ರಾಯಚೂರು ಜುಲೈ 01 : ನಗರದ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಿನಾಂಕ:17.06.2025 ರಂದು ರಿಮ್ಸ್ ಆಸ್ಪತ್ರೆಯ 5 ನೇ ಮಹಡಿಯ ರೂಮ್ ನಂ-503ರ ಜನರಲ್ ವಾರ್ಡ್ನಲ್ಲಿ ಚಿಕಿತ್ಸೆಗಾಗಿ ವಿಷ್ಣು ನಾಯ್ಕ ತಂದೆ ನರಸಿಂಹ ನಾಯ್ಕ (09) ಎಂಬ ಬಾಲಕನ್ನು ದಾಖಲು ಮಾಡಿದ ಯುವಕ ಕಾಣೆಯಾಗಿದ್ದು, ಈ ಕುರಿತು ಠಾಣೆಯಲ್ಲಿ ಗುನ್ನೆ ಸಂಖ್ಯೆ: 66/2025 ಕಲಂ 137 (2) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 21ರ ರಾತ್ರಿ ಮಂಚದ ಮೇಲೆ ಮಲಗಿಕೊಂಡಾಗ ಜೂನ್ 22ರ ಬೆಳಗಿನ ಜಾವ 03ಗಂಟೆಗೆ ಎದ್ದು ನೋಡಿದಾಗ ವಿಷ್ಣು ನಾಯ್ಕ ಕಾಣಲಿಲ್ಲ, ಗಾಬರಿಯಾಗಿ ಆಸ್ಪತ್ರೆಯ ತುಂಬಾ ಎಲ್ಲಾ ಕಡೆ ಹುಡುಕಾಡಲಾಗಿ ತನ್ನ ಮಗನ ಸುಳಿವು ಸಿಗಲಿಲ್ಲ. ತನ್ನ ಮಗನನ್ನು ಯಾರೋ ಅಪರಿಚಿತರು ಯಾವುದೋ ಕಾರಣಕ್ಕಾಗಿ ಅಪಹರಣ ಮಾಡಿಕೊಂಡು ಹೋಗಿರುವ ಸಾದ್ಯತೆ ಇರುತ್ತದೆ ಎಂದು ತಾಯಿ ನಾಗಲಕ್ಷಿö್ಮÃ ಅವರು ದೂರಿನ ಸಾರಾಂಶದಲ್ಲಿ ವಿವರಿಸಿದ್ದಾರೆ.
ಬಾಲಕನ ಚಹರೆ ಪಟ್ಟಿ: 4 ಫೀಟ 2 ಇಂಚು ಎತ್ತರ, ಸಾದಾ ಕಪ್ಪು ಮೈ ಬಣ್ಣ, ಕೋಲು ಮುಖ, ತೆಳ್ಳನೆಯ ಮೈಕಟ್ಟು, ತಲೆಯಲ್ಲಿ ಕಪ್ಪು ಕೂದಲು, ಬಿಳಿ ಬಣ್ಣದ ಶರ್ಟ, ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದು, ಎಡ ಕೈ ಮಣಿಕಟ್ಟು ಮತ್ತು ಬಲಗೈ ಮುಂದಿನ ಮೂರು ಬೆರಳುಗಳಿಗೆ ಸುಟ್ಟಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಾಲಕ್ಕೆ ಸುತ್ತಿದ್ದ ಸರ್ಜಿಕಲ್ ಕ್ಲಾಥ್ (ಬ್ಯಾಂಡೇಜ್) ಹಾಗೇ ಇರುತ್ತದೆ.
ಈ ಬಾಲಕನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ಪಿ.ಎಸ್.ಐ ಮಾರ್ಕೆಟ್ ಯಾರ್ಡ ಠಾಣೆ ದೂರವಾಣಿ ಸಂಖ್ಯೆ: 08532-235600, ಪಿಎಸ್‌ಐ ಮೊಬೈಲ್ ಸಂಖ್ಯೆ: 9480803849, ಸಿಪಿಐ ಪಚ್ಚಿಮ ವೃತ್ತ ದೂರವಾಣಿ ಸಂಖ್ಯೆ: 08532-226856, ಮೊಬೈಲ್ ಸಂಖ್ಯೆ: 9480803831ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.