Ad image

ಜನಸಂಖ್ಯಾ ನಿಯಂತ್ರಣ ಸಾಮಾಜಿಕ ಹೊಣೆಗಾರಿಕೆ ಆಗಬೇಕಿದೆ. ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಂಕರ್ ನಾಯ್ಕ ಹೇಳಿಕೆ.

Vijayanagara Vani
ವಿಜಯನಗರ (ಹೊಸಪೇಟೆ), ಜು.11  : ಆರೋಗ್ಯಕರ ಜೀವನ ಮತ್ತು ಸಣ್ಣ ಕುಟುಂಬಗಳ ಪ್ರಾಮುಖ್ಯತೆ ಮತ್ತು ಜನಸಂಖ್ಯಾ ಸ್ಪೋಟದಿಂದಾಗುವ ಅಪಾಯಗಳು, ಕುಟುಂಬ ಯೋಜನೆಗೆ ಆದ್ಯತೆ, ಲಿಂಗ ಅಸಮಾನತೆ, ಬಡತನ, ಶಿಶು ಮರಣ, ಮಾನವ ಹಕ್ಕುಗಳು ಸೇರಿ ಇತರೆ ಸಂಗತಿಗಳ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ಜನಸಂಖ್ಯಾ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಂಕರ್ ನಾಯ್ಕ ಹೇಳಿದರು.
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ವಿಶ್ವದಾದ್ಯಂತ ಪ್ರತಿ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ಆಚರಣೆ ಬಳಿಕ ಜನಸಂಖ್ಯೆ ಬೆಳವಣಿಗೆಯಲ್ಲಿ ಕುಸಿತ ಕಂಡುಬAದಿದೆ. ಜಗತ್ತಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವುದು ಪ್ರಸ್ತುತ ದಿನಗಳಲ್ಲಿ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮೂರು ದಶಕಗಳಿಂದ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ವಿಶ್ವ ಜನಸಂಖ್ಯಾ ದಿನವನ್ನು ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. 1987 ರ ಜುಲೈ 11 ರಂದು ವಿಶ್ವ ಜನಸಂಖ್ಯೆಯು 500 ಕೋಟಿಯನ್ನು ತಲುಪಿತ್ತು. ಇದರ ಜನಸಂಖ್ಯಾ ಹೆಚ್ಚಳದ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯು, ತನ್ನ ಅಂಗ ಸಂಸ್ಥೆಯಾದ ‘ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಮಂಡಳಿ’ಯ ಮೂಲಕ 1989 ಜುಲೈ 11 ರಂದು ಮೊದಲ ಬಾರಿ ಜನಸಂಖ್ಯಾ ದಿನವನ್ನು ಆಚರಿಸಲಾಯಿತು. ಅಂದಿನಿAದ ಇಚೇಗೆ ಜಗತ್ತಿನಾದ್ಯಂತ 200ಕ್ಕೂ ಹೆಚ್ಚು ದೇಶಗಳಲ್ಲಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತದೆ. ಜನರಲ್ಲಿ ಲೈಂಗಿಕತೆ, ಸಂತಾನೋತ್ಪತ್ತಿ ಮತ್ತು ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದ ಅನಿರ್ವಾತೆ ಇದೆ. ಜನಸಂಖ್ಯೆ ಏರಿಕೆಗೆ ಲಿಂಗ ಅಸಮಾನತೆ, ಬಾಲ್ಯವಿವಾಹ, ಆರೋಗ್ಯದ ಹಕ್ಕು, ಮಗುವಿನ ಆರೋಗ್ಯದ ಮೇಲಿನ ಪರಿಣಾಮಗಳು, ಕುಟುಂಬ ಯೋಜನೆ ಇಲ್ಲದೇ ಇರೋದು, ಮಾನವ ಹಕ್ಕುಗಳು ಪ್ರಮುಖ ಕಾರಣಗಳಾಗಿವೆ. 2025ರ ವಿಶ್ವ ಜನಸಂಖ್ಯೆ ಅದಾಂಜು 8.23 ಶತಕೋಟಿ ನೀರಿಕ್ಷೆ ಇದೆ. ಜನಸಂಖ್ಯಾ ನಿಯಂತ್ರಣ ಕೇವಲ ಸರ್ಕಾರಗಳು ಮತ್ತು ಇಲಾಖೆಗಳಿಂದಷ್ಟೇ ಸಾಧ್ಯವಿಲ್ಲ. ಸಾಮಾಜಿಕ ಹೊಣೆಗಾರಿಕೆಯಿಂದ ಸಾಧಿಸಬಹುದಾಗಿದೆ ಎಂದರು.
ಆರ್‌ಸಿಹೆಚ್ ಅಧಿಕಾರಿ ಡಾ.ಜಂಬಯ್ಯ ಮಾತನಾಡಿ, ವಿಜಯನಗರ ಜಿಲ್ಲೆ ಜನಸಂಖ್ಯೆ 2025 ರ ಅಂದಾಜು 24.48 ಲಕ್ಷಗಳು ಇದೆ. ಜನಸಂಖ್ಯೆ ನಿಯಂತ್ರಣವನ್ನು ತಾತ್ಕಾಲಿಕ ವಿಧಾನದಿಂದ ಅಂತರ ಕಾಪಾಡಿಕೊಂಡರೆ ಸದೃಢ ಮಕ್ಕಳು ಜನಿಸಲು ಅನುಕೂಲವಾಗುತ್ತದೆ. ‘ತಾಯಿಯಾಗುವ ವಯಸ್ಸು : ದೇಹ ಮತ್ತು ಮನಸ್ಸಿನ ಸಿದ್ದತೆ’ ತಾಯಂದಿರಿಗೆ ಹೆರಿಗೆ ಅಂತರದ ವಿಧಾನಗಳ ಬಗ್ಗೆ ಕಾಪರಟಿ, ನಿರೋಧ್, ಪಿಪಿಐಸಿಯುಡಿ, ಐಯುಡಿ ಮಾತ್ರೆಗಳ ಬಳಕೆ ಮತ್ತು ಚುಚ್ಚುಮದ್ದು(ಎಂಪಿಎ) ಹಾಗೂ ಮಹಿಳೆಯರಿಗೆ ಸಂತಾನ ಹರಣ ಶಸ್ತçಚಿಕಿತ್ಸೆಯ ಲ್ಯಾಪ್ರೋಸ್ಕೋಪ ಹಾಗೂ ಪುರುಷರಿಗೆ ಸಂತಾನ ಹರಣ ಶಸ್ತç ಚಿಕಿತ್ಸೆ, ನೋ ಸ್ಕಾಲ್ ಪೆಲ್ ವ್ಯಾಸೆಕ್ಟಮಿ ಬಗ್ಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಈ ವೇಳೆ ಕುಷ್ಟರೋಗ ನಿಯಂತ್ರಣ ಅಧಿಕಾರಿ ಡಾ.ರಾಧಿಕಾ, ಜಿಲ್ಲಾ ಆರೋಗ್ಯ ನೀರಿಕ್ಷಣಾಧಿಕಾರಿ ಎಂ.ಧರ್ಮನಗೌಡ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ.ನೂರ್ ಬಾಷಾ, ಶುಶ್ರೂಣಾಧಿಕಾರಿ ವೀಣಾ ಆರೋಗ್ಯ ಸಿಬ್ಬಂದಿ ಸಹದೇವ ಹಾಜರಿದ್ದರು.

Share This Article
error: Content is protected !!
";