ಕಾರಟಗಿ : ಪಟ್ಟಣದ ಶಾಂತಿನಿಕೇತನ ಪಬ್ಲಿಕ್ ಶಾಲೆಯಲ್ಲಿ 10 ನೇ ತರಗತಿ ಮಕ್ಕಳ ಪಾಲಕರಿಗೆ ಪಾದಪೂಜೆ ಹಾಗೂ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರಟಗಿ ಜೆ ಪಿ ನಗರದ ಶ್ರೀದೇವಿ ದೇವಸ್ಥಾನದ ಅರ್ಚಕರಾದ ಶ್ರೀ ಚನ್ನಬಸಯ್ಯತಾತ ನವರ ಉಪಸ್ಥಿತಿಯಲ್ಲಿ ವಿಧಿಬದ್ದವಾಗಿ ಪಾಲಕರಿಗೆ ಪಾದಪೂಜೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರೀ ಚನ್ನಬಸಯ್ಯತಾತ ನವರು ತಂದೆ ತಾಯಿ ಪ್ರತಿಯೊಬ್ಬ ಜೀವನದಲ್ಲಿ ಪೂಜ್ಯನೀಯ ಭಾವನೆ ಹೊಂದಬೇಕು ದೇವರ ಸ್ವರೂಪಿಗಳಾದ ಇವರನ್ನು ಪೂಜಿಸುವದು ಪುಣ್ಯದ ಕೆಲಸ ಎಂದು ಹೇಳಿದರು.
ಪಾಲಕರು ಮಾತನಾಡಿ ಮಕ್ಕಳನ್ನು ಕೇವಲ ಅಭ್ಯಾಸದ ಕಡೆ ಗಮನ ಹರಿಸದೆ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವ ಈ ಶಾಲೆಯನ್ನು ಪ್ರಶಂಸೆ ಮಾಡಬೇಕು ಎಂದು ಹೇಳಿದರು.
ಸಂಸ್ಥೆ ಅಧ್ಯಕ್ಷರಾದ ಶರಣಪ್ಪ ಅಂಗಡಿ ಮಾತನಾಡಿ ಈಗಿನ ಆಧುನಿಕ ಜೀವನದಲ್ಲಿ ಮಕ್ಕಳಲ್ಲಿ ಕುಟುಂಬ ಮೌಲ್ಯಗಳನ್ನು ಹಾಗೂ ಜನ್ಮನೀಡಿದ ತಂದೆ ತಾಯಿ ಜೀವನದ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುವದು ಈ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿಗಳಾದ ಶರಣಯ್ಯ, ಆಡಳಿತ ಅಧಿಕಾರಿಗಳು ಶಿವಲೀಲಾ ಎಸ್ ಅಂಗಡಿ ಶಿಕ್ಷಕರಾದ ಗಂಗಮ್ಮ, ಬಸವರಾಜ ಅನ್ವರಿ, ಗುರುಪ್ರಸಾದ, ಕುಮಾರಿ ಪಲ್ಲವಿ, ಕುಮಾರಿ ದೀಪಾ ಜಿ, ಪೂಜಾ ಹಾಗೂ,ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳು ಹಾಗೂ ಪಾಲಕರು ಮಕ್ಕಳು ಪಾಲ್ಗೊಂಡಿದ್ದರು.