ಪಾಮನಕಲ್ಲೂರು: ಪಿಡಿಒಗಳು ಬದಲಾದರೂ ಸಮಸ್ಯೆಗಳಿಗೆ ಸಿಗುತ್ತಿಲ್ಲವೇ ಮುಕ್ತಿ..!?

Vijayanagara Vani
ಪಾಮನಕಲ್ಲೂರು: ಪಿಡಿಒಗಳು ಬದಲಾದರೂ ಸಮಸ್ಯೆಗಳಿಗೆ ಸಿಗುತ್ತಿಲ್ಲವೇ ಮುಕ್ತಿ..!?

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯತಿಯೂ ಇತ್ತೀಚಿನ ವರ್ಷಗಳಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಸಮಸ್ಯೆಗಳಿಂದ ಸುದ್ದಿಯಾಗುತ್ತಲೇ ಇದೆ. ಇಲ್ಲಿನ ಜನರು, ಸಂಘಟನೆಗಳ ಮುಖಂಡರು ಒಂದಲ್ಲಾ ಒಂದು ಸಮಸ್ಯೆಗಳನ್ನು ಹೊತ್ತುಕೊಂಡು ಮುತ್ತಿಗೆ, ಬೇಲಿ, ಕೀಲಿ, ಪ್ರತಿಭಟನೆ ಅಂತ ಪಂಚಾಯತಿಗೆ ಹೋಗುತ್ತಲೇ ಇರುತ್ತಾರೆ.

ಗಾಂಧಿ ಗ್ರಾಮ ಪ್ರಶಸ್ತಿ ಪಡೆದುಕೊಂಡಿರುವ ಇದೇ ಗ್ರಾಮ ಪಂಚಾಯತಿಯ ಈ ಹಿಂದಿನ ಕೆಲವು ಜನ ಪಿಡಿಒಗಳು ವಿಡಿಯೋ, ಆಡಿಯೋಗಳಿಂದಲೇ ಅಮಾನತ್ತು ಕೂಡ ಆಗಿದ್ದರು. ಕೆಲವರು ವರ್ಗಾವಣೆ ಕೂಡ ಆಗಿದ್ದರು. ಪರ್ಸೆಂಟೆಜ್ ಪಿಡಿಒ, ಅವಾಚ್ಯ ಪದಗಳ ಪಿಡಿಒ ಎಂಬ ಹಣೆಪಟ್ಟಿ ಕಟ್ಟಿಕೊಂಡು ಕೆಲವರು ಹೋಗಿದ್ದಾರೆ.

ಇಷ್ಟೆಲ್ಲದರ ನಡುವೆಯೇ ಪಾಮನಕಲ್ಲೂರು ಗ್ರಾಮ ಪಂಚಾಯತಿಯಿAದ ಕೋಟಿ ಕೋಟಿ ರೂ.ಗಳು ಲೆಕ್ಕದಲ್ಲಿ ಅನುದಾನ (ಹಣ) ಖರ್ಚಾಗಿ ಹೋಗಿದೆ. ಆದರೇ ಖರ್ಚಾದ ದುಡ್ಡಿನಿಂದ ಏನು ಅಭಿವೃದ್ಧಿಯಾಗಿದೆ ಎಂಬುದAತು ಇನ್ನೂ ನಿಗೂಡ ರಹಸ್ಯವಾಗಿಯೇ ಉಳಿದಿದೆ. ಖರ್ಚಾದ ದುಡ್ಡಿನ ಲೆಕ್ಕಪತ್ರದ ಬಗ್ಗೆ ಅನೇಕರಲ್ಲಿ ಅಸಮಧಾನವಿದೆ ಎಂಬ ಸುದ್ದಿ ಬೂದಿ ಮುಚ್ಚಿದ ಕೆಂಡದAತೆ ಇದೆ.

ಇವೆಲ್ಲವುಗಳ ನಡುವೆಯೇ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು, ವೃದ್ಧರು ನೀರಿಗಾಗಿ ಪಂಚಾಯತಿಗೆ ಅನೇಕ ಬಾರಿ ಮುತ್ತಿಗೆ ಹಾಕಿದ್ದಾರೆ. ಇತ್ತೀಚಿಗೆ ಗ್ರಾಮದ ಕೆಲ ಮಹಿಳೆಯರು ಪಂಚಾಯತಿಗೆ ಬೇಲಿ, ಕೀಲಿ ಹಾಕಿ ಪ್ರತಿಭಟನೆ ಮಾಡಿದ್ದರು. ಇವೆಲ್ಲವುಗಳ ನಡುವೆಯೇ ಸುಳಿವೇ ಇಲ್ಲದಂತೆ ಪಿಡಿಒ ಬದಲಾವಣೆಯಾಗಿದ್ದಾರೆ.

ಇತ್ತೀಚಿಗೆ ಪಾಮನಕಲ್ಲೂರು ಗ್ರಾಮ ಪಂಚಾಯತಿಗೆ ಈ ಮುಂಚೆಯೂ ಪಿಡಿಒ ಆಗಿ ಸೇವೆ ಸಲ್ಲಿಸಿ ಹೋಗಿದ್ದ ಕೃಷ್ಣ ಹೆಚ್ ಹುನಗುಂದ ಎಂಬುವವರು ಮತ್ತೊಮ್ಮೆ ಪಿಡಿಒ ಆಗಿ ಬಂದಿದ್ದಾರೆ. ಅವರು ಬಂದ ನಂತರವೂ ಇತ್ತೀಚಿಗೆ ಗ್ರಾಮದ ಅನೇಕ ಜನ ಹಿರಿಯರು, ಗ್ರಾಮದ ಶಿವಕುಮಾರ್ ಜಾಹಗೀರದಾರ್, ಗಣೇಶಯ್ಯ ತಾತ, ಅಮರೇಶ ಚಿಕಲಪರ್ವಿ, ಶರಣಪ್ಪ ಕಮತರ್, ಮಲ್ಲಣ್ಣ ಮರೆಡ್ಡಿ, ಅಮರೇಗೌಡ ಪೊಲೀಸ್ ಪಾಟೀಲ್, ನಾಗಪ್ಪ, ಹುಲಗಪ್ಪ ಸಾನಬಾಳ, ಅಯ್ಯಪ್ಪ ಕುರುಬರ, ಗಂಗಪ್ಪ ಬಡಿಗೇರ, ಅಮರಯ್ಯಸ್ವಾಮಿ ಗುಡಿ, ಚಂದ್ರು ಸ್ವಾಮಿ, ಶರಣಪ್ಪ ಮುಷ್ಟಳ್ಳಿ, ಶೇಖರಪ್ಪ ಮರೆಡ್ಡಿ ಸೇರಿದಂತೆ ಅನೇಕರ ಸಮ್ಮುಖದಲ್ಲಿ ಭೇಟಿ ನೀಡಿ ನೀರಿನ ಸಮಸ್ಯೆ ಪರಿಹರಿಸುವಂತೆ ಮನವಿ ಕೂಡ ಮಾಡಿದ್ದಾರೆ.

ಇದೀಗ ಪಿಡಿಒ ಕೃಷ್ಣ ಹೆಚ್ ಹುನಗುಂದರವರ ಮೇಲೆ ಗ್ರಾಮದ ಮತ್ತು ಪಂಚಾಯತಿ ವ್ಯಾಪ್ತಿಯ ಹಳ್ಳಿಗಳ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು, ನಮ್ಮ ಸಮಸ್ಯೆಗಳಿಗೆ ಇವರು ಮುಕ್ತಿ ಕೊಡಿಸಬಹುದು ಎಂಬ ಭರವಸೆಯಲ್ಲಿಯೇ ಕಾಯುತ್ತಿದ್ದಾರೆ. ಸಾಕಷ್ಟು ಜನ ಪಿಡಿಒಗಳು ಬದಲಾದರು ಸಮಸ್ಯೆಗಳಿಂದ ಮುಕ್ತಿ ಕಾಣದ ಪಾಮನಕಲ್ಲೂರು ಗ್ರಾಮ ಪಂಚಾಯತಿಗೆ ಪಿಡಿಒ ಕೃಷ್ಣರವರಾದರು ಮುಕ್ತಿ ಕೊಡಿಸಬಲ್ಲರೇ ಎಂಬುದನ್ನು ಕಾಯ್ದು ನೋಡಬೇಕಾಗಿದೆ.

ಕೃಷ್ಣರವರಿಗೆ ಇರುವ ಸವಾಲುಗಳೇನೇನು..!?

ಪಾಮನಕಲ್ಲೂರು ಗ್ರಾಮ ಪಂಚಾಯತಿಗೆ ಪಿಡಿಒ ಆಗಿ ಆಗಮಿಸಿದ ಕೃಷ್ಣ ಹೆಚ್ ಹುನಗುಂದರವರಿಗೆ ಪಾಮನಕಲ್ಲೂರು ಗ್ರಾಮ ಹಾಗೂ ಪಂಚಾಯತಿ ವ್ಯಾಪ್ತಿ ಅನೇಕ ಹಳ್ಳಿಗಳಲ್ಲಿ ಅನೇಕ ಸಮಸ್ಯೆಗಳು ಸವಾಲಾಗಿವೆ. ಅವುಗಲ್ಲಿ ಕುಡಿಯುವ ಹಾಗೂ ಬಳಕೆಯ ನೀರಿನ ಸಮಸ್ಯೆ, ಚರಂಡಿ ಸ್ವಚ್ಛತೆ ಪ್ರಮುಖ ಸವಾಲುಗಳಾಗಿ ಕಂಡುಬರುತ್ತವೆ.

ಇನ್ನೂಳಿದAತೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸಮರ್ಪಕ ನಿರ್ವಹಣೆ, ರೈತರ ಜಮೀನುಗಳಿಗೆ ತೆರಳುವ ರಸ್ತೆಗಳ ದುರಸ್ಥಿ, ಗ್ರಾಮಗಳ ಶಾಲೆಗಳಿಗೆ ಕುಡಿಯುವ ಹಾಗೂ ಬಳಕೆ ನೀರಿನ ಸೌಕರ್ಯ, ಶೌಚಾಲಯಗಳ ಸೌಲಭ್ಯ ಸೇರಿದಂತೆ ಇನ್ನೂ ಸಮಸ್ಯೆಗಳ ಪಟ್ಟಿ ದೊಡ್ಡದಾಗಿವೆ.

ಅವುಗಳನ್ನು ಪಿಡಿಒ ಕೃಷ್ಣರವರು ಹಂತಹAತವಾಗಿ ಪರಿಹರಿಸಿ ಜನರ ನಿರೀಕ್ಷೆಯಂತೆ ಒಳ್ಳೆಯ, ಜನಮೆಚ್ಚುಗೆಯ ಪಿಡಿಒ ಎಂಬ ಹೆಗ್ಗಳಿಕೆ ಪಡೆದುಕೊಳ್ಳುತ್ತಾರೆಯೇ. ಇಲ್ಲವೇ ಈ ಹಿಂದೆ ಕಳಂಕ ಹೊತ್ತು ಕಾಲ್ಕಿತ್ತಿದ ಕೆಲ ಪಿಡಿಒಗಳಂತೆ ಅವರು ಕೂಡ ಕಳಂಕ ಸಹಿತ ಪಿಡಿಒ ಆಗ್ತಾರೋ ಎಂಬುದನ್ನು ಕೂಡ ಕಾಯ್ದು ನೋಡಬೇಕಾಗಿದೆ.

ಒಟ್ಟಾರೆಯಾಗಿ ಹತ್ತಾರು ನಿರೀಕ್ಷೆಗಳು, ನೂರಾರು ಕನಸುಗಳನ್ನು ಹೊಂದಿರುವ ಪಂಚಾಯತಿ ವ್ಯಾಪ್ತಿಯ ಜನರಿಗೆ ಸೂಕ್ತ ಮೂಲಭೂತ ಸೌಕರ್ಯ ಒದಗಿಸಿ. ಯಾವುದೇ ರಾಜಕೀಯ ಮಾಡದೇ ಬೇಧ – ಭಾವ ಮಾಡದೇ ಎಲ್ಲರೂ ಒಂದೇ ಎಂಬ ನಿಟ್ಟಿನಲ್ಲಿ ಎಲ್ಲರನ್ನೂ ಗಮನಕ್ಕೆ ತೆಗೆದುಕೊಂಡು ಅತ್ಯುತ್ತಮ ಪಿಡಿಒ ಎಂಬ ಹೆಗ್ಗಳಿಕೆ ಕೃಷ್ಣರವರು ಪಡೆದುಕೊಳ್ಳಲಿ. ಆ ನಿಟ್ಟಿನಲ್ಲಿ ಅವರು ಕೆಲಸ ಮಾಡಲಿ ಎಂಬುದು ಈ ವರದಿಯ ಆಶಯವಾಗಿದೆ

WhatsApp Group Join Now
Telegram Group Join Now
Share This Article
error: Content is protected !!