ಸಂಡೂರು ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಕಿಯಯರ ಫೆಡರೇಷನ್ (ಎಐಟಿಯುಸಿ) ಸಂಡೂರು ತಾಲೂಕು ಘಟಕವು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಸರ್ಕಾರಿ ಶಾಲೆಗಳಲ್ಲಿ ಎಲ್ ಕೆ ಜಿ ಮತ್ತು ಯು ಕೆ ಜಿ ತರಗತಿಗಳನ್ನು ಪ್ರಾರಂಭಿಸಿಸುತ್ತಿರುವುದನ್ನು ವಿರೋಧಿಸಿ ಮನವಿಪತ್ರವನ್ನು ಸಲ್ಲಿಸಿದರು
ಮನವಿಪತ್ರದಲ್ಲಿ ತಿಳಿಸಿದಂತೆ ದೇಶಾದ್ಯಂತ ಕಳೆದ 49 ವರ್ಷಗಳ ಹಿಂದೆ ಪ್ರಾರಂಭವಾಗಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಅಂಗನವಾಡಿ ಕೇಂದ್ರಗಳ ಮೂಲಕ ಗರ್ಬಿಣಿ. ಬಾಣಂತಿ ಮತ್ತು ಆರು ತಿಂಗಳಿಂದ ಆರು ವರ್ಷದ ವಯೋಮಾನದ ಮಕ್ಕಳಿಗೆ ಆರೋಗ್ಯ, ಲಾಲನೆ, ಪಾಲನೆ, ಪೋಷಣೆ, ಕ್ರೀಡೆ, ಕಲಿಕಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ. ದೇಶದಲ್ಲಿ 29 ಲಕ್ಷದಲ್ಲಿ ಹೆಚ್ಚು ಅಂಗನವಾಡಿ ಕೇಂದ್ರಗಳಲ್ಲಿದ್ದು ರಾಜ್ಯದಲ್ಲಿಯೂ ಸಹ ಸುಮಾರು 70 ಸಾವಿರ ಅಂಗನವಾಡಿ ಕೇಂದ್ರಗಳು ಮಹಿಳೆಯರ, ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿವೆ. ಸದರಿ ಅಂಗನವಾಡಿ ಕೇಂದ್ರಗಳು ಮತ್ತಷ್ಟು ಬಲವರ್ಧನೆಗೊಳಿಸಿ ಅಂಗನವಾಡಿ ವ್ಯವಸ್ಥೆಯನ್ನು ಉಳಿಸಿ ಬೆಳೆಸಬೇಕಾದ ಅಗತ್ಯತೆ ಇರುತ್ತದೆ.
ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಅಂಗನವಾಡಿ ಕೇಂದ್ರಗಳ ಶಾಲಾ ಪೂರ್ವಶಿಕ್ಷಣ ವ್ಯವಸ್ಥೆಗೆ ಧಕ್ಕೆ ತರುವಂತಹ ಪ್ರಕ್ರಿಯೆಗಳು ಪ್ರಾರಂಭವಾಗಿದ್ದು, ಸರ್ಕಾರದ ವಿವಿಧ ಇಲಾಖೆಗಳಾದ (ಕಾರ್ಮಿಕ, ಗ್ರಾಮೀಣಾಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ) ಶಿಶುಪಾಲನ ಕೇಂದ್ರಗಳು, ಕೂಸಿನ ಮನೆ, ಶಾಲೆಗಳಲ್ಲಿ ಶಾಲಾ ಪೂರ್ವ ಶಿಕ್ಷಣ, ಇತ್ಯಾದಿ ಬೇರೆ ಬೇರೆ ಹೆಸರುಗಳಲ್ಲಿ ತರಗತಿ ಪ್ರಾರಂಭಿಸಿ ಅಂಗನವಾಡಿ ವ್ಯವಸ್ಥೆಗೆ ಧಕ್ಕೆಯುಂಟಾಗುವಂತೆ ಪ್ರತಿಯಾಗಿ ಶಿಶು ಪಾಲನ ಕೇಂದ್ರ ಹಾಗೂ ಶಾಲಾ ಪೂರ್ವ ತರಗತಿಗಳನ್ನು ಪಾರಂಭಿಸಲಾಗುತ್ತಿದೆ. ಈಗಾಗಲೇ ಸರ್ಕಾರ ಆರಂಭಿಸಿರುವ ಪಬ್ಲಿಕ್ ಶಾಲೆಗಳಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ
ಗಳನ್ನು ನಡೆಸಲಾಗುತ್ತಿದೆ. ಈ ಎಲ್ಲಾ ಪ್ರಕ್ರಿಯೆಗಳಿಂದಾಗಿ ಅಂಗನವಾಡಿ ಕೇಂದ್ರಗಳಿಗೆ ದಾಖಲಾಗಬೇಕಾದ 3 ರಿಂದ ಆರು ವರ್ಷದೊಳಗಿನ ವಯೋಮಾನದ ಮಕ್ಕಳು ವಿಘಟಿತರಾಗಿ ಶಾಸನಾತ್ಮಕವಾಗಿ ರೂಪಿತಗೊಂಡಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸವಲತ್ತುಗಳಿಂದ ವಂಚಿತರಾಗಳಿದ್ದಾರೆ. ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆಯು ಕ್ಷೀಣಿಸಿ ಅಂಗನವಾಡಿ ವ್ಯವಸ್ಥೆ ದುರ್ಬಲಗೊಂಡು ಅಸ್ತವ್ಯಸ್ತಗೊಳ್ಳುವ ಆಪಾಯ ಎದುರಾಗಿದೆ.
ಅಲ್ಲದೇ ಅಂಗನವಾಡಿ ಕೇಂದಗಳು ನಿರ್ವಹಿಸಬೇಕಾದ ಕೆಲಸವನ್ನು ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆಗಳು ಒಂದೇ ವಯಸ್ಸಿನ ಮಕ್ಕಳಿಗೆ ತರಗತಿ ತೆರೆಯುವುದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗಿ ಅನಗತ್ಯವಾಗಿ ಸರ್ಕಾರಿ ಹಣ ಪೋಲಾಗಲಿದೆ. ಈಗಾಗಲೇ ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ (NEP) ಯಲ್ಲಿ ಅಂಗನವಾಡಿಗಳನ್ನು ಶಾಲಾ ಪ್ರಾಂಗಣಕ್ಕೆ ಸೇರಿಸಬೇಕೆಂಬ ಶಿಫಾರಸ್ಸುಗಳು ಸೇರಿದಂತೆ ಅದರಲ್ಲಿರುವ ಹಲವಾರು ನ್ಯೂನ್ಯತೆ, ಜನ ವಿರೋಧಿ ಅಂಶಗಳನ್ನು ಗುರುತಿಸಿ ರಾಜ್ಯದಲ್ಲಿ NEP ಯನ್ನು ಜಾರಿಗೊಳಿಸದಿರಲು ರಾಜ್ಯ ಸರ್ಕಾರ ನಿರ್ಧರಿಸಿದ್ದು. NEP ಗೆ ಪ್ರತಿಯಾಗಿ ರಾಜ್ಯದಲ್ಲಿ ರಾಜ್ಯ ಶಿಕ್ಷಣ ನೀತಿ ರೂಪಿಸಲು ತೀರ್ಮಾನಿಸಿ ಅದಕ್ಕಾಗಿ ಸಮಿತಿಯೊಂದನ್ನು ರಚಿಸಲಾಗಿದೆ.
ರಾಜ್ಯ ಶಿಕ್ಷಣ ನೀತಿ ರೂಪಿತವಾಗುವ ಮುನ್ನವೇ ಶಾಲಾ ಶಿಕ್ಷಣ ಇಲಾಖೆಯು ಅಂಗನವಾಡಿಗಳಿಗೆ ತೆರಳಬೇಕಾದ 3 ರಿಂದ 6 ವರ್ಷ ವಯೋಮಾನದ ಮಕ್ಕಳಿಗಾಗಿ ಶಾಲೆಗಳಲ್ಲಿ ಎಲ್.ಕೆ.ಜಿ- ಯು.ಕೆ.ಜಿ ತರಗತಿಗಳನ್ನು ಪ್ರಾರಂಭಿಸಲು ಅವಕಾಶ ಮಾಡಿಕೊಡುತ್ತಿರುವುದು ಸಮಗ್ರ ಶಿಶು ಅಭಿವೃದ್ಧಿಯಂತಹ ಮಹತ್ವದ ಯೋಜನೆಗೆ ವಿರುದ್ದವಾದ ಪ್ರಕ್ರಿಯೆಯಾಗಿರುತ್ತದೆ. ಶಾಲಾ ಶಿಕ್ಷಣ ಇಲಾಖೆಯು ಪ್ರಾಥಮಿಕ ಶಾಲಾ ಶಿಕ್ಷಣಕ್ಕೆ ಒಂದನೆ ತರಗತಿಗೆ ದಾಖಲಾಗುವ ಮಕ್ಕಳ ವಯೋಮಾನವನ್ನು 6 ವರ್ಷ ಪೂರ್ಣಗೊಂಡಿರಬೇಕೆಂದು ನಿಗಧಿಪಡಿಸಿದೆ. ಇಂತಹ ಸಂದರ್ಭದಲ್ಲಿ ಯಾವ ಶಾಸನ ಸಭೆಗಳಲ್ಲೂ ಸಹ ಚರ್ಚೆಗೆ ಬಾರದೆ ಇನ್ನೂ ರಾಜ್ಯ ಶಿಕ್ಷಣ ನೀತಿ ರೂಪಿಸಿ ಜಾರಿಗೊಳಿಸುವ ಮುಂಚೆಯೇ ಏಕ ಪಕ್ಷೀಯವಾಗಿ ಶಾಲೆಗಳಲ್ಲಿ ಎಲ್.ಕೆ.ಜಿ.-ಯು.ಕೆ.ಜಿ ಗಳನ್ನು ಪ್ರಾರಂಭಿಸಿದರೆ ಮಕ್ಕಳ ಬೆಳವಣಿಗೆಯೂ ಕುಂಠಿತಗೊಳ್ಳುವುದರೊಂದಿಗೆ ಅಂಗನವಾಡಿಗಳು ಸೊರಗಿ ದುರ್ಬಲಗೊಳ್ಳಲಿವೆ.
ಆದ್ದರಿಂದ ರಾಜ್ಯ ಸರ್ಕಾರ SDMC ಮೂಲಕ ಶಾಲೆಗಳಲ್ಲಿ ಎಲ್.ಕೆ.ಜಿ-ಯು.ಕೆ.ಜಿ ಯನ್ನು ಪ್ರಾರಂಭಿಸುವ ಮೂಲಕ ಪ್ರಕ್ರಿಯೆಗಳನ್ನು ತಡೆಯಬೇಕು. ಹಾಗೂ ಹೊಸದಾಗಿ ರೂಪುಗೊಳ್ಳಲಿರುವ ರಾಜ್ಯ ಶಿಕ್ಷಣ ನೀತಿಯ ಅಂಶಗಳನ್ನು ಪರಾಮರ್ಶಿಸಿ ಅಂಗನವಾಡಿಗೆ ದಾಖಲಿಸುವ ಮಕ್ಕಳ ಹಾಗೂ ಶಾಲಾ ಪೂರ್ವ ತರಗತಿಗಳಿಗೆ ಸೇರ್ಪಡೆಗೊಳಿಸುವ ಮಕ್ಕಳ ವಯೋಮಾನ ನಿಗದಿಪಡಿಸುವ ಮೂಲಕ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ (AITUC) ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ. ಹಾಗೂ ಈ ಕುರಿತು ಸರ್ಕಾರ ಒಂದು ದೃಡ ನಿಲುವು ತೆಗೆದುಕೊಳ್ಳಲು ಕೂಡಲೇ, ಅಂಗನವಾಡಿ ಸಂಘಟನೆಗಳು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆಯ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಉಲ್ಬಣಗೊಳ್ಳಲಿರುವ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಕೋರುತ್ತಿದ್ದೇವೆ ಎಂದು ಮನವಿಪತ್ರವನ್ನು ಸಲ್ಲಿಸಿದರು
ಈ ಸಂಧರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ( ಎಐಟಿಯುಸಿ)ಸಂಡೂರು ತಾಲೂಕು ಘಟಕದ ಅಧ್ಯಕ್ಷರಾದ ಜಿ. ನಾಗರತ್ನಮ್ಮ, ಉಪಾಧ್ಯಕ್ಷರಾದ ಈರಮ್ಮ, ಪ್ರಧಾನಕಾರ್ಯದರ್ಶಿ ಟಿ. ಕವಿತಾ, ಕಾರ್ಯದರ್ಶಿ ಶಶಿಕಲಾ, ಸಹಕಾರ್ಯದರ್ಶಿ ಪಿ. ವೆಂಕಟಲಕ್ಷ್ಮೀ, ಜಿ ಹೆಚ್ ಸಾವಿತ್ರಿ, ಮಮತಾ, ಎಂ.ಚಂದ್ರಕಲಾ, ಅನುರಾದ ಎಂ, ಪೂರ್ಣಿಮಾ ಎನ್, ಡಿ ಬಿ ಬಸಮ್ಮ, ಮಲ್ಲಮ್ಮ ಎ ಎಂ, ತಾಯಕ್ಕ, ಸುಜಾತ, ಪದ್ಮ ಹಾಗೂ ಇತರರಿದ್ದರು