ಧಾರವಾಡ ಅಕ್ಟೋಬರ್ 03: ಹುಬ್ಬಳ್ಳಿ ಕೇಶ್ವಾಪುರದ ವಾಸಿ ಮತ್ತು ಅಲ್ಲಿಯ ವ್ಯಾಪಾರಿ ಅರವಿಂದಕುಮಾರ ಜೈನ್‍ರವರು 23,456/- ವಿಮಾ ಹಣ ತುಂಬಿ 2023-24ನೇ ಅವಧಿಗೆ ಎದುರುದಾರ ಸ್ಟಾರ್ ಹೆಲ್ತ್ ವಿಮಾ ಕಂಪನಿಯಿಂದ ಡಯಾಬಿಟಿಸ್ ಸೇಫ್‍ಆರೋಗ್ಯ ವಿಮೆ ಪಡೆದಿದ್ದರು. ದಿ:24/03/2023ರಂದು ದೂರುದಾರ ಅನಾರೋಗ್ಯದ ನಿಮಿತ್ಯ ಹುಬ್ಬಳ್ಳಿಯ ಶುಚಿರಾಯು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಸೇರಿ ದ:29/03/2023ರವರೆಗೆ ಚಿಕಿತ್ಸೆ ಪಡೆದಿದ್ದರು. ಅವರಿಗೆ ಸೆರೆಬ್ರೆಲ್ ವೆಸ್ಕ್ಯುಲರ್ ಆಕ್ಸಿಡೆಂಟ್ ಕಾಯಿಲೆ ಆಗಿದೆ ಅಂತಾ ಅಲ್ಲಿಯ ವೈದ್ಯರು ಚಿಕಿತ್ಸೆ ಕೊಟ್ಟಿದ್ದರು. ಈ ಬಗ್ಗೆ ದೂರುದಾರ ರೂ.76,916/-ಗಳನ್ನು ಆಸ್ಪತ್ರೆಯ ಖರ್ಚು ವೆಚ್ಚ ಮಾಡಿದ್ದರು. ತನ್ನ ಆರೋಗ್ಯ ವಿಮೆ ಚಾಲ್ತಿಯಿರುವುದರಿಂದ ಆ ಹಣವನ್ನು ವೈದ್ಯಕೀಯ ವೆಚ್ಚ ಅಂತಾ ಕೊಡಲು ಕೋರಿ ದೂರುದಾರ ಅಗತ್ಯ ದಾಖಲೆಗಳೊಂದಿಗೆ ಎದುರುದಾರ ಸ್ಟಾರ್ ಹೆಲ್ತ್ ವಿಮಾ ಕ್ಲೇಮ್ ಸಲ್ಲಿಸಿದ್ದರು. ಕ್ಲೇಮನ್ನು ಪರಿಶೀಲಿಸಿದ ವಿಮಾ ಕಂಪನಿಯವರು ವಿಮೆ ಪಡೆಯುವಾಗ ದೂರುದಾರರಿಗೆ ಬಿ.ಪಿ ಕಾಯಿಲೆ ಇತ್ತು. ಆ ಸಂಗತಿಯನ್ನು ಅವರು ವಿಮೆ ಪಡೆಯುವಾಗ ತಿಳಿಸಿಲ್ಲ ಅನ್ನುವಕಾರಣ ಹೇಳಿ ಎದುರುದಾರ ವಿಮಾ ಕಂಪನಿಯವರು ದೂರುದಾರರ ಕ್ಲೇಮನ್ನು ತಿರಸ್ಕರಿಸಿದ್ದರು. ಎದುರುದಾರರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ದಿ:04/09/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಬೋಳಶೆಟ್ಟಿ ಮತ್ತು .ಪ್ರಭು. ಹಿರೇಮಠ ಸದಸ್ಯರು, ದೂರುದಾರರು ಎದುರುದಾರ ವಿಮಾ ಕಂಪನಿಯಿಂದ ಪಡೆದಿರುವ ಆರೋಗ್ಯ ವಿಮೆ ಚಾಲ್ತಿಯಿದೆ. ಈಗಿನ ಒತ್ತಡದ ದಿನಮಾನದಲ್ಲಿ ಬಿ.ಪಿ. ಕಾಯಿಲೆ ಸರ್ವೆ ಸಾಮಾನ್ಯ. ಬಿ.ಪಿ. ಕಾಯಿಲೆಯಿಂದ ದೂರುದಾರರಿಗೆ ಸೆರೆಬ್ರೆಲ್ ವ್ಯಾಸ್ಕೂಲರ್ ಆಕ್ಸಿಡೆಂಟ್ ಕಾಯಿಲೆ ಬಂದಿದೆ ಅನ್ನುವುದನ್ನು ರುಜುವಾತು ಪಡಿಸಲು ಎದುರುದಾರರು ವಿಫಲರಾಗಿದ್ದಾರೆ. ವಿಮಾ ಕಂಪನಿಯ ನಿಯಮಾನುಸಾರ ಮತ್ತು ದೂರುದಾರರ ಆರೋಗ್ಯ ವಿಮೆ ಚಾಲ್ತಿಯಿರುವುದರಿಂದ ಅವರು ಚಿಕಿತ್ಸೆಯ ಖರ್ಚು ವೆಚ್ಚವನ್ನು ಎದುರುದಾರರಿಂದ ಪಡೆಯಲು ಅರ್ಹರಿದ್ದಾರೆ. ಆದರೆ ದೂರುದಾರರ ಕ್ಲೇಮನ್ನು ತಿರಸ್ಕರಿಸಿರುವ ಎದುರುದಾರ ಸ್ಟಾರ್ ಹೆಲ್ತ್ ವಿಮಾ ಕಂಪನಿಯ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ.
ದೂರುದಾರರ ವೈದ್ಯಕೀಯ ವೆಚ್ಚ ರೂ.76,916/- ಮತ್ತು ಅದರ ಮೇಲೆ ಕ್ಲೇಮು ತಿರಸ್ಕರಿಸಿದ ದಿ:31/05/2023 ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ10% ಬಡ್ಡಿ ಲೆಕ್ಕ ಹಾಕಿ ಸಂದಾಯ ಮಾಡುವಂತೆ ಆಯೋಗ ಎದುರುದಾರರಾದ ಸ್ಟಾರ್ ಹೆಲ್ತ ವಿಮಾ ಕಂಪನಿಗೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ನಾನು ಕೂಲ ಮತು ್ತತೊಂದರೆಗಾಗಿ ರೂ.50,000/- ಪರಿಹಾರ ಹಾಗೂ ರೂ.10,000/- ಈ ಪ್ರಕರಣದ ಖರ್ಚು ವೆಚ್ಚ ನಿಡುವಂತೆ ಎದುರುದಾರರಿಗೆ ನಿರ್ದೇಶಿಸಿದೆ.
**