು ಜಯಂತಿಗಳ ವೇದಿಕೆ ಕಾರ್ಯಕ್ರಮವನ್ನು ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗುವುದು ಎಂದರು.
*ವಿಚಾರ ಧಾರೆಗಳ ಬಗ್ಗೆ ಮಕ್ಕಳಿಗೆ ತಿಳಿಸಿ* ಡಾ; ಬಿ.ಆರ್ ಅಂಬೇಡ್ಕರ್ ಹಾಗೂ ಬಾಬೂ ಜಗ ಜೀವನ್ ರಾಂ ಅವರ ತತ್ವ ಆದರ್ಶಗಳು ಸರ್ವಕಾಲಕ್ಕೂ ಪ್ರತಿಯೊಬ್ಬರಗೂ ಬೇಕಿದ್ದು, ಮಕ್ಕಳಿಗೆ ಮಹಾನೀಯರ ತತ್ವ ಹಾಗೂ ಆದರ್ಶಗಳ ಬಗ್ಗೆ ತಿಳಿಸಿ ಎಂದರು.
*ಪತ್ರ ಅಭಿಯಾನ* ಶಾಲಾ ಮಕ್ಕಳಿಗೆ ರಜೆ ಇರುವ ಹಿನ್ನಲೆಯಲ್ಲಿ ಮಕ್ಕಳಿಗೆ ; ಬಿ.ಆರ್ ಅಂಬೇಡ್ಕರ್ ಹಾಗೂ ಬಾಬೂ ಜಗ ಜೀವನ್ ರಾಂ ಅವರ ವಿಚಾರಧಾರೆಯ ಕುರಿತು ಪ್ರಬಂಧವನ್ನು ಪತ್ರ ಮುಖೇನ ಪಡೆದು ಆಯ್ಕೆಯಾದವರಿಗೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು ಎಂದರು.
*ಹಾಜರಾತಿ ಕಡ್ಡಾಯ* ಏ.5 ರಂದು ನಡೆಯುವ ಬಾಬೂ ಜಗಜೀವನ್ ರಾಂ ಜಯಂತಿ ಹಾಗೂ ಏ.14 ರಂದು ನಡೆಯುವ ಡಾ: ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಹಾಜರಾತಿ ಕಡ್ಡಾಯ ಎಂದರು.
*ಪುತ್ಥಳಿ ನಿರ್ಮಾಣಕ್ಕೆ ಪ್ರಸ್ತಾವನೆ* ಡಾ: ಬಿ.ಆರ್. ಅಂಬೇಡ್ಕರ್ ಅವರ ಪುತ್ತಳಿಯನ್ನು ಮಂಟಪದೊಂದಿಗೆ ನಿರ್ಮಾಣ ಮಾಡಲು ವಾಸ್ತುಶಿಲ್ಪ ತಜ್ಞರೊಂದಿಗೆ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
*ಸಾಧಕರಿಗೆ ಸನ್ಮಾನ* ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಮಾಜಕ್ಜೆ ಕೊಡುಗೆ ನೀಡಿರುವ ಎಲ್ಲಾ ತಾಲ್ಲೂಕುಗಳನ್ನು ಒಳಗೊಂಡಂತೆ 10 ಜನರನ್ನು ಗುರುತಿಸಿ ಜಿಲ್ಲಾ ಮಟ್ಟದಲ್ಲಿ ಗೌರವಿಸಿ ಸನ್ಮಾನಿಸಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಮೂಲಭೂತ ಹಕ್ಕು, ಮೂಲಭೂತ ಕರ್ತವ್ಯಗಳು, ಸಂವಿಧಾನ ಪೀಠಿಕೆಗಳ ವಿಷಯಗಳ ಸ್ಪರ್ಧೆ ಆಯೋಜಿಸುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯದಲ್ಲಿರುವ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಿರುವ ಸಂವಿಧಾನ ವಿಧಿಗಳ ಬಗ್ಗೆ ಆಶುಭಾಷಣ ಸ್ಪರ್ಧೆಗಳನ್ನು ಆಯೋಜಿಸಿ ಸಣ್ಣ ವಿಡಿಯೋ ತುಣುಕುಗಳನ್ನು ಸಿದ್ಧಪಡಿಸಿ ಎಂದರು‌
ಸಭೆಯಲ್ಲಿ ಸಮುದಾಯದ ಮುಖಂಡರುಗಳು ಸರ್ಕಾರಿ ಕಚೇರಿಗಳಿಗೆ ದೀಪಾಲಂಕಾರ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜಯಂತಿಗೆ ಕಡ್ಡಾಯವಾಗಿ ಹಾಜರಾಗಬೇಕು, ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ, ಹೆದ್ದಾರಿಯಲ್ಲಿ ಕಮಾನು ನಿರ್ಮಾಣ, ಪುಸ್ತಕ ಮೇಳ ಆಯೋಜನೆ, ಶಾಲಾ ಕಾಲೇಜುಗಳಲ್ಲಿ ಅಂಬೇಡ್ಕರ್ ಹಾಗೂ ಬಾಬೂ ಜಗ ಜೀವನ್ ರಾಂ ಜಯಂತಿ ಕುರಿತು ಚರ್ಚಾ, ಆಶುಭಾಷಣ, ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸುವಂತೆ, ಎಲ್.ಇ.ಡಿ ವಾಹನಗಳ ಮೂಲಕ ವಿಚಾರಧಾರೆಗಳ ಪ್ರಚಾರ, ಸಾಧನೆ ಮಾಡಿರುವ ಅಧಿಕಾರಿಗಳ ಸನ್ಮಾನ, ಗ್ರಾಮ ಪಂಚಾಯಿತಿಯ ಎಲ್ಲಾ ಕಚೇರಿಗಳಲ್ಲಿ ಜಯಂತಿ ಆಚರಣೆಯಾಗಬೇಕು ಎಂದು ಮನವಿ‌ ಮಾಡಿದರು.
ಸಭೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಿದ್ದಲಿಂಗೇಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
error: Content is protected !!
";