Ad image

ಮುಂಗಾರು ಬೆಳೆ ಸಮೀಕ್ಷೆಯ ಖಾಸಗಿ ನಿವಾಸಿಗಳಿಗಾಗಿ ಆಪ್ ಅಭಿವೃದ್ಧಿ

Vijayanagara Vani
ಬಳ್ಳಾರಿ,ಆ.19
ಕೃಷಿ ಇಲಾಖೆ ವತಿಯಿಂದ 2025-26ನೇ ಸಾಲಿನ ಮುಂಗಾರು ಹಂಗಾಮಿನ ಖಾಸಗಿ ನಿವಾಸಿಗಳಿಂದ ರೈತರು ಬೆಳೆದ ಬೆಳೆಗಳ ಬಗ್ಗೆ ನಿಖರ ಮಾಹಿತಿಯನ್ನು ಮೊಬೈಲ್ ಆಪ್ ಮೂಲಕ ದಾಖಲಿಸಲು ಇ-ಆಡಳಿತದಿಂದ ಆಪ್ ಅಭಿವೃದ್ಧಿಪಡಿಸಿದ್ದು, ಸೆ.30 ರವರೆಗೆ ಬೆಳೆ ಸಮೀಕ್ಷೆ ಅಪ್‌ಲೋಡ್ ಮಾಡಲು ಕೊನೆಯ ದಿನವಾಗಿದೆ.
ಬೆಳೆ ಸಮೀಕ್ಷೆ ದತ್ತಾಂಶ ಮಾಹಿತಿಯನ್ನು ಬೆಳೆ ವಿಸ್ತರಣೆ ಎಣಿಕೆ ಕಾರ್ಯದಲ್ಲಿ, ಬೆಳೆ ಕಟಾವು ಪ್ರಯೋಗದಲ್ಲಿ, ಪ್ರಕೃತಿ ವಿಕೋಪ ಸಂದರ್ಭದಲ್ಲಿ, ಬೆಳೆಹಾನಿ ವರದಿ ಸಿದ್ಧಪಡಿಸಲು, ಬೆಳೆ ವಿಮಾಯೋಜನೆ, ಬೆಂಬಲ ಬೆಲೆ ಯೋಜನೆ, ಆರ್.ಟಿ.ಸಿ.ಯಲ್ಲಿ ಬೆಳೆ ವಿವರ ದಾಖಲಿಸಲು, ರಾಷ್ಟಿçÃಯ ಹಾಗೂ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಮಂಜೂರು ಮಾಡಲು ಬೆಳೆ ಸಮೀಕ್ಷೆ ಮಾಹಿತಿಯನ್ನು ಉಪಯೋಗಿಸಲಾಗುತ್ತದೆ.
ಖಾಸಗಿ ನಿವಾಸಿಗಳು ತಮ್ಮ ಮೊಬೈಲ್‌ನಲ್ಲಿ ಗೂಗಲ್ ಪ್ಲೇಸ್ಟೋರ್‌ನಿಂದ ಬೆಳೆ ಸಮೀಕ್ಷೆ ಮುಂಗಾರು ಹಂಗಾಮಿನ “ಕ್ರಾಪ್ ಸರ್ವೇ ಖಾರೀಫ್-2025(Crop Survey Kharif-2025) ಆಪ್ ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಜಿಲ್ಲೆಯಲ್ಲಿ 3,57,700 ಬೆಳೆ ತಾಕುಗಳಿದ್ದು, ಮೊಬೈಲ್ ಆಪ್ ನಲ್ಲಿ ಜಿಯೋ ರೆಫೆರೆನ್ಸ್ಡ್ ಅಂಡ್ ಡಿಜಿಟೈಜ್‌ಡ್ ಬೆಳೆಗ್ರಾಮ ನಕಾಶೆ ಅಳವಡಿಸಲಾಗಿರುವುದರಿಂದ ಆಯಾ ತಾಕಿನ ಗಡಿ ರೇಖೆಯೊಳಗೆ ಹೋಗಿ ಜಿಪಿಎಸ್ ನಿಖರತೆ ಪಡೆದು ಛಾಯಾಚಿತ್ರದೊಂದಿಗೆ ಬೆಳೆಯ ವಿವರಗಳನ್ನು ಎಲ್ಲಾ ಬೆಳೆಗಳ ವಿವರಗಳನ್ನು ಕಡ್ಡಾಯವಾಗಿ ದಾಖಲು ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
error: Content is protected !!
";