ವಿಜಯನಗರ(ಹೊಸಪೇಟೆ), ಆ.19 : ಬಿಎಂಎಂ ಇಸ್ಪಾತ್ ಲಿಮಿಟೆಡ್ ಹೊಸಪೇಟೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ಡಾಣಾಪುರ ಗ್ರಾಮದ ಸರ್ವೆ ನಂ.201/ಎ ಮತ್ತು 2021/ಬಿ ಎಕರೆ ಜಮೀನನಲ್ಲಿ 10 ಕೆಎಲ್ ಸಾಮರ್ಥ್ಯದ ಪೆಟ್ರೋಲಿಯಂ ಕ್ಲಾಸ್ ಬಿ ಮತ್ತು 50 ಕೆಎಲ್ ಸಾಮರ್ಥ್ಯದ ಪೆಟ್ರೋಲಿಯಂ ಕ್ಲಾಸ್ ಸಿ, ಒಟ್ಟು 60 ಕೆಎಲ್ ಸಾರ್ಮಥ್ಯದ ಹೆಚ್.ಎಸ್.ಡಿ ಮತ್ತು ಹೆಚ್.ಎಫ್.ಓ ದಾಸ್ತಾನು ಮಾಡಲು ನಿರಾಪೇಕ್ಷಣ ಪ್ರಮಾಣ ಪತ್ರ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿರುತ್ತಾರೆ.
ಈ ಜಮೀನಿನಲ್ಲಿ ಹೆಚ್.ಎಸ್.ಡಿ ಮತ್ತು ಹೆಚ್.ಎಫ್.ಓ ದಾಸ್ತಾನು ಮಾಡಲು ನಿರಾಪೇಕ್ಷಣಾ ಪ್ರಮಾಣ ಪತ್ರ ನೀಡಲು ಸಾರ್ವಜನಿಕರಿಂದ ಅಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಏಳು ದಿನದೊಳಗಾಗಿ ಯಾವುದೇ ಅಕ್ಷೇಪಣೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಇಮೇಲ್ ಐಡಿ : [email protected] ಅಥವಾ ಕಾರ್ಯಾಲಯದ ಎಂಎಜಿ-2 ಶಾಖೆಗೆ ಸಲ್ಲಿಸಲು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ